ರಿಪ್ಪನ್‌ಪೇಟೆ ಪದವಿ ಕಾಲೇಜಿನ ಅಮೋಘ ಸಾಧನೆ : ಬಿ ಎ ವಿಭಾಗದಲ್ಲಿ ಎರಡು ರ‍್ಯಾಂಕ್ ಪಡೆದ ಕಾಲೇಜು
ರಿಪ್ಪನ್‌ಪೇಟೆ : ಕುವೆಂಪು ವಿಶ್ವವಿದ್ಯಾನಿಲಯ ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಗಳಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಎರಡು ರ‍್ಯಾಂಕ್ ಗಳನ್ನು ಪಡೆದಿದ್ದಾರೆ. ಬಿ.ಎ ವಿಭಾಗದಲ್ಲಿ ಕಾವ್ಯ ಸಿ 88.33% ಅಂಕ ಗಳಿಸುವುದರೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದರೆ, ಬಿ ಎ ವಿಭಾಗದಲ್ಲಿ ಸಿಂಧು ಜಿ 86.42% ಅಂಕ ಗಳಿಸಿ ಒಂಬತ್ತನೆ ರ‍್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಚಂದ್ರಶೇಖರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ುವೆಂಪು ವಿಶ್ವವಿದ್ಯಾಲಯದ ಎರಡು ರ‍್ಯಾಂಕ್…