Headlines

ದ್ವಿತೀಯ ಪಿಯುಸಿ ಫಲಿತಾಂಶ – ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ 97.78% ಫಲಿತಾಂಶ

ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ  97.78% ಫಲಿತಾಂಶ  ರಿಪ್ಪನ್ ಪೇಟೆ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜೆಗೆ  2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ರಲ್ಲಿ 97.78 ಫಲಿತಾಂಶ  ಬಂದಿದೆ.ಕಲಾ ವಿಭಾಗ 98.57% ವಿಜ್ಞಾನ ವಿಭಾಗ ದಲ್ಲಿ 95.77%, ವಾಣಿಜ್ಯ ವಿಭಾಗ 98.82% ರಷ್ಟು ವಿದ್ಯಾರ್ಥಿಗಳು ಉತ್ತೀರಣರಾಗಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ  226 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು.221 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಹಂತದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು  ಭೂಮಿಕಾ –…

Read More

ರಿಪ್ಪನ್ ಪೇಟೆ: ಅನೈತಿಕ ಚಟುವಟಿಕೆಯ ತಾಣವಾದ ಸ್ತ್ರೀಶಕ್ತಿ ಸಮುದಾಯ ಭವನ.

ರಿಪ್ಪನ್ ಪೇಟೆ: ಪಟ್ಟಣಕ್ಕೆ  ಹೊಂದಿಕೊಂಡಂತೆ ಇರುವ ದೊಡ್ಡಿನಕೊಪ್ಪ ಬಡಾವಣೆಯಲ್ಲಿರುವ ಸ್ತ್ರೀಶಕ್ತಿ ಸಮುದಾಯಭವನ ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿದೆ.ಲಕ್ಷಾಂತರ ರೂಪಾಯಿ ಮೊತ್ತದ ಅನುದಾನದಲ್ಲಿ ತಲೆಯೆತ್ತಿ ನಿಂತ  ಸ್ತ್ರೀ ಶಕ್ತಿ ಸಮುದಾಯಭವನ ಇದೀಗ ಪಾಳುಬಿದ್ದು ಹಾಗೂ ಪುಡಾರಿಗಳ ನೆಚ್ಚಿನ ಅನೈತಿಕ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 2011-12ರಲ್ಲಿ ಅಂದಿನ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣರವರ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀ ಶಕ್ತಿ ಸಮುದಾಯ ಭವನವನ್ನು  ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿತ್ತು. ಈಗ ಸ್ತ್ರೀಶಕ್ತಿ…

Read More

ತೀರ್ಥಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರ ಬಂಧನ :

ತೀರ್ಥಹಳ್ಳಿ: ಮಾರಿಕಾಂಬ ದೇವಸ್ಥಾನದ ಎಡಭಾಗದ ಓಣಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕುಶಾವತಿಯ ಅನುಜಿತ್ ಮತ್ತು ಬೆಟ್ಟಮಕ್ಕಿಯ ಸುಮಂತ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ತೀರ್ಥಹಳ್ಳಿ ಪೊಲೀಸರು ಗಸ್ತು ತಿರುಗುವಾಗ ಅನುಜಿತ್, ಸುಮಂತ್ ಮತ್ತು ಸೊಪ್ಪುಗುಡ್ಡೆಯ ಮಂಜುನಾಥ ಅನುಚಿತವಾಗಿ ವರ್ತಿಸುತ್ತಿದ್ದರು. ಮೂವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ಇಬ್ಬರದ್ದು ಪಾಸಿಟಿವ್ ಬಂದಿದೆ.  ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೋಟಾ ಮುಗಿದಿದೆ ಸಚಿವ ಸ್ಥಾನಕ್ಕೆ ಕನಸು ಕಾಣುವುದು ಬೇಡ :ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ವಿಕೆಟ್ ಒಂದು ಪತನವಾಗಿದ್ದು. ಮಂತ್ರಿ ಪದವಿ ತನಗೆ ಸಿಗುತ್ತದೆ ಎಂದು ಶಿವಮೊಗ್ಗ ಜಿಲ್ಲೆಯ ಬಿಜೆಪಿಯ ಪ್ರಮುಖ ಶಾಸಕರೊಬ್ಬರು ಕನಸು ಕಾಣುತ್ತಿದ್ದಾರೆ. ಆದರೆ ಸಮಾಜದ ಕೋಟಾ ಮುಗಿದಿದೆ ಸುಮ್ಮನೆ ಹಗಲು ಕನಸು ಕಾಣಬೇಡಿ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾರ್ಮಿಕವಾಗಿ ಹೇಳಿದರು.  ಇಂದು ರಿಪ್ಪನ್ ಪೇಟೆ ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಸಚಿವ…

Read More

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..!

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..! ತೀರ್ಥಹಳ್ಳಿ :  ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದು ರೀಲ್ಸ್ ಮಾಡಿದ ಘಟನೆ ಬಗ್ಗೆ ಹಲವು ಮಾದ್ಯಮಗಳಲ್ಲಿ ವರದಿಯಾಗಿತ್ತು. ವರದಿ ಬೆನ್ನಲ್ಲೇ ರೀಲ್ಸ್ ಮಾಡಿದ ಯುವಕನನ್ನು ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುಷ್ಮಾ ರವರು ಕರೆದು ವಿಚಾರಿಸಿ ಎಚ್ಚರಿಕೆ ನೀಡಿದ್ದಾರೆ. ರೀಲ್ಸ್ ಮಾಡಿದ ಯುವಕನ ಮೇಲೆ ಸಣ್ಣದೊಂದು ಕೇಸ್…

Read More

Konanduru | ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಯುವಕ ಸಾವು!

Konanduru | ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಯುವಕ ಸಾವು!  ತೀರ್ಥಹಳ್ಳಿ : ಚಲಿಸುತ್ತಿದ್ದ ಬೈಕ್ ಮೇಲೆ ಅಕೇಶಿಯಾ ಮರಬಿದ್ದು ಸ್ಥಳದಲ್ಲೇ ರಾಮಪ್ಪ ಎಂಬ ಯುವಕ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ತಡರಾತ್ರಿ ಕೋಣಂದೂರು ಸಮೀಪದ ಹಾದಿಗಲ್ಲಿ ಗ್ರಾಪಂ ವ್ಯಾಪ್ತಿಯ ಮೀನ್ಮನೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಹಾದಿಗಲ್ಲು ಸಮೀಪದ ಮೀನ್ಮನೆಕೊಪ್ಪ ಗ್ರಾಮದ ರಾಮಪ್ಪ(26) ಮೃತ ದುರ್ಧೈವಿಯಾಗಿದ್ದಾರೆ. ಕೋಣಂದೂರಿಗೆ ಕೆಲಸದ ನಿಮಿತ್ತ ತೆರಳಿದ್ದ ಯುವಕ ವಾಪಾಸ್ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.  ಚಲಿಸುತ್ತಿರುವಾಗಲೇ ಬೈಕ್ ಮೇಲೆ ಆಕೇಶಿಯ…

Read More

ರಿಪ್ಪನ್‌ಪೇಟೆ : ಚಂದಳ್ಳಿ ಶಾಲೆಯ ಶಿಕ್ಷಕಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ|rpet

ರಿಪ್ಪನ್‌ಪೇಟೆ : ಚಂದಳ್ಳಿ ಶಾಲೆಯ ಶಿಕ್ಷಕಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ರಿಪ್ಪನ್‌ಪೇಟೆ : ಸಮೀಪದ ಚಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ  ತಾಜುನ್ ಬಿ ರವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಮೂಲತಃ ಗ್ರಾಮದ ನಿವಾಸಿ ತಾಜುನ್ ಬಿ ರಹಮತ್ ಉಲ್ಲಾ ರವರು ಕಳೆದ 13 ವರ್ಷಗಳಿಂದ ಚಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ತಾಜುನ್ ಬಿ ರಹಮತ್ ಉಲ್ಲಾ ರವರು ನಿರೂಪಣೆ ಹಾಗೂ ಕವನ…

Read More

ಹೊಸನಗರ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ – ಕಾರು ಜಪ್ತಿ , ಆರೋಪಿ ಪರಾರಿ!!????|EXCISE

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು(liquor) ವಶಕ್ಕೆ ತೆಗೆದುಕೊಂಡಿದ್ದು ಆರೋಪಿ ಪರಾರಿಯಾಗಿದ್ದಾನೆ‌. ನಿವಣೆ ಗ್ರಾಮದ ಅಗಸನಗದ್ದೆ ಸಮೀಪ ಅಕ್ರಮವಾಗಿ ಓಮ್ನಿ ವಾಹನದಲ್ಲಿ ಸುಮಾರು 198.72 ಲೀಟರ್ ಮದ್ಯವನ್ನು ಸಾಗಾಟ ನಡೆಸುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಅಬಕಾರಿ ನಿರೀಕ್ಷಕರಾದ ಅಮಿತ್‌ಕುಮಾರ್‌ರವರ ನೇತೃತ್ವದಲ್ಲಿ ಅಕ್ರಮ ಮದ್ಯ ಹಾಗೂ…

Read More

ಕೆಂಚನಾಲ ಮಾರಿಕಾಂಬ ಜಾತ್ರೆಗೆ ಹರಿದು ಬಂದ ಭಕ್ತಸಾಗರ :

ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಜ್ಯದ ಹಲವೆಡೆಯಿಂದ, ನೆರೆ ರಾಜ್ಯ ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿ ದೇವಿಯ ದರ್ಶನ ಪಡೆದರು.  ಜಗತ್ತನ್ನೇ ತಲ್ಲಣ ಗೊಳಿಸಿದ ಕೊರೊನಾ ಸೋಂಕಿನಿಂದ ಕಳೆದ ಎರಡು ವರ್ಷ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಜಾತ್ರೆಗೆ ಯಾವುದೇ ನಿರ್ಬಂಧಗಳು ಇಲ್ಲದೆ ಇರುವ ಕಾರಣದಿಂದ ಮಾರಿಕಾಂಬೆ ದೇವಿಯ ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕೆಂಚನಾಲ…

Read More

RIPPONPETE | ಸತತ 20 ಗಂಟೆ ರಾಜಬೀದಿ ಉತ್ಸವದೊಂದಿಗೆ ಜಲಸ್ಥಂಭನಗೊಂಡ ಗಣಪತಿ

ರಿಪ್ಪನ್‌ಪೇಟೆ : ಕಳೆದ 11 ದಿನಗಳ ಕಾಲ ಇಲ್ಲಿನ ತಿಲಕ್ ಮಹಾಮಂಟಪದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ರಾಜಬೀದಿ ಉತ್ಸವವು ಮಂಗಳವಾರ ಸಂಜೆ 5.30 ಕ್ಕೆ ಹೊರಟು ಸತತ 20 ಗಂಟೆಗಳ ಕಾಲ  ಸಂಚರಿಸಿ ಇಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಹೊಸನಗರ ರಸ್ತೆಯಲ್ಲಿರುವ ಗವಟೂರು ತಾವರೆಕೆರೆಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮದ ಮಧ್ಯೆ ಗಣೇಶ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು. ಇದರೊಂದಿಗೆ ಸೆ.7 ರಂದು ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದ `ತಿಲಕ್’ ಮಹಾಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ…

Read More