ಆನಂದಪುರ : ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ|Leopard
ಆನಂದಪುರ ವಲಯ ಅರಣ್ಯದ ಚೋರಡಿ ತುಪ್ಪೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಅದೇ ರೀತಿ ವನ್ಯ ಪ್ರಾಣಿಗಳ ಭೇಟೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಜಮೀನಿಗೆ ಲಗ್ಗೆ ಇಡುವ ಕಾಡುಹಂದಿಗಳ ಬೇಟೆಗೆ ಉರುಳು ಹಾಕುವುದು, ಎಲೆಕ್ಟ್ರಿಕ್ ಕರೆಂಟ್ ಕೊಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ, ಆನಂದಪುರ ರೇಂಜ್ ನ ಚೋರಡಿ ಸಮೀಪದ ಕೋಣೆಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಾಕಿದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣಬಿಟ್ಟಿದೆ. ಸುಮಾರು 5 ರಿಂದ 6 ವರ್ಷ ಪ್ರಾಯದ ಗಂಡು…