ರಿಪ್ಪನ್ಪೇಟೆ ಕಟ್ಟಡ ಕಾರ್ಮಿಕ ಸಂಘದಿಂದ ಮೇಲಿನ ಸಂಪಳ್ಳಿಯ ಬಡ ಮಹಿಳೆಗೆ ಆರ್ಥಿಕ ನೆರವು|rpet news
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಮಹಿಳೆಯ ಕುಟುಂಬಕ್ಕೆ ರಿಪ್ಪನ್ಪೇಟೆಯ ಕಟ್ಟಡ ಕಾರ್ಮಿಕ ಸಂಘದವರು ಆರ್ಥಿಕ ನೆರವು ನೀಡಿದ್ದಾರೆ. ಗೃಹಲಕ್ಷ್ಮಿಯರ ರಾಜ್ಯದಲ್ಲೊಬ್ಬಳು ನತದೃಷ್ಟ ಲಕ್ಷ್ಮಿ ಎಂಬ ಅಡಿಬರಹದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಇತ್ತೀಚೆಗೆ ವಿಸ್ಕೃತವಾದ ವರದಿ ಮಾಡಲಾಗಿತ್ತಿ ಈ ವರದಿಯನ್ನು ಗಮನಿಸಿದ ರಿಪ್ಪನ್ಪೇಟೆಯ ಕಟ್ಟಡ ಕಾರ್ಮಿಕ ಸಂಘದವರು ಮಹಿಳೆಯನ್ನು ಸಂಪರ್ಕಿಸಿ ನೆರವು ನೀಡಿದ್ದಾರೆ. ನಗದು ಪರಿಹಾರವನ್ನು ನೀಡುವುದರ ಜತೆಗೆ ದಿನಸಿ ವಸ್ತುಗಳ ಕಿಟ್ ಸಹ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ…