POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹಲ್ಲೆಗೊಳಗಾಗಿದ್ದ ಗ್ರಾಪಂ ಸದಸ್ಯನ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ

GridArt 20241217 211850189.jpg

ಹಲ್ಲೆಗೊಳಗಾಗಿದ್ದ ಗ್ರಾಪಂ ಸದಸ್ಯನ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ , ಸಾಂತ್ವಾನ

ಹೊಸನಗರ: ಇತ್ತೀಚೆಗೆ ಹಳೇ ರಾಜಕೀಯ ದ್ವೇಷದ ಹಿನ್ನಲೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್ ಮನೆಗೆ ಮಂಗಳವಾರ  ಮಾಜಿ ಶಿಕ್ಷಣ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ವಿಶ್ವನಾಥ್ ಅವರಿಗೆ ಸಾಂತ್ವನ ಹೇಳುವ ಮೂಲಕ ನೈತಿಕ ಸ್ಥೈರ್ಯ ತುಂಬಿದರು.

ಅಲ್ಲದೆ, ಈ ಸಂಬಂಧ  ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಕಿಮ್ಮನೆ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನನ್ನನ್ನು ಸೇರಿದಂತೆ ಇಡೀ  ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಗಿದೆ ಹಾಗೂ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಿರಿ ಎಂಬುದಾಗಿ ಮಾಜಿ ಸಚಿವರು ನಾಗೋಡಿ ವಿಶ್ವನಾಥ್ ಅವರಿಗೆ  ಧೈರ್ಯ ತುಂಬಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.