ರಿಪ್ಪನ್ ಪೇಟೆ: ಜಿಲ್ಲಾ ಪಂಚಾಯತ್ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅಭಿಮಾನಿಗಳ ಬಳಗದಿಂದ ರಿಪ್ಪನ್ ಪೇಟೆಯ ಅಮೀರ್ ಹಂಜಾ ರವರು ಕಣಕ್ಕಿಳಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾ ಪಂಚಾಯತ್ ಮೀಸಲಾತಿ ಘೋಷಣೆಯಾಗಿ ರಿಪ್ಪನ್ ಪೇಟೆ ಕ್ಷೇತ್ರದಲ್ಲಿ ಸಾಮಾನ್ಯ ಕೆಟಗೆರಿ ಬಂದಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಯಲ್ಲಿ ಈಗಾಗಲೇ ಟಿಕೆಟ್ ಫ಼ೈಟ್ ನಡೆಯುತ್ತಿದೆ ಈ ನಡುವೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅಭಿಮಾನಿ ಬಳಗದಿಂದ ಬಂಗಾರಪ್ಪ ರವರ ಒಡನಾಡಿ ಆಗಿದ್ದ ಅಮೀರ್ ಹಂಜಾರವರು ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪರ್ಧೆಗೆ ಅಣಿಯಾಗಿದ್ದಾರೆ.
ಪ್ರಸ್ತುತ ಮಧು ಬಂಗಾರಪ್ಪ ನವರ ಬೆಂಬಲಿಗ ಮುಖಂಡರಲ್ಲಿ ಮುಂಚೂಣಿಯಲ್ಲಿರುವ ಅಮೀರ್ ಹಂಜಾ ಈ ಹಿಂದೆ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ದೂರವಾಣಿ ಮೂಲಕ ಅಮೀರ್ ಹಂಜಾ ರವರನ್ನು ಸಂಪರ್ಕಿಸಿದಾಗ ಸ್ಪರ್ದೆಯನ್ನು ಖಚಿತಪಡಿಸಿದ ಅವರು ಜಿಪಂ ಚುನಾವಣೆಯಲ್ಲಿ ರಿಪ್ಪನ್ ಪೇಟೆಯ ಮೂಲ ಅಭ್ಯರ್ಥಿಗಳಿಗೆ ಆದ್ಯತೆ ದೊರೆಯಬೇಕು ಆವಾಗ ಮಾತ್ರ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಸಾಧ್ಯ,ನನ್ನ ಕ್ಷೇತ್ರವಾದ ರಿಪ್ಪನ್ ಪೇಟೆಯ ಸಂಪೂರ್ಣ ಅಭಿವೃದ್ಧಿಯೇ ನನ್ನ ಗುರಿ ಈ ನಿಟ್ಟಿನಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ರಿಪ್ಪನ್ ಪೇಟೆ ಜಿಪಂ ಕ್ಷೇತ್ರದಲ್ಲಿ ಎರಡನೇ ಅತಿಹೆಚ್ಚು ಮತ ಬುಟ್ಟಿ ಹೊಂದಿರುವ ಅಲ್ಪಸಂಖ್ಯಾತರಿರುವ ಕ್ಷೇತ್ರದಲ್ಲಿ ಹಾಗೂ ಎಸ್ ಬಂಗಾರಪ್ಪ ನವರ ಅತಿ ಹೆಚ್ಚು ಅಭಿಮಾನಿಗಳಿರುವ ಕ್ಷೇತ್ರದಲ್ಲಿ ನಾನು ಎಸ್ ಬಂಗಾರಪ್ಪ ಅಭಿಮಾನಿಗಳ ಬಳಗದಿಂದ ಸ್ಪರ್ಧೆಗೆ ಇಳಿದಿರುವುದರಿಂದ ಉಳಿದ ಪಕ್ಷಗಳ ಲೆಕ್ಕಚಾರ ತಲೆಕೆಳಗಾಗುವ ಸಾಧ್ಯತೆ ಇದೆ ಎಂದು ಈ ಸಂಧರ್ಭದಲ್ಲಿ ಹೇಳಿದರು.
ವರದಿ: ರಾಮನಾಥ್ ರಿಪ್ಪನ್ ಪೇಟೆ