ರಿಪ್ಪನ್‌ಪೇಟೆ : ನಿವೃತ ಎ ಎಸ್ ಐ ಮನೆಗೆ ಹಗಲು ಹೊತ್ತಿನಲ್ಲಿಯೇ ನುಗ್ಗಿ ಕಳ್ಳತನ – ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ|Theft
ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಎಎಸ್ ಐ ರೊಬ್ಬರ ಮನೆಗೆ ಹಗಲು ಹೊತ್ತಿನಲ್ಲಿಯೇ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ದಿನದಿಂದ ದಿನಕ್ಕೆ ಕಳ್ಳರು ಸ್ಮಾರ್ಟ್ ಆಗುತ್ತಿದ್ದಾರೆ, ಮತ್ತಷ್ಟು ಚುರುಕಾಗುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ.. ಅವರವರದ್ದೇ ಆದ ದಾರಿಗಳನ್ನು ಕಂಡುಕೊಂಡು, ತಾವು ಐನಾತಿ ಕಳ್ಳರೇ ಸರಿ ಎಂಬವುದನ್ನು ಸಾಬೀತುಪಡಿಸುತ್ತಿದ್ದಾರೆ. ತಂತ್ರಜ್ಞಾನದ ಸಮ್ಮುಖದಲ್ಲಿ ರಾತ್ರಿಗಳು ಮೊದಲಿನಂತಿಲ್ಲ… ಹಾಗಂತ ಹಗಲು ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಿದೆಯಾ ಎಂದು ನೋಡಿದರೆ…