ಅಮೃತ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ರಾಜು ರಾಜೀನಾಮೆ….. ವಿನೋದ ಯೋಗೆಂದ್ರಪ್ಪನವರಿಗೆ ಒಲಿಯಲಿದೆಯ ಅದೃಷ್ಟ…???.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ರಾಜು ರವರು ಇಂದು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಇಂದು ಸಾಗರ ಉಪವಿಭಾಗಧಿಕಾರಿಗಳ ಕಚೇರಿ ಯಲ್ಲಿ ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ . ಮಂಜುಳಾ ರಾಜುರವರು ಹದಿನೇಳು ತಿಂಗಳ ಕಾರ್ಯಭಾರದ ನಂತರ ಇಂದು ರಾಜಿನಾಮೆ ನೀಡಿದ್ದಾರೆ. ಹದಿನೈದು ತಿಂಗಳ ಅವಧಿಗೆ ಮಾತಾಗಿತ್ತು ಎಂದು ಒಂದು ಬಣ, ಇಲ್ಲಾ ಇಲ್ಲಾ ಪೂರ್ತಿ ಮೂವತ್ತು ತಿಂಗಳಿಗೂ ಇವರೇ ಅಧ್ಯಕ್ಷರು ಎಂದು ಇನ್ನೊಂದು ಬಣದ…

Read More

ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಕೆ – ಸಾಗರದಲ್ಲಿ ಜನಸಾಗರ|nomination

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹರತಾಳು ಹಾಲಪ್ಪನವರು ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಹೊಳೆಕೊಪ್ಪದ ಧನಾಂಜನೇಯಸ್ವಾಮಿ ದೇವಸ್ತಾನದಲ್ಲಿ ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ಹಾಲಪ್ಪನವರು ನಂತರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರೆವಣಿಗೆ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ಕಾಗೋಡು ಪುತ್ರಿ ರಾಜನಂದಿನ ಜೊತೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೇರಿಸುವ ಮೂಲಕ ಹಾಲಪ್ಪ ಶಕ್ತಿ ಪ್ರದರ್ಶನ ಮಾಡಿದರು….

Read More

ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ|Rain

ಶಿವಮೊಗ್ಗ : ಬಾರಿ ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆಯಾಗುತ್ತಿದೆ . ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿ, ಗುಡುಗು ಸಹಿತ ಜೋರಾಗಿ ಮಳೆಯ ಸುರಿಯಲು ಆರಂಭವಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.ಇನ್ನು ಭದ್ರಾವತಿ ಯಲ್ಲೂ ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.  ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಾಗುತ್ತಿದ್ದಂತೆ ಖುಷಿಯಾದರು. ದಿಢೀರ್‌ ಮಳೆಯಿಂದಾಗಿ ಜನರು ಅಂಗಡಿಗಳು,…

Read More

ಗಾಂಧೀಜಿಯ ಆದರ್ಶಗಳೇ ದೇಶದ ಶಕ್ತಿ – ಬಿ‌ ಜಿ ಚಂದ್ರಮೌಳಿ

ಗಾಂಧೀಜಿಯ ಆದರ್ಶಗಳೇ ದೇಶದ ಶಕ್ತಿ – ಬಿ‌ ಜಿ ಚಂದ್ರಮೌಳಿ ಹೊಸನಗರ: ಸತ್ಯ, ಪ್ರಾಮಾಣಿಕತೆ ಹಾಗೂ ಜನಪರ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ತತ್ತ್ವ–ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಬಿಜಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಹಿಂಸೆಯೇ ಗಾಂಧೀಜಿಯವರ ಮಹಾಸ್ತ್ರ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲು ಅಕ್ಟೋಬರ್ 2 ಅನ್ನು ರಾಷ್ಟ್ರದಾದ್ಯಂತ…

Read More

ಶಿವಮೊಗ್ಗದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ – ಬಂದ್ ಗೆ ನೀರಸ ಪ್ರತಿಕ್ರಿಯೆ|kaveri issue

ಶಿವಮೊಗ್ಗದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ – ಬಂದ್ ಗೆ ನೀರಸ ಪ್ರತಿಕ್ರಿಯೆ ಶಿವಮೊಗ್ಗ : ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಅಶೋಕ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬೆಳ್ಳಂಬೆಳಗ್ಗೆ ಕಾವೇರಿ ಹೋರಾಟ ನಡೆಸಿದ ಕನ್ನಡ ಪರ ಸಂಘಟನೆಗಳು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಕರವೇ ಹಾಗೂ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಾವೇರಿ ನಮ್ಮದು, ಕಾವೇರಿ…

Read More

ಭಾರೀ ಮಳೆ : ಮನೆ ಗೋಡೆ ಕುಸಿದು ವೃದ್ಧೆ ಸಾವು

ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಹೊರವಲಯದ ಮಲವಗೊಪ್ಪ ಬಳಿಯ ಇಂದಿರಾ ಕಾಲೋನಿಯಲ್ಲಿ ನಡೆದಿದೆ.  ಇಂದಿರಾ ಕಾಲೋನಿ ನಿವಾಸಿ ಗೌರಮ್ಮ ಮೃತ ದುರ್ದೈವಿಯಾಗಿದ್ದಾರೆ. ನಿರಂತರ ಮಳೆಯಿಂದಾಗಿ ಗೌರಮ್ಮ ಅವರ ಮನೆ ಗೋಡೆಗಳು ತೇವಗೊಂಡಿದ್ದು, ನಿನ್ನೆ ತಡರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಗೌರಮ್ಮ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಗೌರಮ್ಮ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಹಾಗೂ ಪಾಲಿಕೆ ಸದಸ್ಯ ಆರ್.ಸಿ ನಾಯ್ಕ್ ಭೇಟಿ…

Read More

ಡೆತ್ ನೋಟ್ ಬರೆದಿಟ್ಟು ಯಡಗುಡ್ಡೆ ಬೆಟ್ಟದ ಮೇಲೆ ಅಗ್ನಿಸ್ಪರ್ಶ ಮಾಡಿಕೊಂಡ ಮಹಿಳೆ…!!!! ಜ್ಯೋತಿಷಿ ಮಾತು ಕೇಳಿ ಮೋಕ್ಷ ಪ್ರಾಪ್ತಿಗೆ ಆತ್ಮಹತ್ಯೆ ಮಾಡಿಕೊಂಡರಾ ಜಯಶ್ರೀ…????ಈ ಸುದ್ದಿ ನೋಡಿ|sucide

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಸೋಮವಾರದಿಂದ ಹೊದಲ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಸಮೀಪದ ಹೊಸಳ್ಳಿ ಗ್ರಾಮದ ಜಯಶ್ರೀ (52) ಎಂಬುವರು ನಾಪತ್ತೆಯಾಗಿದ್ದರು.  ಜ. 23 ರಂದು ಸಂಜೆ ವಾಕಿಂಗ್ ಹೋದವರು ಮನೆಗೆ ಹಿಂದಿರುಗಿಲ್ಲ. ಎಂದು ದೂರು ದಾಖಲಾಗಿತ್ತು. ಜ. 27ರಂದು ಯಡಗುಡ್ಡೆ ಗ್ರಾಮದ ಗುಡ್ಡದ ಮೇಲೆ ಜಯಶ್ರೀ ಅವರ ಶವ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ….

Read More

ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ – ಹಲವು ಬೈಕ್ ಗಳು ಸುಟ್ಟು ಭಸ್ಮ

ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ – ಹಲವು ಬೈಕ್ ಗಳು ಸುಟ್ಟು ಭಸ್ಮ ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ  ಅಗ್ನಿ ಅವಘಡ ಸಂಭವಿಸಿದ್ದು ಈ ಅವಘಡಕ್ಕೆ ಮಾಜಿ ಉದ್ಯೋಗಿಯೇ ಕಾರಣ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ನಗರದ ಕಾರ್ತಿಕ್‌ ಮೋಟರ್ಸ್‌ ಶೋ ರೂಂನಲ್ಲಿ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬೆಂಕಿಯಿಂದಾಗಿ ಶೋ ರೂಂನಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಒಳಾಂಗಣ ವಿನ್ಯಾಸ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ….

Read More

ರಿಪ್ಪನ್‌ಪೇಟೆ : ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು ನೀಡಿದ ಜಾನಪದ ಕಲಾ ಪ್ರಕಾರ|rpet

ರಿಪ್ಪನ್‌ಪೇಟೆ: ಪಟ್ಟಣದ  ಕಸ್ತೂರಿ ಕನ್ನಡ ಸಂಘ ಹಾಗೂ  ಡಾ.ಪುನಿತ್‌ ರಾಜ್‍ಕುಮಾರ್ ಅಭಿಮಾನಿ ಬಳಗ ಮಂಗಳವಾರ  ಆಯೋಜಿಸಿದ್ದ 68ನೇ ಕರ್ನಾಟಕ  ರಾಜ್ಯೋತ್ಸವದ  ಅದ್ಧೂರಿ ಕನ್ನಡ ನುಡಿ ಸಂಭ್ರಮಕ್ಕೆ  ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು . ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರಾ  ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಬ್ರಹ್ಮಾವರದ ಅಂಕದಮನೆ ಜಾನಪದ ಕಲಾ ತಂಡದ ಕಂಗಿಲು ನೃತ್ಯ,ಉಡುಪಿಯ ಮಹಾಗಣಪತಿ ಚಂಡೆ ಬಳಗ,ಮಂಗಳೂರಿನ…

Read More

Anandapura | ಅಡಿಕೆ ಕಳ್ಳರ ಬಂಧನ – ಲಕ್ಷಾಂತರ ರೂ ಮೌಲ್ಯದ ಅಡಿಕೆ ವಶಕ್ಕೆ

Anandapura | ಅಡಿಕೆ ಕಳ್ಳರ ಬಂಧನ – ಲಕ್ಷಾಂತರ ರೂ ಮೌಲ್ಯದ ಅಡಿಕೆ ವಶಕ್ಕೆ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 8 ಪ್ರಕರಣಗಳನ್ನು ಪತ್ತೆ ಮಾಡಿ 5 ಆರೋಪಿಗಳನ್ನು ಬಂಧಿಸಿ ಅವರಿಂದ ₹ 15.19 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌ ಹೇಳಿದರು. ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ತುಕ್‌ರಾಜ್‌ (24), ಹಣಮಂತ (24), ರಾಕೇಶ್‌ (20), ಅಭಿಷೇಕ್‌ (20), ಶಿವಕುಮಾರ್‌ (23) ಬಂಧಿತರು. ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌ ಮತ್ತು ಸೊರಬ…

Read More