Headlines

ರಕ್ತದಾನ ಮಾಡಿ ಆದರ್ಶ ಮೆರೆದ ನವ ದಂಪತಿಗಳು

ತಾಳಿ ಕಟ್ಟಿ ರಕ್ತದಾನ ಮಾಡಿ ಆದರ್ಶ ಮೆರೆದ ನವ ದಂಪತಿ ಶಿವಮೊಗ್ಗ : ಮದುವೆಗೆಂದು ನೆರೆದಿದ್ದ ಅಪಾರ ಜನ ಸಮುದಾಯದ ನಡುವೆ ತಾಳಿ ಕಟ್ಟುವ ಕಾರ್ಯ ಮುಗಿಯುತ್ತಿದ್ದಂತೆ ನವ ದಂಪತಿಗಳು ಮಂಟಪದಲ್ಲಿಯೇ ಬಹಳ ಖುಷಿಯಿಂದ ರಕ್ತದಾನ ಮಾಡಿ ಜೀವನ ಸಾರ್ಥಕವೆನಿಸಿಕೊಂಡ ಕ್ಷಣ ಇಲ್ಲಿನ ಗುಡ್ಡೇಕಲ್ ಗುಡ್ಡೇಕಲ್ ಸಮುದಾಯ ಭವನದಲ್ಲಿ ಸೋಮವರ ನಡೆಯಿತು. ಬೊಮ್ಮನಕಟ್ಟೆ ವಾಸಿ  ಯಶವಂತ್ ಅವರ ವಿವಾಹವು  ತನುಜಾ ಜೊತೆ ಶಿವಮೊಗ್ಗದ ಈ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಭದ್ರಾವತಿ ಟ್ರಾಫಿಕ್  ಹೆಡ್ಕಾನ್ಸ್‌ಟೇಬಲ್ ಹಾಲೇಶಪ್ಪ ರಕ್ತದಾನ…

Read More

‘ರೈತ ವಿದ್ಯಾನಿಧಿ’ ಪಡೆಯಲು ಪಹಣಿ ಕಾಟ ; ನಿಯಮ ಸಡಿಲಿಸುವಂತೆ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಆಗ್ರಹ

ಬಸವರಾಜ್‌ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಘೋಷಿಸಿದ್ದ ಯೋಜನೆ ‘ರೈತ ವಿದ್ಯಾನಿಧಿ’. ಯೋಜನೆಯಲ್ಲಿ  ಪಹಣಿ ಸಮಸ್ಯೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದ್ದು, ಯೋಜನೆ ಫಲಾನುಭವಿಗಳಾಗಲು ಪಾಲಿಸಬೇಕಿರುವ ನಿಯಮಾವಳಿಯನ್ನು ಸ್ವಲ್ಪ ಸಡಿಲಿಸಬೇಕೆಂದು ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯಬೇಕಿದ್ದರೆ ಅರ್ಹ ವಿದ್ಯಾರ್ಥಿ ತಂದೆಯ ಹೆಸರು ಪಹಣಿಯಲ್ಲಿ ಇರಲೇಬೇಕು ಎಂಬ ನಿಯಮವಿದೆ. ಕೃಷಿ ಇಲಾಖೆಯ ‘ಫ್ರೂಟ್ಸ್‌ ಆ್ಯಪ್‌’ನಲ್ಲಿ ಪಹಣಿಯನ್ನು ನಮೂದು ಮಾಡಿ ಅಲ್ಲೊಂದು ಐಡಿ ಪಡೆದರೆ ಮಾತ್ರ…

Read More

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು|Farmers death

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು..?? ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಜೇಡಿಸರದ ಬಳಿಯಲ್ಲಿ ವ್ಯಕ್ತಿಯೊಬ್ಬರು ಎಮ್ಮೆಯನ್ನು ಹುಡುಕಿಕೊಂಡು ಕೆರೆ ಏರಿ ಮೇಲೆ ಹೋಗುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯ ನಿವಾಸಿ ಸತೀಶ್ ಗೌಡ(51) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಸತೀಶ್​ರವರು ಅಡುಗೆ ಕಂಟ್ರಾಕ್ಟ್ ಮಾಡುತ್ತಿದ್ದರು.  ತಮ್ಮ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗೆ ಅಂತಾ ತೆರಳಿದ್ದ  ವೇಳೇ ಕೆರೆಯ ಆಳ ನೋಡಲು ಹೋದ ಸಂದರ್ಭದಲ್ಲಿ…

Read More

RIPPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ

RIPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ ಗಮನಿಸುತಿದ್ದ ಸಾರ್ವಜನಿಕರು ಪೊಲೀಸಪ್ಪನ ಪರಿಯನ್ನು ಕಂಡು ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಇಂತಹವರೂ ಇದ್ದಾರಾ?ಎನ್ನುತ್ತಲೇ ಮುಂದೆ ಸಾಗುತಿದ್ದರು ಕಳೆದ ಕೆಲವು ತಿಂಗಳ ಹಿಂದೆ ಪಟ್ಟಣದ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡ ಈ ಪೇದೆ ಅಂದಿನಿಂದಲೂ ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವೊಮ್ಮೆ ಸಾರ್ವಜನಿಕ ರೊಂದಿಗೆ ರಿಪ್ಪನ್ ಪೇಟೆ: ಕರ್ತವ್ಯದಲ್ಲಿರುವಾಗಲೇ ಪಾನಮತ್ತ ನಾಗಿರುವ ಪಟ್ಟಣದ ಪೊಲೀಸ್ ಪೇದೆಯೋರ್ವರು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಮಲಗಿ ಅಪಹಾಸ್ಯಕ್ಕೀಡಾಗಿರುವ ಘಟನೆ ಸೋಮವಾರ ನಡೆದಿದೆ. ಪೊಲೀಸ್ ಠಾಣೆಯ ಪಕ್ಕದ ರಸ್ತೆಯ…

Read More

ನಿನ್ನೆ ಆರತಕ್ಷತೆಯಲ್ಲಿ ಊಟ ಮಾಡಿದವರು ಇಂದು ಆಸ್ಪತ್ರೆಗೆ ದಾಖಲು : ಸುಮಾರು 150 ಕ್ಕೂ ಹೆಚ್ಚು ಜನರು ಅಸ್ವಸ್ಥ , ಎಲ್ಲಿ ಗೊತ್ತಾ ??

ಶಿವಮೊಗ್ಗ : ಇಲ್ಲಿನ ಸಮೀಪದ ಹರಮಘಟ್ಟದ ಆಲದಹಳ್ಳಿಯಲ್ಲಿ ನಿನ್ನೆ ಮದುವೆಯೊಂದರ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಸುಮಾರು 60 ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯಿಸನ್ ಆಗಿದ್ದು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ  21 ಜನ ದಾಖಲಾಗಿದ್ದಾರೆ. ನಿನ್ನೆ ಆಲದಹಳ್ಳಿ ದೊಡ್ಡೇರಿ ಕುಟುಂಬದವರ ಎರಡು ಜೋಡಿ ಮದುವೆಯ ಆರತಕ್ಷತೆಗೆ ಹಾಜರಾದ ಹರಮಘಟ್ಟ ಮತ್ತು ಆಲದಹಳ್ಳಿ ಗ್ರಾಮಸ್ಥರು ನಿನ್ನೆ ರಾತ್ರಿ ಊಟ ಮಾಡಿದ್ದಾರೆ.ಮರುದಿನ ಮಧ್ಯಾಹ್ನದಿಂದ ರಿಯಾಕ್ಷನ್ ಆಗಲು ಆರಂಭವಾಗಿದೆ.ಕೆಲ ಗ್ರಾಮಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಹೊಳೆಹೊನ್ನೂರು…

Read More

ರಿಪ್ಪನ್‌ಪೇಟೆ : ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ|Sucide

ರಿಪ್ಪನ್‌ಪೇಟೆ : ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಮೀಪದ ನೇರಲಮನೆ ಗ್ರಾಮದಲ್ಲಿ ನಡೆದಿದೆ. ನೇರಲೆಮನೆ ಗ್ರಾಮದ ಬೀರಪ್ಪ  (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನೇರಲಮನೆ ಗ್ರಾಮದ ಬೀರಪ್ಪ ರವರ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದು, ಕಳೆದ ಒಂದು ವರ್ಷದ ಹಿಂದೆ ತನ್ನ ಗಂಡನ ವಿರುದ್ಧ ಹೊಸನಗರ ನ್ಯಾಯಾಲಯದಲ್ಲಿ ವಿಚ್ಛೇಧನ ಹಾಗೂ ಜೀವನಾಂಶಕ್ಕಾಗಿ ಧಾವೆ ಹೂಡಿರುತ್ತಾರೆ.ಸಂಸಾರದ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬೀರಪ್ಪ ಮದ್ಯಪಾನ ಮಾಡುವ…

Read More

RIPPONPET | ಸಾಮಾನ್ಯ ಸಭೆಯಲ್ಲಿ ಲಂಚದ ಹಣ ಹಂಚಿಕೆಯ ತಾರತಮ್ಯ ಪ್ರಶ್ನಿಸಿದ್ದಕ್ಕೆ ಆಯಿತೆ ಮಾರಾಮಾರಿ.!? ನೇರ ಪ್ರಸಾರ ಏಕ್ ದಮ್ ಕಟ್ ಆಗಿದ್ದೇಕೆ .!?

RIPPONPET | ಸಾಮಾನ್ಯ ಸಭೆಯಲ್ಲಿ ಲಂಚದ ಹಣ ಹಂಚಿಕೆಯ ತಾರತಮ್ಯ ಪ್ರಶ್ನಿಸಿದ್ದಕ್ಕೆ ಆಯಿತೆ ಮಾರಾಮಾರಿ.!? ನೇರ ಪ್ರಸಾರ ಏಕ್ ದಮ್ ಕಟ್ ಆಗಿದ್ದೇಕೆ .!? ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಕಲಾಪದ ವೇಳೆ ಸದಸ್ಯರುಗಳ ನಡುವೆ ಖಾಸಗಿ ಬಾರ್ ನ ಮಾಲೀಕ ನೀಡಿದ ಲಂಚದ ಹಣದ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಮಾರಾಮಾರಿ ನಡೆಯುತ್ತಿದೆ ಅನ್ನುವಷ್ಟರಲ್ಲಿ ವೇಳೆ ಕಲಾಪದ ನೇರ ಪ್ರಸಾರ ಕಡಿತಗೊಳಿಸಲಾಯಿತು. ಗ್ರಾಮ ಸಭೆಯ ಕಲಾಪದಲ್ಲಿ ತಾವು ಮತ ಹಾಕಿ…

Read More

ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಹಾರಥೋತ್ಸವ | ಭಕ್ತಿ ಸಿಂಚನ, ಸ್ವರ್ಣ ಮಂಟಪ ಸಮರ್ಪಣೆ

ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಹಾರಥೋತ್ಸವ | ಭಕ್ತಿ ಸಿಂಚನ, ಸ್ವರ್ಣ ಮಂಟಪ ಸಮರ್ಪಣೆ ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ವಿಶ್ವಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವ ಪರಂಪರೆಯ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಹೊಂಬುಜ ಶ್ರೀ ಜೈನ ಮಠ, ಸಂಸ್ಥಾನದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ 12.53 ಗಂಟೆಗೆ (ಮೂಲಾ ನಕ್ಷತ್ರ) ದೇವರ ಶ್ರೀ ರಥಾರೋಹಣ…

Read More

ಪಂಚಭೂತಗಳಲ್ಲಿ ಲೀನರಾದ ಗಾನಕೋಗಿಲೆ ಲತಾ ಮಂಗೇಶ್ಕರ್…

ಗಾನ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್  ಭಾನುವಾರ ಮುಂಜಾನೆ 8.12ರ ಸುಮಾರಿಗೆ ಇಹಲೋಕ ತ್ಯಜಿಸಿದ್ದು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಲತಾ ಮಂಗೇಶ್ಕರ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ನಮ್ಮನ್ನಗಲಿದ್ದಾರೆ ಎಂದು ಅವರ ಆರೋಗ್ಯದ ಉಸ್ತುವಾರಿ ಹೊತ್ತಿದ್ದ ಡಾ.ಪ್ರತಿತ್ ಸಮ್ದಾನಿ ತಿಳಿಸಿದರು. ಲತಾ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ…

Read More

ಶಿವಮೊಗ್ಗ: ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ :ಕಾರು ಚಾಲಕ ಸ್ಥಳದಲ್ಲೆ ಸಾವು

ಶಿವಮೊಗ್ಗ: ಖಾಸಗಿ ಬಸ್ ಮತ್ತು ಕಾರ್ ಡಿಕ್ಕಿಯಾಗಿ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ದುರ್ಘಟನೆ ಶಿವಮೊಗ್ಗದ ಕುಂಚೇನಹಳ್ಳಿ ಸಮೀಪ ನಡೆದಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಶಿಕಾರಿಪುರ ನಿವಾಸಿ ರಾಕೇಶ್ (35) ಮೃತಪಟ್ಟ ಕಾರು ಚಾಲಕ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನಿಬ್ಬರು ಸಹ ಪ್ರಯಾಣಿಕರಾದ ಜ್ಯೋತಿ ಮತ್ತು ಚೈತ್ರರಿಗೆ ಅಪಘಾತದಲ್ಲಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಸಿಫ್ಟ್ ಕಾರಿನಲ್ಲಿ ಬರುವಾಗ ಕುಂಚೇನ ಹಳ್ಳಿಯ ಗ್ರಾಪಂ ಕಚೇರಿ ಮುಂಭಾಗ ಕೃಷ್ಣ…

Read More