ರಿಪ್ಪನ್‌ಪೇಟೆಯ ಸುರೇಶ್ ಬಾಬು ನಿಧನ

ರಿಪ್ಪನ್‌ಪೇಟೆಯ ಸುರೇಶ್ ಬಾಬು ನಿಧನ ರಿಪ್ಪನ್‌ಪೇಟೆ: ಸಮೀಪದ ದೊಡ್ಡಿನಕೊಪ್ಪ ನಿವಾಸಿ ಸುರೇಶ್ ಬಾಬು (67) ಅವರು ಇಂದು ನಿಧನರಾದರು. ಮೂರು ತಿಂಗಳ ಹಿಂದೆ ಪಾಶ್ವವಾಯು (ಸ್ಟ್ರೋಕ್) ಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಜೂನ್ 5ರಂದು (ಶುಕ್ರವಾರ) ರಿಪ್ಪನ್‌ಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.

Read More

HOSANAGARA | ನಿಯಂತ್ರಣ ತಪ್ಪಿ ಧರೆಗೆ ಅಪ್ಪಳಿಸಿದ ಬೈಕ್ – ಓರ್ವ ಸಾವು

HOSANAGARA | ನಿಯಂತ್ರಣ ತಪ್ಪಿ ಧರೆಗೆ ಅಪ್ಪಳಿಸಿದ ಬೈಕ್ – ಓರ್ವ ಸಾವು ಹೊಸನಗರ ; ಸವಾರನ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಬಳಿ ಶನಿವಾರ ಸಂಭವಿಸಿದೆ. ಸೊನಲೆಯ ವಾಸಿ ಸುಮಂತ್ (30) ಸಾವನ್ನಪ್ಪಿದ ಯುವಕನಾಗಿದ್ದಾನೆ. ಸೊನಲೆಯಿಂದ ಹೊಸನಗರದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಧರೆಗೆ ಅಪ್ಪಳಿಸಿ ಈ ಘಟನೆ ನಡೆದಿದೆ. ಸುಮಂತ್ ನಾಗರಾಜ್ ಅವರ ಏಕಮಾತ್ರ…

Read More

Ripponpete | ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿಯ 117 ನೇ ಜನ್ಮ ದಿನಾಚರಣೆ

ರಿಪ್ಪನ್‌ಪೇಟೆ – ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿಯ 117 ನೇ ಜನ್ಮ ದಿನಾಚರಣೆ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಆಚರಿಸಲಾಯಿತು‌. ಪಟ್ಟಣದ ಗ್ರಾಪಂ ಸಭಾಭವನದಲ್ಲಿ ಡಾ.ಶಿವಕುಮಾರ ಸ್ವಾಮೀಜಿರವರ ಭಕ್ತ ವೃಂದ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡಿ ಕಲಿಯುಗದ ನಡೆದಾಡುವ ದೇವರಾದ…

Read More

ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ

ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ ಶಿವಮೊಗ್ಗ : ಜ. 3: ಹೊಸ ವರ್ಷದ ದಿನದಂದು  ವಿಧಾನ ಪರಿಷತ್ ಸದಸ್ಯ ಡಾ!! ಧನಂಜಯ ಸರ್ಜಿ  ಹೆಸರಿನಲ್ಲಿ, ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಪ್ರಮುಖರಿಗೆ ಕೋರಿಯರ್ ಮೂಲಕ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ!!  ಅರವಿಂದ್ ಹಾಗೂ ಡಾ!! ಕೆ ಎಸ್ . ಪವಿತ್ರ ಅವರಿಗೆ ತಮ್ಮ ಹೆಸರಿನಲ್ಲಿ ಸ್ವೀಟ್ ಬಾಕ್ಸ್…

Read More

Hosanagara | ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ 94.14% ಫಲಿತಾಂಶ

Hosanagara | ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ 94.14% ಫಲಿತಾಂಶ ಹೊಸನಗರ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 94.14ರಷ್ಟು ಫಲಿತಾಂಶ ಪಡೆದುಕೊಂಡಿದೆ. ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿರಾವ್‌, ಒಟ್ಟು 386 ಜನ ವಿದ್ಯಾರ್ಥಿಗಳು ಓದುತ್ತಿದ್ದು ಅದರಲ್ಲಿ 10 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಒಟ್ಟು 376 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 354 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 22 ವಿದ್ಯಾರ್ಥಿಗಳು ಒಂದೆರಡು ಅಂಕದಿಂದ…

Read More

ಶಿವಮೊಗ್ಗದ ಹೊಸಮನೆಯಲ್ಲಿ ಝಳಪಿಸಿದ ಲಾಂಗು, ಮಚ್ಚು – ಕಾರು , ಆಟೋ ,ಬೈಕ್ ಧ್ವಂಸ : ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್ ಭೇಟಿ | Crime news

ಶಿವಮೊಗ್ಗದ ಹೊಸಮನೆಯಲ್ಲಿ ಝಳಪಿಸಿದ ಲಾಂಗು, ಮಚ್ಚು – ಕಾರು , ಆಟೋ ,ಬೈಕ್ ಧ್ವಂಸ : ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್ ಭೇಟಿ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಮುನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ ಹಾಗೂ ಬೈಕ್‌ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಗಾಂಜಾ ನಶೆಯಲ್ಲಿ ವಾಹನಗಳನ್ನು ಜಖಂ ಮಾಡಿದ್ದಾರೆ ಎನ್ನಲಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನು ರಾತ್ರೋ ರಾತ್ರಿ‌ ಹಾನಿ ಮಾಡಿದ್ದಾರೆ. ಕಾರಗಳ…

Read More

ಚೂರಿ ಇರಿದು ಯುವಕನ ಹತ್ಯೆ | crime news

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯ ಸಾಯಿನಗರದಲ್ಲಿ ಶುಕ್ರವಾರ ಚೂರಿ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ.  ಕೋಡಿಹಳ್ಳಿ ನಿವಾಸಿ ನವೀನ್ ಕುಮಾರ್ (25) ಮೃತ. ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹೊಸಮನೆ ಸತ್ಯಸಾಯಿನಗರದಲ್ಲಿ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ನವೀನ್ ಗೆ ಇತ್ತೀಚೆನ ಒಂದು…

Read More

ಆಯನೂರಿನಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ…!!!

ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಬೈಕ್ ಸವಾರನನ್ನು ಮಲೇಬೆನ್ನೂರು ನಿವಾಸಿ ಹಬೀಬುಲ್ಲಾ ಎಂದು ಗುರುತಿಸಲಾಗಿದೆ. ಬೈಕ್ ಸವಾರನಿಗೆ ತೀವ್ರ ಪೆಟ್ಟು ಬಿದ್ದಿದ್ದು ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಯನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಅಪಘಾತದ ಸಿಸಿಟಿವಿ ದೃಶ್ಯಾವಳಿಯನ್ನು ಇಲ್ಲಿ ವೀಕ್ಷಿಸಿ👇

Read More

80 ಚೀಲ ಸೊಸೈಟಿ ಅಕ್ಕಿ ವಶ : ಒಬ್ಬನ ಬಂಧನ

ಬುದ್ಧನಗರದಲ್ಲಿ ವಾಹನ ತಪಾಸಣೆ ಮಾಡುವಾಗ ಅಕ್ರಮ ಅಕ್ಕಿ ಸಾಗಾಣಿಕೆ ಪತ್ತೆಯಾಗಿದೆ. ಬಿಪಿಎಲ್ ಕಾರ್ಡ ಹೊಂದಿದವರಿಗೆ ಉಚಿತವಾಗಿ ನೀಡುವ ಅಕ್ಕಿಗಳನ್ನ ಚೀಲದಲ್ಲಿ ತುಂಬಿಸಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಅಕ್ರಮ ಅಕ್ಕಿ ಪತ್ತೆಯಾಗಿದೆ. ಬುದ್ದನಗರದಲ್ಲಿ ಗ್ಯಾಸ್ ಪಂಪ್ ನಲ್ಲಿ ದೊಡ್ಡಪೇಟೆ ಪೊಲೀಸರು ಮತ್ತು ಆಹಾರ ನಿರೀಕ್ಷಕರು ಬ್ಯಾರಿಕೇಡ್ ನಿರ್ಮಿಸಿ ತಪಾಸಣೆ ಮಾಡುವಾಗ ಕೆಎ 15 ಎ ೪೨೬೬ ಕ್ರಮ ಸಂಖ್ಯೆಯ ವಾಹನದಲ್ಲಿ ಅಕ್ರಮ ಅಕ್ಕಿ ಪತ್ತೆಯಾಗಿದೆ.  ೫೦ ಕೆಜಿಯ ಒಟ್ಟು ೮೦ ಚೀಲಗಗಳು ಪತ್ತೆಯಾಗಿದೆ. ಈ ಅಕ್ಕಿಯನ್ನ…

Read More

ಪತಿ ಬೈಕ್ ಅಪಘಾತದಲ್ಲಿ ಸಾವು – ವಿಷಯ ತಿಳಿದು ಪತ್ನಿ ಆತ್ಮಹತ್ಯೆ | ಸಾವಿನಲ್ಲೂ ಒಂದಾದ ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಪತಿ ಬೈಕ್ ಅಪಘಾತದಲ್ಲಿ ಸಾವು – ವಿಷಯ ತಿಳಿದು ಪತ್ನಿ ಆತ್ಮಹತ್ಯೆ | ಸಾವಿನಲ್ಲೂ ಒಂದಾದ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಹೊಸನಗರ : ಇಲ್ಲಿನ ಮೇಲಿನ ಬೆಸಿಗೆ ಗ್ರಾಮದ ಯುವ ದಂಪತಿಗಳು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕು ಮೇಲಿನ ಬೆಸಿಗೆ ಗ್ರಾಮ ಪಂಚಾಯತಿಯ ಸುತ್ತ ಗ್ರಾಮದ ಕಿಲ್ಲೆ ಕ್ಯಾತರ ಕ್ಯಾಂಪಿನ 25ರ ಹರೆಯದ ಮಂಜುನಾಥ ಎಂಬುವವರು ಡಿಸೆಂಬರ್ 31ರ ಸಂಜೆ ಬೈಕಿನಲ್ಲಿ ಶಿಕಾರಿಪುರಕ್ಕೆ ಹೋಗಿದ್ದು ಶಿಕಾರಿಪುರದ ಬಳಿ ಬೈಕ್  ಅಪಘಾತವಾಗಿದ್ದು ಇಂದು ಬೆಳಿಗ್ಗೆ…

Read More