w
Headlines
Home » ರಿಪ್ಪನ್‌ಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಗೋಪೂಜೆ ಆಚರಣೆ

ರಿಪ್ಪನ್‌ಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಗೋಪೂಜೆ ಆಚರಣೆ

Screenshot 2026 11 10 17 46 21 899 com.openai.chatgpt edit

ರಿಪ್ಪನ್‌ಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಗೋಪೂಜೆ ಆಚರಣೆ | Balipadyami was celebrated with devotion in Ripponpete, Shivamogga district, with special Gopuja at Siddhivinayaka and Chowdeshwari temples and several surrounding villages.

ರಿಪ್ಪನ್‌ಪೇಟೆ: ಬಲಿಪಾಡ್ಯಮಿ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗೋಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ವಿಶೇಷವಾಗಿ ಶೃಂಗರಿಸಿ, ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಚಂದ್ರಶೇಖರ ಭಟ್ ಹಾಗೂ ಗುರುರಾಜ್ ಭಟ್ ಅವರ ನೇತೃತ್ವದಲ್ಲಿ ಗೋಮಾತೆಗೆ ಬೆಲ್ಲ, ಅಕ್ಕಿ, ಬಾಳೆಹಣ್ಣುಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಇನ್ನು ಪಟ್ಟಣದ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ರಿಪ್ಪನ್‌ಪೇಟೆ ಘಟಕದ ವತಿಯಿಂದ ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ರಿಪ್ಪನ್‌ಪೇಟೆ ಹೋಬಳಿಯ ಕೃಷಿ ಪ್ರಧಾನ ಗ್ರಾಮಗಳಾದ ವಡಗೆರೆ, ಕೆರೆಹಳ್ಳಿ, ಕೆಂಚನಾಲ, ಅಲುವಳ್ಳಿ, ಗವಟೂರು, ಮಳಲಿಕೊಪ್ಪ, ಕೋಡೂರು, ಜೇನಿ, ಮೂಗುಡ್ತಿ, ತಳಲೆ, ಗರ್ತಿಕೆರೆ ಹಾಗೂ ಬಾಳೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ರೈತರು ತಮ್ಮ ಮನೆಗಳ ಕೊಟ್ಟಿಗೆಗಳಲ್ಲಿರುವ ರಾಸುಗಳನ್ನು ಸಿಂಗರಿಸಿ ಗೋಪೂಜೆ ನೆರವೇರಿಸುವ ಮೂಲಕ ಹಬ್ಬವನ್ನು ಆಚರಿಸಿದರು.

ಊರಿನ ಜನತೆ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಭಕ್ತಾದಿಗಳು ಒಟ್ಟಾಗಿ ಸೇರಿ ಗೋಮಾತೆಗೆ ಪೂಜೆ ಸಲ್ಲಿಸಿದರು. ಲೋಕಕಲ್ಯಾಣ, ನಾಡಿನಲ್ಲಿ ಸುಖ-ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು.

ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಚೌಡೇಶ್ವರಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ರಿಪ್ಪನ್ ಪೇಟೆ ಘಟಕದ ವತಿಯಿಂದ ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರಕ್ಕಿ ಗ್ರಾಮದ ರತ್ನಾಕರ್ ಆಚಾರ್ ಹಾಗೂ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ಬಿಳಿಕಿ ಗ್ರಾಮದ ಮಧು ಹಾಗೂ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ರಿಪ್ಪನ್ ಪೇಟೆ ಪೊಲೀಸ್ ಸಿಬ್ಬಂದಿ ಗಿರೀಶ್ ಹಾಗೂ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ಕೀರ್ತಿರಾಜ್ ಮಳಕೊಪ್ಪ ಹಾಗೂ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ಕೆರೆಹಳ್ಳಿ ದೇವರಾಜ್ ಹಾಗೂ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ಆಲುವಳ್ಳಿ ರಾಜೇಂದ್ರ ಜೈನ್ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ತಾಪಂ ಮಾಜಿ ಆಧ್ಯಕ್ಷ ವೀರೇಶ್ ಆಲುವಳ್ಳಿ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
ಪತ್ರಕರ್ತ ಬಸವರಾಜ್ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು
[ರಿಪ್ಪನ್ ಪೇಟೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು]
[ಹೊಸನಗರ ತಾಪಂ ಮಾಜಿ ಸದಸ್ಯರು ಹಾಗೂ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.]
[ಕುಕ್ಕಳಲೆಯ ಕೀರ್ತಿ ಗೌಡ ರವರ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು]
ರಿಪ್ಪನ್‌ಪೇಟೆ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ್ ಹಾಗೂ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು
ರಿಪ್ಪನ್‌ಪೇಟೆ ಗ್ರಾಪಂ ಮಾಜಿ ಅಧ್ಯಕ್ಷ ಎಲ್ ವೆಂಕಟೇಶ್ ಹಾಗೂ ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.