ರಿಪ್ಪನ್ ಪೇಟೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜೆ ಎನ್ ಷಣ್ಮುಖಪ್ಪ ಗೌಡ ನಿಧನ :

ರಿಪ್ಪನ್ ಪೇಟೆ : ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜಯದೇವ ರೈಸ್ ಮಿಲ್ ನ ಮಾಲೀಕರಾದ ಜೆ ಎನ್ ಷಣ್ಮುಖಪ್ಪ ಗೌಡರು(99) ಇಂದು ರಿಪ್ಪನ್ ಪೇಟೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ ತಮ್ಮ ರಿಪ್ಪನ್ ಪೇಟೆಯ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಏಳು ಪುತ್ರರು,ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ಹೋರಾಟಗಾರ ಜೆ ಎನ್…

Read More

ಸಾಗರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ : ಲಾರಿ ಕದ್ದು ಪರಾರಿಯಾದವರು 10 ದಿನಗಳಲ್ಲೇ ಅರೆಸ್ಟ್…!

ಸಾಗರ: ಅಂದಾಜು 7.50 ಲಕ್ಷ ಮೌಲ್ಯದ ಲಾರಿಯನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಕರಣ ದಾಖಲಾದ ಹತ್ತೇ ದಿನಗಳಲ್ಲಿ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ನಿವಾಸಿ ಬಿ.ಕೆ.ಕರಿಬಸಪ್ಪ ಅಲಿಯಾಸ್ ಕರಿಯ(32) ಎಂಬಾತನೇ  ಬಂಧಿತ ಆರೋಪಿ. ಈತನ ಬಳಿಯಿಂದ ಕದ್ದಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ವಿವರ: ಆನಂದಪುರ ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಲಾರಿಯನ್ನು ಮಾರ್ಚ್ 3ರಂದು ರಾತ್ರಿ ಹೊತ್ತಲ್ಲಿ ಕಳ್ಳತನ ಮಾಡಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಾಗರ ಗ್ರಾಮಾಂತರ ಠಾಣೆಯ ವೇರಿ ಸ್ಮಾರ್ಟ್…

Read More

ಭೀಕರ ರಸ್ತೆ ಅಪಘಾತ : ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳ ಸಾವು

ಭದ್ರಾವತಿಯ ಹುಣಸೇಕಟ್ಟೆ ಜಂಕ್ಷನ್ ಬಳಿ ರಸ್ತೆ ಅಪಘಾತವಾಗಿದ್ದು  ಕುವೆಂಪು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ 10-30 ರ ಸಮಯದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉತ್ತಮ ಚಕ್ರವರ್ತಿ, ಮನೋಜ್ ಎಂಬ ಇಬ್ಬರು ಯುವಕರು ಶಂಕರಘಟ್ಟದಿಂದ ಭದ್ರಾವತಿಗೆ ಹೋಗುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಉತ್ತಮ ಚಕ್ರವರ್ತಿ ಮತ್ತು ಮನೋಜ್ ಇಬ್ಬರು ಎನ್ ಆರ್ ಪುರದ ನಿವಾಸಿಗಳಾಗಿದ್ದು, ಉತ್ತಮ್ ಚಕ್ರವರ್ತಿ ಎಂಸಿಎ…

Read More

ಹೊಸನಗರ : 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಆಕಸ್ಮಿಕವಾಗಿ 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪದಲ್ಲಿ ನಡೆದಿದೆ.  ಮಾವಿನಕೊಪ್ಪದ ನಿವಾಸಿಯಾದ ಯಶೋದಮ್ಮ (60) ಬಾವಿಗೆ ಬಿದ್ದ ಮಹಿಳೆ. ಮಾನಸಿಕವಾಗಿ ದುರ್ಬಲರಾಗಿದ್ದ ಯಶೋದಮ್ಮ, ತಮ್ಮ ಮನೆಯ ಹಿಂದಿನ ಬಾವಿಗೆ ಬಿದ್ದಿದ್ದಾರೆ. ಇನ್ನು ಮನೆಯಲ್ಲಿ ಅತ್ತೆ ಕಾಣದಿದ್ದಾಗ ಸೊಸೆ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡ ಸೊಸೆ‌. ಅನುಮಾನದಿಂದ ಬಾವಿಯಲ್ಲಿ ನೋಡಿದ್ದಾರೆ.  ಅತ್ತೆ…

Read More

ಸಮಾಜ ಸೇವಕ , ಗುಡ್ ಶೆಫರ್ಡ್ ಚರ್ಚ್ ಮಾಜಿ ಅಧ್ಯಕ್ಷ ಕೆ ಎಂ ಜೊಸೇಫ್ ನಿಧನ

ಸಮಾಜ ಸೇವಕ , ಗುಡ್ ಶೆಫರ್ಡ್ ಚರ್ಚ್ ಮಾಜಿ ಅಧ್ಯಕ್ಷ ಕೆ ಎಂ ಜೊಸೇಫ್ ನಿಧನ K.M. Joseph (76), a noted social worker and Congress leader from Halagudde, has passed away. Former Good Shepherd Church president, his funeral will be held on April 25. ರಿಪ್ಪನ್ ಪೇಟೆ : ಹಾಲಗುಡ್ಡೆ ಗ್ರಾಮದ ಖ್ಯಾತ ಸಮಾಜಸೇವಕ ಹಾಗೂ ಹಿರಿಯ ರಾಜಕೀಯ ಮುಖಂಡ ಕೆ. ಎಂ ಜೋಸೆಫ್ (76)…

Read More

POSTMAN NEWS ವರದಿಗೆ ಎಚ್ಚೆತ್ತ ಅಧಿಕಾರಿಗಳು – ಅನಧಿಕೃತ ಕಟ್ಟಡ ತೆರವಿಗೆ ಮಾಲೀಕರಿಗೆ ವಾರ್ನಿಂಗ್

POSTMAN NEWS ವರದಿಗೆ ಎಚ್ಚೆತ್ತ ಅಧಿಕಾರಿಗಳು – ಅನಧಿಕೃತ ಕಟ್ಟಡ ತೆರವಿಗೆ ಮಾಲೀಕರಿಗೆ ವಾರ್ನಿಂಗ್  ರಿಪ್ಪನ್‌ಪೇಟೆ ; ಪಟ್ಟಣದ ಅಭಿವೃದ್ಧಿಯ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಆಸಕ್ತಿಯಿಂದ ರಸ್ತೆಗಳನ್ನು ಅಗಲೀಕರಣಗೊಳಿಸಿ ಪಟ್ಟಣವನ್ನು ಸುಂದರವನ್ನಾಗಿಸುವ ಪ್ರಯತ್ನದ ಮೊದಲ ಹಂತವಾಗಿ ಸಾಗರ ರಸ್ತೆ ಅಗಲೀಕರಣ ಕಾಮಗಾರಿ ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಈ ಅಭಿವೃದ್ಧಿ ಕೆಲಸಕ್ಕೆ ಪಟ್ಟಣದ ಶೇ 99%ರಷ್ಟು  ಕಟ್ಟಡ ವಾರಸು­ದಾರರು ಸ್ವಯಂ ಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಿದ್ದಾರೆ ಆದರೆ ಬೆರಳಣಿಕೆ ವ್ಯಾಪಾರಸ್ಥರು ಮಾತ್ರ ತೆರವುಗೊಳಿಸು­ವುದಕ್ಕೆ ವಿಳಂಬ ಧೋರಣೆ…

Read More

ಡಿನೋಟಿಫಿಕೇಷನ್ ರದ್ದುಗೊಳಿಸಿದ ರಾಜ್ಯ ಸರ್ಕಾರ : ಅತಂತ್ರಗೊಂಡ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು|Sharavathi

ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು ಮತ್ತೆ ಕಮರಿ‌ ಹೋಗಿದೆ.ನ್ಯಾಯಾಂಗ ನಿಂದನೆ ಭಯದಿಂದ‌ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ರದ್ದುಗೊಳಿಸಿದೆ. ಈ ಮೂಲಕ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿರುವ ಮುಳುಗಡೆ ಸಂತ್ರಸ್ತರನ್ನು ಸರ್ಕಾರ ಮತ್ತೊಮ್ಮೆ ಅನಾಥರನ್ನಾಗಿಸಿದೆ. ಹೌದು, ವಿದ್ಯುತ್ ಉತ್ಪಾದನೆ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಶಿವಮೊಗ್ಗದ ಸಾಗರ, ಹೊಸನಗರ ತಾಲೂಕಿನ 166 ಗ್ರಾಮಗಳ 6,177 ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿತ್ತು. ಅಂದಿನ‌ ರಾಜ್ಯ ಸರ್ಕಾರ 1962 ರಲ್ಲಿಯೇ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನ…

Read More

ನೇಣು ಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ರಿಪ್ಪನ್‌ಪೇಟೆಯ ಯುವಕ ಸಚಿನ್ :

ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣು ಬಿಗಿದುಕೊಂಡಿರುವ ಘಟನೆ ರಿಪ್ಪನ್‌ಪೇಟೆಯ ನೆಹರು ಬಡಾವಣೆಯಲ್ಲಿ ನಡೆದಿದೆ. ರಿಪ್ಪನ್ ಪೇಟೆ ಗವಟೂರು ಗ್ರಾಮದ ನೆಹರು ಬಡಾವಣೆಯ ನಿವಾಸಿ  ದಿ|| ಶ್ರೀನಿವಾಸ್ ರವರ ಪುತ್ರ ಯುವಕ ಸಚಿನ್(25) ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಾತ್ರಿ ಮನೆಯಲ್ಲಿ ತಾಯಿಯೊಂದಿಗೆ ಊಟ ಮುಗಿಸಿಕೊಂಡು ಪಕ್ಕದ ರೂಮಿನಲ್ಲಿ ಮಲಗಿದ್ದ ಸಚಿನ್ ಬೆಳಿಗ್ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತನ ಮರಣೋತ್ತರ ಪರೀಕ್ಷೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ…

Read More

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನ್ಲೆ ಕ್ರಾಸ್ ಬಳಿಯಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ.  ತಾಳಗುಪ್ಪ-ಸಾಗರ ರಸ್ತೆ ನಡುವಲ್ಲಿ ನಿನ್ನೆ ಸಂಜೆ  06:50 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಎರಡು ಬೈಕ್​ಗಳು ಪರಸ್ಪರ ಡಿಕ್ಕಿಯಾಗಿದ್ದು, ಶಿರಸಿ ಮೂಲದ ಮಣಿ ಎಂಬ ಯುವಕ ಸಾವನ್ನಪ್ಪಿದ್ದಾನೆ.  ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ಧಾನೆ. ಆತನನ್ನು ಸಹ ಶಿರಸಿ ಮೂಲದ ಮಂಜುನಾಥ್​ ಎನ್ನಲಾಗಿದ್ದು, ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ ಸವಾರನಿಗೂ ಗಾಯಗಳಾಗಿದ್ದು,…

Read More