POSTMANNEWS

ನೈಜ ಸುದ್ದಿ ನೇರ ಬಿತ್ತರ..

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..!

IMG 20250620 WA0026

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..!

ತೀರ್ಥಹಳ್ಳಿ :  ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದು ರೀಲ್ಸ್ ಮಾಡಿದ ಘಟನೆ ಬಗ್ಗೆ ಹಲವು ಮಾದ್ಯಮಗಳಲ್ಲಿ ವರದಿಯಾಗಿತ್ತು.

ವರದಿ ಬೆನ್ನಲ್ಲೇ ರೀಲ್ಸ್ ಮಾಡಿದ ಯುವಕನನ್ನು ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುಷ್ಮಾ ರವರು ಕರೆದು ವಿಚಾರಿಸಿ ಎಚ್ಚರಿಕೆ ನೀಡಿದ್ದಾರೆ. ರೀಲ್ಸ್ ಮಾಡಿದ ಯುವಕನ ಮೇಲೆ ಸಣ್ಣದೊಂದು ಕೇಸ್ ದಾಖಲು ಮಾಡಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಯಾವುದೇ ವ್ಯಕ್ತಿಯಾಗಲಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವುದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು, ಅಥವಾ ಹೊಸ ಸೇತುವೆ ಮೇಲೆ ಅಸಭ್ಯ ವರ್ತನೆ ಮಾಡುವುದು ಕಂಡು ಬಂದಲ್ಲಿ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.