ರಿಪ್ಪನ್ ಪೇಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು : ಗ್ರಾಮಾಡಳಿತಕ್ಕೆ ಸಂದ ಜಯ..!!!
ರಿಪ್ಪನ್ ಪೇಟೆ : ಇಲ್ಲಿನ ಗವಟೂರಿನಲ್ಲಿ ಈ ಭಾಗದ ಬಹುದಿನಗಳ ಕನಸಿನ ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ ಐದು ಎಕರೆ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದನ್ನು ಇಂದು ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ಮಾಜಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ರಿಪ್ಪನ್ ಪೇಟೆಯ ಸಾರ್ವಜನಿಕರ ಬೇಡಿಕೆಯಂತೆ ಗವಟೂರು ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಸಮುದಾಯ ಆಸ್ಪತ್ರೆಗಾಗಿ ಮಂಜೂರು ಮಾಡಿಸಿದ್ದರು. ಆ ಜಾಗವನ್ನು ಪೋಡಿ ದುರಸ್ಥಿಗೊಳಿಸುವ ಮುನ್ನವೇ ಇಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು ಆ ಜಾಗವನ್ನು…