ಹೊಸನಗರ ತಾಲೂಕ್ ಜೆಡಿಎಸ್ ನೂತನ ಅಧ್ಯಕ್ಷರಾಗಿ ಎನ್ ವರ್ತೇಶ್ ಅಧಿಕಾರ ಸ್ವೀಕಾರ:

ಹೊಸನಗರ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಕ್ಷೀಣಿಸುತ್ತಿದ್ದು ಇದನ್ನು ಬಲಪಡಿಸಲು ಹೊಸನಗರ ತಾಲ್ಲೂಕು ಕಾರ್ಯಕರ್ತರ ಸಭೆ ನಡೆಸಿ ಸಂಘಟನೆ ಮಾಡುವ ಉದ್ದೇಶದಿಂದ ಆಗಸ್ಟ್ 20 ಶನಿವಾರ 11 ಗಂಟೆಗೆ ಹೊಸನಗರ ಪ್ರವಾಸಿ ಮಂದಿರದ ಹತ್ತಿರವಿರುವ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್‌ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪತ್ರಿಕಾಘೋಷ್ಟಿ…

Read More

Ripponpete | ಕಾಲಭೈರೇಶ್ವರ ಮಹಿಳಾ ಸಂಘದಿಂದ ಶರ್ಮಣ್ಯಾವತಿ ಹೊಳೆಗೆ ಬಾಗಿನ ಅರ್ಪಣೆ

Ripponpete | ಕಾಲಭೈರೇಶ್ವರ ಮಹಿಳಾ ಸಂಘದಿಂದ ಶರ್ಮಣ್ಯಾವತಿ ಹೊಳೆಗೆ ಬಾಗಿನ ಅರ್ಪಣೆ ರಿಪ್ಪನ್ ಪೇಟೆ :ಮಲೆನಾಡಿನಲ್ಲಿ ಈ ಬಾರಿ ಸಮೃದ್ಧವಾಗಿ ಮಳೆಯಾಗಿರುವ  ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳು ಸೇರಿದಂತೆ ನದಿಗಳು ತುಂಬಿ ಹರಿಯುತ್ತಿವ ಹಿನ್ನೆಲೆಯಲ್ಲಿ ರಿಪ್ಪನ್ ಪೇಟೆಯ ಕಾಲಭೈರವೇಶ್ವರ ಒಕ್ಕಲಿಗ ಮಹಿಳಾ ಸಂಘದ ಸದಸ್ಯರು (ಶರ್ಮಣ್ಯಾವತಿ) ಗವಟೂರು ಹೊಳೆಗೆ ಇಂದು ಬಾಗಿನ ಅರ್ಪಿಸಿದರು. ನಂತರ ಸಂಘದ ಅಧ್ಯಕ್ಷೆ ಸುಮಂಗಲ ಹರೀಶ್ ಮಾತನಾಡಿ  ಕಳೆದು ಎರಡು ವರ್ಷದಿಂದ ಮಲೆನಾಡಿನಲ್ಲಿ  ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ  ಬರಗಾಲದ ಛಾಯೆಯಿಂದ ಮಲೆನಾಡಿನ ಜನತೆ ಹಾಗೂ ಜನ…

Read More

ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸರಳ ಆಚರಣೆ:

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಆಗಸ್ಟ್ 03 ರ ಮಂಗಳವಾರ ದಂದು ನಡೆಯುವ ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವನ್ನು ಕೊರೊನಾ ಕಾರಣದಿಂದಾಗಿ ರಾಜ್ಯ ಸರಕಾರದ ಆದೇಶದ ಅನ್ವಯ ಸರಳವಾಗಿ ಆಚರಣೆ ಮಾಡಲಾಗುವುದು ಎಂದು  ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಸವರಾಜ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಸವರಾಜ್ ರವರು  ಪೂರ್ವಿಕರು ನಡೆದು ಬಂದಂತಯೆ ನಾವುಗಳೂ ವರ್ಷಕ್ಕೆ ಎರಡು ಬಾರಿ ಜಾತ್ರೆ ಆಚರಿಸಿಕೊಂಡು ಬಂದಿದ್ದೇವೆ….

Read More

RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀರ್ ಪಿ ಆಯ್ಕೆ

RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀರ್ ಪಿ ಆಯ್ಕೆ ಹಿಂದಿನ ಸಾಲಿನ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್ ಅಧ್ಯಕ್ಷತೆಯಲ್ಲಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಆಯ್ಕೆ ಸಭೆ ನಡೆಯಿತು.ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತಿಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 2025 ರ 58ನೇ ಗಣೇಶೋತ್ಸವದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. 58 ನೇ ಗಣೇಶೋತ್ಸವದ ಅಧ್ಯಕ್ಷರಾಗಿ ರಿಪ್ಪನ್‌ಪೇಟೆಯ…

Read More

ಮನೆ ಮುಂದೆ ನಿಲ್ಲಿಸಿದ್ದ ಆಟೋ ನಾಪತ್ತೆ; 1 ವರ್ಷದ ಬಳಿಕ ಕಂಪ್ಲೆಂಟ್ ಕೊಟ್ಟ ಮಾಲೀಕ

Passenger auto worth ₹2.44 lakh stolen from outside a house in Bommanakatte, Shivamogga; owner files police complaint after nearly one year. ಶಿವಮೊಗ್ಗ: ನಗರದ ಬೊಮ್ಮನಕಟ್ಟೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪ್ಯಾಸೆಂಜರ್ ಆಟೋವೊಂದು  ನಾಪತ್ತೆಯಾಗಿದ್ದು, ಘಟನೆ ನಡೆದು ಸುಮಾರು 1 ವರ್ಷದ ಬಳಿಕ ಮಾಲೀಕರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಬೊಮ್ಮನಕಟ್ಟೆ ನಿವಾಸಿಯೊಬ್ಬರು ತಮ್ಮ ಅಳಿಯನ ಹೆಸರಿನಲ್ಲಿದ್ದ ಪ್ಯಾಸೆಂಜರ್ ಆಟೋವನ್ನು ಭದ್ರಾವತಿಯಿಂದ ತಂದು ತಮ್ಮ ಮನೆಯ ಮುಂದೆ…

Read More

ಪ್ರೀತಿಸಿ ಮದುವೆಯಾದ ಏಳೇ ತಿಂಗಳಲ್ಲಿ ಯುವತಿ ಅನುಮಾನಸ್ಪದವಾಗಿ ಸಾವು|

ಪ್ರೀತಿಸಿ ಮದುವೆಯಾದ ಏಳೇ ತಿಂಗಳಲ್ಲಿ ಯುವತಿ ಸಾವು, ಇಷ್ಟಪಟ್ಟು ಪ್ರೀತಿ ಮದುವೆಯಾದ ಏಳೇ ತಿಂಗಳಿಗೆ ನವವಿವಾಹಿತೆ ಅನುಮಾಸ್ಪದವಾಗಿ ಮೃತಪಟ್ಟಿದ್ದಾಳೆ. ಗಣಪತಿ ಹಬ್ಬಕ್ಕೆಂದು ತವರು ಮನೆಗೆ ಹೋದ್ದಾಕೆಯನ್ನು ಪತಿ ರಾತ್ರೋರಾತ್ರಿ ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದಲ್ಲಿ ತನ್ನ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಏನಾಯ್ತೋ ಏನೋ ನವವಿವಾಹಿತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾಳೆ.  ಪ್ರೀತಿಸಿ ಮದುವೆಯಾದ  ಏಳೇ ತಿಂಗಳಿಗೆ ನವವಿವಾಹಿತೆ ಅನುಮಾನಸ್ಪದ ಸಾವನ್ನಪ್ಪಿದ್ದಾಳೆ. ಶಿವಮೊಗ್ಗದ ಎನ್ ಟಿ ರಸ್ತೆಯ ಶಾರದಾ ನಗರದ ನವವಿವಾಹಿತೆ ನಮಿತಾ (22) ಮೃತಪಟ್ಟಿದ್ದು, ಗಣೇಶ…

Read More

ANANDAPURA | ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ

ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ ಸಾಗರ : ಸಾಲ ಬಾಧೆ ತಾಳಲಾರದೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಬಿ ಎಚ್ (43) ಗೌತಮಪುರ  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಾಗಿರುವ ಮೇಘರಾಜ್  5 ಲಕ್ಷಕ್ಕೂ ಅಧಿಕ ಸಾಲವನ್ನು  ಬೆಳೆಗಾಗಿ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೋಲ್ಡ್ ಲೋನ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ….

Read More

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ – ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರದ ಅರುಣ್ ಕುಗ್ವೆ ಅರೆಸ್ಟ್ | Sagara

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ – ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರದ ಅರುಣ್ ಕುಗ್ವೆ ಅರೆಸ್ಟ್ | Sagara ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ‌ ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಕುಟುಂಬಕ್ಕೆ ಜೀವ‌ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಸಾಗರದ ಬಿಜೆಪಿ ಮುಖಂಡ , ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ ಶಿವಮೊಗ್ಗ ನಗರದ ಮಹಿಳಾ ಠಾಣೆಯಲ್ಲಿ ದಾಖಲಿಸಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಅರುಣ್ ಕುಗ್ವೆಯನ್ನು ಅವನ…

Read More

RIPPONPETE | ವಿವಿಧಡೆಯಲ್ಲಿ  76 ನೇ ಗಣರಾಜ್ಯೋತ್ಸವ

ರಿಪ್ಪನ್‌ಪೇಟೆಯ ವಿವಿಧಡೆಯಲ್ಲಿ  76 ನೇ ಗಣರಾಜ್ಯೋತ್ಸವ ರಿಪ್ಪನ್‌ಪೇಟೆ | ೭೬ ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ನೆರವೇರಿತು. ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು, ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಎಸ್.ಪಿ.ಪ್ರವೀಣ್ ದ್ವಜಾರೋಹಣ ನೆರವೇರಿಸಿ ದ್ವಜಾವಂದನೆ ಸ್ವೀಕರಿಸಿದರು.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು,ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ.ಆಧ್ಯಕ್ಷ ಮಂಜಪ್ಪ, ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ  ಸುಮಿತ್ರ, ರೈತ ಸಂಪರ್ಕ ಕೇಂದ್ರದಲ್ಲಿ  ಕೃಷಿ ಆಧಿಕಾರಿ,ಬರುವೆ…

Read More

ರಿಪ್ಪನ್‌ಪೇಟೆಯ ಗವಟೂರಿನಲ್ಲಿ‌ ನೂತನ ಮದ್ಯದಂಗಡಿ ಆರಂಭಕ್ಕೆ ಭಾರಿ ವಿರೋಧ|protest

ರಿಪ್ಪನ್ ಪೇಟೆ : ಪಟ್ಟಣದ ಗವಟೂರಿನಲ್ಲಿ ನೂತನವಾಗಿ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ. ಗವಟೂರಿನ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರವಿಗೆ ಸರ್ಕಾರದಿಂದ ಲೈಸೆನ್ಸ್ ದೊರತ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮದ್ಯದ ಲೋಡ್ ನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ…

Read More