Headlines

ವಿಷ  ಸೇವಿಸಿ ವ್ಯಕ್ತಿ ಆತ್ಮ*ಹತ್ಯೆ – ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ

GridArt 20241217 194517695.jpg

ವಿಷ  ಸೇವಿಸಿ ವ್ಯಕ್ತಿ ಆತ್ಮ*ಹತ್ಯೆ – ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ

ಶಿವಮೊಗ್ಗ:  ಗಾಡಿಕೊಪ್ಪದ ಸೇವಾಲಾಲ್ ಬೀದಿಯ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಇದು ಆತ್ಮಹತ್ಯೆ ಅಲ್ಲ, ಅನುಮಾನಾಸ್ಪದ ಸಾವು ಎಂದು ಆರೋಪಿಸಿದೆ.

ಗಾಡಿಕೊಪ್ಪದ ನಿವಾಸಿ ಭೋಜ್ಯ ನಾಯ್ಕ (೫೮) ಆತ್ಮಹತ್ಯೆ ಮಾಡಿಕೊಂಡಿರುವವರು.  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೂ ಅವರ ಕುತ್ತಿಗೆಯಲ್ಲಿ ನೇಣು  ಬಿಗಿದ ಕಲೆ ಇರುವುದರಿಂದ ಕುಟುಂಬ ಇದೊಂದು ಅನುಮಾನಸ್ಪದ ಸಾವು ಎಂದು ಆರೋಪಿಸಿದೆ.

ಭೋಜ್ಯ ನಾಯ್ಕ್ ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ಇದ್ದು, ಪ್ರಕರಣ ಕೋರ್ಟಿನಲ್ಲಿ ಭೋಜ್ಯ ನಾಯ್ಕರ ಪರ ಕೇಸ್ ಆಗಿತ್ತು. ಆದರೆ ಈ ವಿಚಾರದಲ್ಲಿ  ಸಹೋದರ ಕೃಷ್ಣ ನಾಯ್ಕ, ಮಗ ಶಿವಕುಮಾರ್ ಮತ್ತೋರ್ವ ಸಹೋದರ ಜಗದೀಶ್ ಭೋಜ್ಯನಾಯ್ಕರಿಗೆ ಬೆದರಿಕೆ ಹಾಕುತ್ತಿದ್ದರಿಂದ ಇವರ ವಿರುದ್ಧ ಎಫ್‌ಐಆರ್ ಆಗಿದೆ.

ಬೋಜನಾಯ್ಕ್ ಕುಟುಂಬದ ದೂರನ್ನು ಠಾಣೆಯಲ್ಲಿ ಪೊಲೀಸರು  ಸ್ವೀಕರಿಸುತ್ತಿರಲಿಲ್ಲ ಎಂಬ ಆರೋಪವನ್ನೂ ಕುಟುಂಬ ಮಾಡಿದೆ.

Leave a Reply

Your email address will not be published. Required fields are marked *