Headlines

ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತು ಪರಾರಿ

ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತು ಪರಾರಿ ಅಂಗನವಾಡಿಯಲ್ಲಿ ಕಾರ್ಯನಿರತರಾಗಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬೈಲು ಗ್ರಾಮದ ಮಿನಿ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾರಾಮತಿ ಎಂಬವರು ಆ. 22ರಂದು ಕರ್ತವ್ಯ ನಿರತರಾಗಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ನೀಲಿ ಬಣ್ಣದ ಜರ್ಕಿನ್ ಹಾಕಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಅಂಗನವಾಡಿಗೆ ನುಗ್ಗಿ…

Read More

RIPPONPETE | ಗ್ರಾಮಸ್ಥರಿಗೆ ಆಸಕ್ತಿ ಇಲ್ಲದ ಗ್ರಾಮಸಭೆ

RIPPONPETE | ಗ್ರಾಮಸ್ಥರಿಗೆ ಆಸಕ್ತಿ ಇಲ್ಲದ ಗ್ರಾಮಸಭೆ ರಿಪ್ಪನ್‌ಪೇಟೆ : ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಡೆಸುವ ಗ್ರಾಮಸಭೆಯ ಬಗ್ಗೆ ಕಳೆದ ಒಂದು ವಾರದಿಂದ ವ್ಯಾಪಕ ಪ್ರಚಾರ ನಡೆಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸದ ಹಿನ್ನಲೆ ಗ್ರಾಮಸಭೆಯಲ್ಲಿ ಖಾಲಿ ಕುರ್ಚಿಗಳು ಎದ್ದು ಕಾಣುತಿದ್ದು ಸಾರ್ವಜನಿಕರ ನಿರಾಸಕ್ತಿಗೆ ಗ್ರಾಮಾಡಳಿತ ಬೇಸರ ವ್ಯಕ್ತ ಪಡಿಸಿರುವ ಘಟನೆ ನಡೆದಿದೆ. ಗ್ರಾಮಸಭೆಯಲ್ಲಿ ಏನೇನಾಯ್ತು…!? ಪಟ್ಟಣದ ಬಸ್ ನಿಲ್ದಾಣಕ್ಕಾಗಿ ಕಾಯ್ದಿರಿಸಲಾಗಿರುವ 32 ಗುಂಟೆ ಜಾಗವನ್ನು ಕೂಡಲೇ ತೆರವುಗೊಳಿಸಿ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಮತ್ತು ವಿನಾಯಕ ವೃತ್ತದಲ್ಲಿನ ಆಟೋ…

Read More

ತುಂಡಾಗಿದ್ದ ಕೈಯನ್ನು ಜೋಡಿಸಿದ ಶಿವಮೊಗ್ಗದ ವೈದ್ಯರು

ತುಂಡಾಗಿದ್ದ ಕೈಯನ್ನು ಜೋಡಿಸಿದ ಶಿವಮೊಗ್ಗದ ವೈದ್ಯರು ಶಿವಮೊಗ್ಗ ಆಸ್ಪತ್ರೆಯ ವೈದ್ಯರು ತುಂಡಾಗಿದ್ದ ಕೈಯನ್ನು ಜೋಡಿಸುವ ಆಪರೇಷನ್‌ ನಡೆಸಿ ಎರಡು ತುಂಡಾಗಿದ್ದ ಕೈಯನ್ನ ಜೋಡಿಸಿದ್ದಾರೆ. ಎರಡು ತುಂಡಾಗಿದ್ದ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೋಡಿಸುವಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ.  ಸತತ ಏಳು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್ ಆಗಿದೆ. ಏನಿದು ಘಟನೆ : ಶಿಕಾರಿಪುರ ತಾಲೂಕಿನ ಸಾಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಮುಂಗೈ ಕತ್ತರಿಸಿಕಿಂಡು ಬಿಟ್ಟಿದ್ದ. ಸಂಪೂರ್ಣವಾಗಿಯೇ ಮುಂಗೈ ಕಟ್ ಆಗಿತ್ತು….

Read More

ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ

ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ ತೀರ್ಥಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಥ್ ಗೌಡ ಅವರು ಪತ್ರಕರ್ತರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತೀರ್ಥಹಳ್ಳಿಯ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ನಿರಂಜನ್ ರಥಬೀದಿಯಲ್ಲಿ ವರದಿಗಾಗಿ ತೆರಳಿದ…

Read More

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ ರಿಪ್ಪನ್‌ಪೇಟೆ : ಅಕ್ರಮವಾಗಿ ಗೋಮಾಂಸ ಸಾಗಿಸುತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ತೀರ್ಥಹಳ್ಳಿ ರಸ್ತೆಯ ಕಣಬಂದೂರು ರಸ್ತೆಯ ಬಳಿ ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗುತಿದ್ದಾಗ ಪ್ಯಾಸೆಂಜರ್ ಆಟೋವೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 19ಸಾವಿರ ರೂ ಮೌಲ್ಯದ 80 ಕೆ ಜಿ ದನದ ಮಾಂಸವಿರುವುದ ಕಂಡು ಬಂದಿದೆ. ಮಾಂಸವನ್ನು ಎಲ್ಲಿಂದ ತಂದಿರುವುದಾಗಿ ಆರೋಪಿಗಳನ್ನು  ವಿಚಾರಿಸಿದಾಗ ಗರ್ತಿಕೆರೆ…

Read More

ANANDAPURA | ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು

ANANDAPURA | ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು ಆನಂದಪುರ : ಇಲ್ಲಿನ ಮಹಂತಿನ ಮಠ ಚಂಪಕ ಸರಸ್ ನಲ್ಲಿ ಈಜಲು ಇಳಿದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ. ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ…

Read More

ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವಜಾ – ವಿಶೇಷಾಧಿಕಾರಿ ನೇಮಕ

ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವಜಾ – ವಿಶೇಷಾಧಿಕಾರಿ ನೇಮಕ ಹುಂಚದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಿ  ವಿಶೇಷಾಧಿಕಾರಿಗಳನ್ನು ನೇಮಿಸಿ ಸಾಗರದ ಉಪವಿಭಾಗದ ಸಹಕಾರ ಸಂಘದ ಸಹಾಯಕ ನಿಬಂಧಕರು ಆದೇಶಿಸಿದ್ದಾರೆ. ಸದರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಪ್ರಸ್ತುತ ಆಡಳಿತದಲ್ಲಿರುವ ಸಹಕಾರ ಸಂಘದ ಸದಸ್ಯರುಗಳಿಗೆ ಆದೇಶ ನೀಡಲಾಗಿತ್ತು. ಆದರೆ ಆಡಳಿತದಲ್ಲಿನ  ಸದಸ್ಯರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ನೇಮಿಸಿಕೊಳ್ಳದೆ…

Read More

RIPPONPETE | ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಫೋಕ್ಸೋ ಪ್ರಕರಣ ದಾಖಲು

RIPPONPETE | ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಫೋಕ್ಸೋ ಪ್ರಕರಣ ದಾಖಲು ರಿಪ್ಪನ್‌ಪೇಟೆ: ಅಪ್ರಾಪ್ತಯ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆರೋಪಿತನ ವಿರುದ್ಧ ಪೋಕ್ಸ್‌ ಪ್ರಕರಣ ದಾಖಲಾಗಿದೆ. ಹರತಾಳು ಗ್ರಾಮದ ಉಮೇಶ ಆರೋಪಿಯಾಗಿದ್ದು, ಹುಂಚ ಸಮೀಪದ ಗ್ರಾಮವೊಂದರ ಅಪ್ರಾಪ್ತಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದು ಕಳೆದ ಕೆಲದಿನಗಳಿಂದ ಹರತಾಳಿನ ಉಮೇಶನ ಮನೆಯಲ್ಲಿಯೇ ವಾಸವಿದ್ದಳು ಎನ್ನಲಾಗಿದೆ. ಅಪ್ರಾಪ್ತಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಪ್ರಾಪ್ತೆಯು…

Read More

ಶಾಸಕನ ಪುತ್ರನ ಹತ್ಯೆಗೆ ಜೈಲ್ ನಲ್ಲಿ ಸ್ಕೆಚ್ – ದೂರು ದಾಖಲು

ಶಾಸಕನ ಪುತ್ರನ ಹತ್ಯೆಗೆ ಜೈಲ್ ನಲ್ಲಿ ಸ್ಕೆಚ್ – ದೂರು ದಾಖಲು ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ರನ್ನ ಹತ್ಯೆಗೆ ಜೈಲಿನಲ್ಲಿ ಸ್ಕೆಚ್ ನಡೆದಿರುವ ಬಗ್ಗೆ ಎಫ್ಐಆರ್ ದಾಖಲಾಗಿರಿವ ಘಟನೆ ನಡೆದಿದೆ. ಭದ್ರಾವತಿ ನಗರದ ಜಟ್ ಪಟ್ ನಗರದ ವಾಸಿಯಾದ ಮುಬಾರಕ್ ಮುಬ್ಬು ಕಳೇದ 17 ನೇ ತಾರೀಖು ಗುತ್ತಿಗೆದಾರನ ಬಳಿ ಬಂದು ಬಸಣ್ಯ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತ ಡಿಚ್ಚಿ ಮುಬಾರಕ್‌ ಜೈಲಿನಿಂದ  ಎರಡು ಪ್ರತ್ಯೇಕ ಫೋನ್‌ ನಂಬರ್‌ನಿಂದ ಕರೆ ಮಾಡಿ,…

Read More

ಬಡ ವೃದ್ದೆಯ ಖಾತೆಯಲ್ಲಿರುವ ವೃದ್ದಾಪ್ಯ ವೇತನ ನೀಡಲು ತಡೆ ಒಡ್ಡಿದ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಮ್ಯಾನೇಜರ್ – ಠಾಣೆ ಮೆಟ್ಟಿಲೇರಿದ ಪ್ರಕರಣ

ಬಡ ವೃದ್ದೆಯ ಖಾತೆಯಲ್ಲಿರುವ ವೃದ್ದಾಪ್ಯ ವೇತನ ನೀಡಲು ತಡೆ ಒಡ್ಡಿದ ಕೆನರಾ ಬ್ಯಾಂಕ್ ಮ್ಯಾನೇಜರ್ – ಠಾಣೆ ಮೆಟ್ಟಿಲೇರಿದ ಪ್ರಕರಣ ರಿಪ್ಪನ್‌ಪೇಟೆ : ಅಕೌಂಟ್ ನಲ್ಲಿರುವ ವೃದ್ದಾಪ್ಯ ವೇತನವನ್ನು ಪಡೆದುಕೊಳ್ಳಲು 80 ವೃದ್ದೆಯೊಬ್ಬರಿಗೆ ಲೋನ್ ನೆಪ ಹೇಳಿ ಕಳೆದ ಆರೇಳು ತಿಂಗಳುಗಳಿಂದ ಪಟ್ಟಣದ ಕೆನರಾ ಬ್ಯಾಂಕ್ ಮ್ಯಾನೇಜರ್ ತಡೆ ಒಡ್ಡಿರುವ ಘಟನೆ ನಡೆದಿದೆ.ಈ ಬಗ್ಗೆ ಬಡ ವೃದ್ದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ನಾಡಿನ ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಸಂತೋಷದಿಂದ…

Read More