ರಿಪ್ಪನ್‌ಪೇಟೆ: ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಡಾ.ಪುನಿತ್ ರಾಜ್‍ಕುಮಾರ್ ಅಭಿಮಾನಿ ಬಳಗ ಮಂಗಳವಾರ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಕನ್ನಡ ನುಡಿ ಸಂಭ್ರಮಕ್ಕೆ ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು .
ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರಾ ಮೆರವಣಿಗೆಗೆ ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ ಬ್ರಹ್ಮಾವರದ ಅಂಕದಮನೆ ಜಾನಪದ ಕಲಾ ತಂಡದ ಕಂಗಿಲು ನೃತ್ಯ,ಉಡುಪಿಯ ಮಹಾಗಣಪತಿ ಚಂಡೆ ಬಳಗ,ಮಂಗಳೂರಿನ ಶಬರಿ ಚಂಡೆ ಬಳಗದವರ ಚಂಡೆ ನೃತ್ಯದೊಂದಿಗೆ ವಿವಿಧ ಶಾಲಾ ಕಾಲೇಜುಗಳ ವಾದ್ಯ ಘೋಷ್ ಮೆರವಣಿಗೆಗೆ ಸಾಥ್ ನೀಡಿದವು .
ತೆರೆದ ವಾಹನದಲ್ಲಿ ಅನಾವರಣಗೊಂಡ ಭಾರೀ ಗಾತ್ರದ ತಾಯಿ ಭುವನೇಶ್ವರಿ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರ ಹಾಗೂ ರಾಷ್ಟ್ರ ಶಕ, ಪುರುಷರ ವಿವಿಧ ವೇಷ ಭೂಷಣಗಳ ಧಿರಿಸು ತೊಟ್ಟು ಸಂಭ್ರಮಿಸಿದ ಪುಟಾಣಿಗಳ ಸಾಲು , ಸಹಸ್ರಾರು ಸಂಖ್ಯೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳ ಪಥಸಂಚಲನದ ಅಕರ್ಷಣೆಯ ಮೆರವಣಿಗೆ ದಾರಿಹೋಕರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.
ಕಸ್ತೂರಿ ಕನ್ನಡ ಸಂಘದ ಉಲ್ಲಾಸ್ ತೆಂಕೋಲ್,ಪ್ರಧಾನ ಕಾರ್ಯದರ್ಶಿ ಶ್ರೀಧರ್ , ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಮಾಜಿ ಅಧ್ಯಕ್ಷರಾದ ಅರ್ ಎ ಚಾಬುಸಾಬ್ , ಆನಂದ್ ಮೆಣಸೆ ,ಮುಖಂಡರಾದ ಆರ್ ಎನ್ ಮಂಜುನಾಥ್, ಆರ್ ರಾಘವೇಂದ್ರ, ಗ್ರಾಮ ಪಂಚಾಯ್ತಿ ಆಡಳಿತ ವರ್ಗ ಹಾಗೂ ಸದಸ್ಯರು , ನಾಡ ಕಚೇರಿ ಉಪ ತಹಸಿಲ್ದಾರ್ ಹುಚ್ಚರಾಯಪ್ಪ , ಪಿಎಸ್ ಐ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು , ವಿವಿಧ ಸಂಘ ಸಂಸ್ಥೆಗಳ ಮತ್ತು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜ್ ಶಿಕ್ಷಣ ಸಂಸ್ಥೆಯ ಪ್ರಮುಖರು ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.