Headlines

ನೀರುಪಾಲಾಗಿದ್ದ ವ್ಯಕ್ತಿ ಶವವಾಗಿ ಪತ್ತೆ | person who was drowning was found dead

ನೀರುಪಾಲಾಗಿದ್ದ ವ್ಯಕ್ತಿ ಶವವಾಗಿ ಪತ್ತೆ 


ಸೊರಬ :  ನಿನ್ನೆ ನೀರುಪಾಲಾಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಕೆರೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ವ್ಯಕ್ತಿ ನೀರುಪಾಲಾಗಿದ್ದರು. ಇಂದು ಶವವಾಗಿ ಪತ್ತೆಯಾಗಿದ್ದಾರೆ.

ಸೊರಬ ತಾಲೂಕಿನ ಬಿದರೆಗೇರಿ ಗ್ರಾಮದ ಮಂಜಪ್ಪ (45) ತೂಬುಹೊಂಡದಲ್ಲಿ ಕೈಕಾಲು ತೊಳೆಯಲು ನೀರಿಗೆ ಇಳಿದಿದ್ದರು. ನೀರಿಗೆ ಇಳಿದ ವ್ಯಕ್ತಿ ಮತ್ತೆ ಮೇಲೆ ಬಂದಿರಲಿಲ್ಲ. ನಿನ್ನೆ ಸಂಜೆ 4-5 ರ ಸಮಯದಲ್ಲಿ ಈ ಘಟನೆ ನಡೆದಿದೆ.

ಆತನಿಗಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆದಿದೆ. ಇಂದು ಮಂಜಪ್ಪನವರ ಮೃತದೇಹ ಪತ್ತೆಯಾಗಿದೆ. ಮಂಜಪ್ಪನವರಿಗೆ ಮದುವೆಯಾಗಿದ್ದು ಫೀಡ್ಸ್ ನಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *