ರಿಪ್ಪನ್ ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ಕಾಡಾನೆಯ ಹಾವಳಿ : ಅಡಿಕೆ ತೋಟಕ್ಕೆ ಹಾನಿ
ರಿಪ್ಪನ್ ಪೇಟೆ : ಮೂಗೂಡ್ತಿ ಅರಣ್ಯ ಜೀವಿ ವಲಯ ವ್ಯಾಪ್ತಿಯ ತಳಲೆ ಗ್ರಾಮದ ಕಾರೆಹೊಂಡ ದಲ್ಲಿರುವ ರೈತರ ಅಡಿಕೆ ತೋಟಕ್ಕೆ ಮಂಗಳವಾರ ರಾತ್ರಿ ಆನೆಯೊಂದು ದಾಳಿ ನಡೆಸಿ ಅಡಿಕೆ ತೋಟ ಹಾನಿಗೊಳಿಸಿದ ಘಟನೆ ನಡೆದಿದೆ. ರೈತ ಪರಶುರಾಮ ಎಂಬವರ ಅಡಿಕೆ ತೋಟಕ್ಕೆ ದಾಳಿ ಮಾಡಿದ ಆನೆಯು ತೆಂಗು ಹಾಗೂ ಅಡಿಕೆ ಮರಗಳನ್ನು ಕಿತ್ತು ಮುರಿದು ಹಾನಿಗೊಳಿಸಿ ರೈತರಿಗೆ ನಷ್ಟವನ್ನುಂಟು ಮಾಡಿದೆ.ಅನಾಹುತದ ಘಟನೆಯನ್ನು ತಿಳಿದ ಗ್ರಾಮಸ್ಥರು ತೋಟಕ್ಕೆ ಆಗಮಿಸಿ ಇದುವರೆಗೆ ಈ ಭಾಗದಲ್ಲಿ ಆನೆ ಬಂದಿರುವ ನಿದರ್ಶನ ಇರಲಿಲ್ಲ…