ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ | Crime News
ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ ರಾತ್ರಿ ವೇಳೆ ಮಚ್ಚು, ಚಾಕು, ಖಾರದ ಪುಡಿ ಹಿಡಿದುಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು ಮೂವರು ಪರಾರಿಯಾಗಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪುರದಾಳು ರಸ್ತೆಯಲ್ಲಿ ಐವರು ಯುವಕರು ದಾರಿಯಲ್ಲಿ ಹೋಗುವವರನ್ನು ತಡೆದು, ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ರಾತ್ರಿ 11.30ರ ಹೊತ್ತಿಗೆ ಪುರದಾಳು ರಸ್ತೆಯಲ್ಲಿ ಗ್ಯಾಂಗ್ ಇದ್ದ…