Headlines

ಸಚಿವ ಮಧು ಬಂಗಾರಪ್ಪ ಗೂಂಡಾಗಿರಿ ಮಾಡುವುದನ್ನು ಬಿಡಬೇಕು: ಹರತಾಳು ಹಾಲಪ್ಪ | Madhu Bangarappa should stop being a bully

ಸಚಿವ ಮಧು ಬಂಗಾರಪ್ಪ ಗೂಂಡಾಗಿರಿ ಮಾಡುವುದನ್ನು ಬಿಡಬೇಕು: ಹರತಾಳು ಹಾಲಪ್ಪ

ಸಚಿವ ಮಧು ಬಂಗಾರಪ್ಪ ಅವರು ವಿಕಸಿತ ಭಾರತ ಯಾತ್ರೆಗೆ ಹೋದಾಗ ಕಾಂಗ್ರೆಸ್(congress) ಕಾರ್ಯಕರ್ತರನ್ನು ಬಿಟ್ಟು ಗೊಂದಲ ಮಾಡುವ ಕೆಲಸ ಮಾಡಿದ್ದಾರೆ. ಮಧು ಬಂಗಾರಪ್ಪ ಗುಂಡಾಗಿರಿ ಮಾಡುವುದನ್ನು ಬಿಡಬೇಕು. ಅವರ ನಡುವಳಿಕೆಗಳು ಮಾತುಗಳು ಸರಿಯಿಲ್ಲ. ಮಧು ಬಂಗಾರಪ್ಪ ಕ್ಷಮೆ ಕೇಳಬೇಕು.ಅಧಿಕಾರಿಗಳಿಗೆ ಹೆದರಿಸುವ ಕ್ರಮ ಸರಿಯಲ್ಲ. ಮಂತ್ರಿಯಾಗಿ ಗುಂಡಾ ವರ್ತನೆ ಮಾಡುವುದನ್ನ ಬಿಡಬೇಕು ಎಂದು ಮಾಜಿ ಸಚಿವ , ಬಿಜೆಪಿ(BJP) ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ‌ ಹೇಳಿದರು.

ಶಿವಮೊಗ್ಗ(shivamogga)ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಅಧಿಕಾರಿಗಳ ಸಭೆ ನಡೆಸಿ ವಿಕಸಿತ ಯಾತ್ರೆಗೆ ಹೋದರೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ಹೋಗದಂತೆ ಅಧಿಕಾರಿಗಳನ್ನು ತಡೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇವೆಂದು ಪ್ರಮಾಣ ಮಾಡಿರುತ್ತಾರೆ. ಕೂಡಲೇ ಮುಖ್ಯಮಂತ್ರಿಗಳು ಮಧು ಬಂಗಾರಪ್ಪನವರನ್ನು ವಜಾಗೊಳಿಸಬೇಕು. ಮಧು ಬಂಗಾರಪ್ಪ ಮಾತಾಡಿರೋದು ಸರಿ ಅಲ್ಲ. ಕೂಡಲೇ ರಾಜೀನಾಮೆ ನೀಡಬೇಕು ಎಂದರು.

ಬಡವರ ಕಾರ್ಯಕ್ರಮ ಜಾರಿಗೊಳಿಸುವುದನ್ನ ಇವರು ವಿರೋಧ ಮಾಡುತ್ತಿದ್ದಾರೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಮಧು ಬಂಗಾರಪ್ಪ ಮಂತ್ರಿಯಾದ ಕೂಡಲೇ ಗಣರಾಜ್ಯ ಆಗಲು ಸಾಧ್ಯವಿಲ್ಲ ಎಂದರು.

ವಿಕಸಿತ ಭಾರತ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ಗ್ರಾಮ ಪಂಚಾಯತಿಯಲ್ಲೂ ನಾವು ತಲುಪಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಬಗ್ಗೆ ಈ ಯಾತ್ರೆ. ಕೇಂದ್ರ ಸರ್ಕಾರದ ಯೋಜನೆಗಳು ಸಿಗದೆ ಹೋದರೆ ಸ್ಥಳದಲ್ಲೇ ಪರಿಹಾರ ನೀಡುವ ಯಾತ್ರೆಯಿದು ಎಂದರು.

Leave a Reply

Your email address will not be published. Required fields are marked *