Headlines

ಹುಲಿಕಲ್ ಘಾಟ್ ಭೀಕರ ಅಪಘಾತ ಪ್ರಕರಣ : ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು – ಮೃತರ ಸಂಖ್ಯೆ ಮೂರಕ್ಕೆ ಏರಿಕೆ|Hulikal accident

ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯು ಮೃತಪಟ್ಟಿದ್ದಾರೆ. ಗುರುವಾರ ತಡರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ನಂತರ ಚಂದ್ರಗಿರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಕಂಪದ ಕೈ ರವಿ ರವರ ಪತ್ನಿ ಶಾಲಿನಿ ಮೃತಪಟ್ಟಿದ್ದಾರೆ. ಘಟನೆಯ ಹಿನ್ನಲೆ: ಗುರುವಾರ ರಾತ್ರಿ ಹುಲಿಕಲ್ ಘಾಟ್ ನಲ್ಲಿ  ಬೈಕ್ ನಲ್ಲಿ ತೆರಳುತ್ತಿರುವವರ ಮೇಲೆ…

Read More

ಹಾವೇರಿ ಪತ್ರಿಕಾ ಭವನದಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ಅದ್ಧೂರಿ ಸನ್ಮಾನ | SHIVANANDA PATIL

Haveri District Journalists Association honored Karnataka Minister Shivanand Patil after he donated Rs 5 lakh to the welfare fund and assured drinking water projects for 410+ villages. ಹಾವೇರಿ ಪತ್ರಿಕಾ ಭವನದಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ಅದ್ಧೂರಿ ಸನ್ಮಾನ ಹಾವೇರಿ: ಹಾವೇರಿ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ…

Read More

ಕಾಗೋಡು ಪುತ್ರಿ ರಾಜನಂದಿನಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ – ನನ್ನ ಎದೆಗೆ ಚೂರಿ ಹಾಕಿದ ಹಾಗೇ ಆಗುತ್ತಿದೆ – ಕಾಗೋಡು|Kagodu

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪರವರ ಪುತ್ರಿ ರಾಜನಂದಿನಿ ಹಾಗೂ ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ರಾಜನಂದಿನಿ KPCC ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಯವರನ್ನು ಭೇಟಿ ಮಾಡಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು….

Read More

ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿರಾಯ : ಆರೋಪಿ ಬಂಧನ

ಪತ್ನಿಯನ್ನು ಚಾಕುವಿನಿಂದ ಇರಿದು ಪತಿಯೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಇಂದು ನಡೆದಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ. ಕರುಣಾಕರ ಎಂಬ 33 ವರ್ಷದ ಎಂಬಿಎ ಪದವೀಧರ ಎರಡು ವರೆ ವರ್ಷದ ಹಿಂದೆ ಬುಳ್ಳಾಪುರದ ಯುವತಿ ಅಮಿತಾ(26) ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದರು ಮಕ್ಕಳಾಗಿರಲಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಪದೇ ಪದೇ ಜಗಳವಾಡುತ್ತಿದ್ದ ಪತಿಪತ್ನಿ ಕಳೆದ ವರ್ಷ ಗಂಡನ ಮನೆ ತೊರೆದು ಪತ್ನಿ ಅಮಿತಾ ತವರು ಮನೆ…

Read More

ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಶುಭಾರಂಭಗೊಂಡ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ : ಮಾಜಿ ಶಾಸಕರಿಂದ ಉದ್ಘಾಟನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ ಮತ್ತು ಪರಮೇಶ್ ಮೆಡಿಕಲ್ ಇಂದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ಶುಭಾರಂಭಗೊಂಡಿದೆ. ಇಂದು ಬೆಳಿಗ್ಗೆ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ಉದ್ಘಾಟಿಸಿ ಶುಭ ಹಾರೈಸಿದರು.ಮಾಜಿ ಶಾಸಕ ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರಾದ ಡಾ ಜಿ ಡಿ ನಾರಾಯಣಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ರಿಪ್ಪನ್ ಪೇಟೆ ಹಾಗೂ ಸುತ್ತ ಮುತ್ತಲ ಭಾಗಗಳ ಜನರಿಗೆ ಅದರಲ್ಲೂ…

Read More

HIT AND RUN | ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ – ಯುವತಿಗೆ ಗಂಭೀರ ಗಾಯ , ಬೈಕ್ ಸವಾರ ಪರಾರಿ

Collision between bike and scooty – Young woman seriously injured, biker flees HIT AND RUN | ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ – ಯುವತಿಗೆ ಗಂಭೀರ ಗಾಯ , ಬೈಕ್ ಸವಾರ ಪರಾರಿ Collision between bike and scooty – Young woman seriously injured, biker flees Collision between bike and scooty – Young woman seriously injured, biker flees ರಿಪ್ಪನ್ ಪೇಟೆ…

Read More

ಮಧುಬಂಗಾರಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ : ಆರ್ ಎಂ ಮಂಜುನಾಥಗೌಡ

ರಿಪ್ಪನ್ ಪೇಟೆ : ಜೆಡಿಎಸ್ ನ ಮಾಜಿ ಕಾರ್ಯಧ್ಯಕ್ಷರು ಹಾಗೂ ಸೊರಬದ ಮಾಜಿ ಶಾಸಕರಾದ ಮಧು ಬಂಗಾರಪ್ಪರವರು ತಮ್ಮ ಬೆಂಬಲಿಗರೊಂದಿಗೆ ಇದೆ ಜುಲೈ 30 ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಗೆ ಸೇರಲಿದ್ದು, ಈ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಸಹಕಾರಿ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಆರ್ .ಎಂ.ಮಂಜುನಾಥಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅವರು ಇಂದು ಗ್ರಾಮ ಪಂಚಾಯಿತಿ ಸಭಾಭವನದ ಕುವೆಂಪು ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಧು ಬಂಗಾರಪ್ಪ ರವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗುವುದರಿಂದ…

Read More

ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಸಶಕ್ತವಾದ ಸ್ವಾಭಿಮಾನಿ ಸಮಾಜ ನಿರ್ಮಿಸಬಹುದು : ಸೀಮಾ ಕಿರಣ್

ರಿಪ್ಪನ್‌ಪೇಟೆ : ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ, ಹೆಣ್ಣು ಮಕ್ಕಳು ಮನಸ್ಸು ಮಾಡಿ ನಿಂತರೆ ಸಾಕು ಸಶಕ್ತವಾದ ಸಧೃಡ ಸ್ವಾಭಿಮಾನಿ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದಾಗಿದೆ ಎಂದು ಜೆಸಿಐ ಅಧ್ಯಕ್ಷೆ  ಸೀಮಾ ಕಿರಣ್ ಹೇಳಿದರು ಅವರು ಪಟ್ಟಣದ ಶ್ರೀ ರಾಮ ಸಭಾ ಭವನ ಮಹಿಳೆಯರು ನೂತನವಾಗಿ ಆರಂಭಿಸಿದ ಹೊಸನಗರ ತಾಲೂಕ್ ರೈಸ್ ಅಂಡ್ ಶೈನ್ ಬ್ಯೂಟಿಷಿಯನ್ ಅಸೋಶಿಯೇಷನ್ ಸಂಘವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮನೆ, ಕುಟುಂಬ ಸೇರಿದಂತೆ ಇಡೀ ಸಮಾಜವನ್ನು ಸಶಕ್ತವಾಗಿ ಸದೃಡವಾಗಿ ಮುನ್ನಡೆಸುವ ಶಕ್ತಿಯು ಹೆಣ್ಣು…

Read More

Anandapura | ನಕಲಿ ಬಂಗಾರ ಕೊಟ್ಟು ವೃದ್ದೆಯ ಓಲೆ ಕಳ್ಳತನಗೈದಿದ್ದ ಪಾಲಿಶ್ ಗ್ಯಾಂಗ್ ಅರೆಸ್ಟ್ | ಆನಂದಪುರ ಪೊಲೀಸರ ಭರ್ಜರಿ ಬೇಟೆ

Anandapura | ನಕಲಿ ಬಂಗಾರ ಕೊಟ್ಟು ವೃದ್ದೆಯ ಓಲೆ ಕಳ್ಳತನಗೈದಿದ್ದ ಪಾಲಿಶ್ ಗ್ಯಾಂಗ್ ಅರೆಸ್ಟ್ | ಆನಂದಪುರ ಪೊಲೀಸರ ಭರ್ಜರಿ ಬೇಟೆ ಬಂಗಾರ ಪಾಲಿಶ್‌ ಹಾಕಿಕೊಡುತ್ತೇವೆ ಎಂದು ಮಹಿಳೆಯರನ್ನು ಯಾಮಾರಿಸುವ ಗ್ಯಾಂಗ್‌ವೊಂದನ್ನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆನಂದಪುರ ಪೊಲೀಸ್‌ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕುತೂಹಲ ಮೂಡಿಸಿದ ಪ್ರಕರಣದಲ್ಲಿ ಅಜ್ಜಿಗೆ ನಕಲಿ ಚಿನ್ನದ ನಾಣ್ಯಕೊಟ್ಟು ಆಕೆಯ ಬೆಂಡೋಲೆಯನ್ನು ಪಾಲೀಶ್‌ ನೆಪದಲ್ಲಿ ಕದ್ದೊಯ್ದಿದ್ದ ಆರೋಪದ ಅಡಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. ನಡೆದಿದ್ದೇನು..??? ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ …

Read More

ಹುಂಚ ಸೊಸೈಟಿಯ ಐವರು ನಿರ್ದೇಶಕರ ರಾಜೀನಾಮೆ!!!!!! ಸೂಪರ್ ಸೀಡ್ ಆಗುತ್ತಾ ಹೊಂಬುಜಾ ಸೊಸೈಟಿ!!!!??????

ಕಳೆದ ಹಲವು ದಿನಗಳಿಂದ ವಿವಾದಗಳಿಂದಲೇ ಸುದ್ದಿಯಲ್ಲಿರುವ ಹೊಂಬುಜ ವ್ಯವಸಾಯ ಸಹಕಾರ ಸಂಘದ ಐವರು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೊಂಬುಜಾ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ಐವರು ರಾಜೀನಾಮೆ ನೀಡಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಹಿಂದೆ ಹಲವು ಬಾರಿ ಹೊಂಬುಜಾ ಸೊಸೈಟಿಯಲ್ಲಿ ಅಕ್ರಮ ನಡೆದಿದೆ ಎಂದು ಷೇರುದಾರರು ಆರೋಪಿಸುತಿದ್ದರು ತಿಪ್ಪೆ ಸಾರಿಸುತ್ತಿದ್ದ ಸಹಕಾರ ಇಲಾಖೆ ಈಗ ನಡೆದ ಆಡಿಟ್ ವರದಿಯಿಂದ ದಂಗು ಬಡಿದು ಕೂತಿದೆ ಎನ್ನಲಾಗುತ್ತಿದೆ. ಈಗಾಗಲೆ ಮೇಲ್ನೋಟಕ್ಕೆ ಹೆಚ್ಚು ಹಣದ ದುರುಪಯೋಗದ ವಾಸನೆ ಸಿಕ್ಕಿದ್ದು…

Read More