ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆ ಶಬರೀಶನಗರ ನಿವಾಸಿ ಭರತ್ ಹಾಗು ಶ್ವೇತ ದಂಪತಿಯ ಏಳು ತಿಂಗಳಿಗೆ ಜನಿಸಿದ ಹಸುಗೂಸು ಉಸಿರಾಟದ ಸಮಸ್ಯೆಯಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ವೈಯಕ್ತಿಕ ಧನ ಸಹಾಯ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಉಸಿರಾಟದ ತೊಂದರೆ, ಸೆಳವು ಅಥವಾ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಅಸಮರ್ಥತೆಯ ಮತ್ತು ಮೆದುಳಿನಲ್ಲಿ ನೀರು ತುಂಬಿಕೊಂಡಿರುವ ತೊಂದರೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗಲಿದೆ ಎಂದು ಕುಟುಂಬ ಅಳಲು ತೋಡಿಕೊಂಡಿತ್ತು.
ಈ ಕುಟುಂಬದಲ್ಲಿ ಲಕ್ಷಾಂತರ ವೆಚ್ಚ ಪಾವತಿಸಲು ಆರ್ಥಿಕವಾಗಿ ಬಲಹೀನರಾಗಿದ್ದಾರೆ.ಸಹೃದಯಿ ದಾನಿಗಳು ಈ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ನೆರವಾದಿತು ಮಾತ್ರವಲ್ಲ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಾಧ್ಯವಿದೆ ಎಂದು ಪೋಸ್ಟ್ ಮ್ಯಾನ್ ನ್ಯೂಸ್ ಕೆಲದಿನಗಳ ಹಿಂದೆ “ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಸುಗೂಸು : ಸಹಾಯಕ್ಕಾಗಿ ಯಾಚನೆ” ಅಡಿ ಬರಹದಲ್ಲಿ ಸುದ್ದಿ ಪ್ರಕಟಿಸಿತ್ತು.ಇದಕ್ಕೆ ಸ್ಪಂದಿಸಿರುವ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರು ಇಂದು ಶಬರೀಶ ನಗರದ ಮಗುವಿನ ಮನೆಗೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಈ ಸಂಧರ್ಭದಲ್ಲಿ ಅರಸಾಳು ಗ್ರಾ ಪಂ ಅಧ್ಯಕ್ಷರಾದ ಉಮಾಕರ, ಅರಸಾಳು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮಂತ.ರಿಪ್ಪನ್ ಪೇಟೆ ಗ್ರಾಪಂ ಸದಸ್ಯರಾದ ಚಂದ್ರೇಶ್, ಮುಖಂಡರು ಗಳಾದ ಕೆರೆಹಳ್ಳಿ ರವೀಂದ್ರ,ಉಲ್ಲಾಸ್,ಫ಼್ಯಾನ್ಸಿ ರಮೇಶ್,ನಾಗಪ್ಪ,ಖಲೀಲ್ ಗಾಳಿಬೈಲ್,ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ವಾಸು ಹಾಗೂ ಇನ್ನಿತರರಿದ್ದರು.
ಯಾರಾದರೂ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವವರು ಈ ಖಾತೆ ಸಂಖ್ಯೆ ಹಾಗೂ ಗೂಗಲ್ ಪೇ ಸಂಖ್ಯೆಯನ್ನು ಸಂಪರ್ಕಿಸಿ.ತಮ್ಮ ಕೈಲಾದ ಸಹಾಯ ಮಾಡಿ
ಹೆಸರು -ಭರತ್
ಕೆನರಾ ಬ್ಯಾಂಕ್ ಖಾತೆ ನಂ : 0534119019211
IFSC ಕೋಡ್ -CNRB0000534
ಬ್ರಾಂಚ್ -ರಿಪ್ಪನ್ ಪೇಟೆ
ಫೋನ್ ಪೇ/ ಗೂಗಲ್ ಪೇ -8971421052
ಹೆಚ್ಚಿನ ಮಾಹಿತಿಗೆ ಈ ನಂಬರ್ ಗೆ ಕರೆ ಮಾಡಿ : 8971421052