ಗಂಡನ ಮನೆಗೆ ಹೋಗುವುದಾಗಿ ಹೇಳಿ ಹೋದ ಮಹಿಳೆ ಮಗನೊಂದಿಗೆ ನಾಪತ್ತೆ !
ಸೊರಬ: ಪತಿ ಮನೆಗೆ ತೆರಳುವುದಾಗಿ ತಿಳಿಸಿದ ಮಹಿಳೆಯೊರ್ವಳು ತನ್ನ ಮಗಳೊಂದಿಗೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಆನವಟ್ಟಿ ಸಮೀಪದ ನೆಗವಾಡಿ ತಾಂಡಾದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿ ಹೊನ್ನಮ್ಮ ಮಹಾದೇವ ಭೋವಿ (೩೦) ಹಾಗೂ ದೀಪ್ತಿ ಮಹಾದೇವ ಭೋವಿ (೮) ನಾಪತ್ತೆಯಾದವರು.
ನೆಗವಾಡಿ ತಾಂಡಾ ಗ್ರಾಮದಲ್ಲಿ ಸಹೋದರ ಅನಾರೋಗ್ಯ ವಿಚಾರಿಸಿಕೊಂಡು ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಮಗಳೊಂದಿಗೆ ತೆರಳಿದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೊನ್ನಮ್ಮ ಅವರ ಸಹೋದರ ಬಂಗಾರಪ್ಪ ಶೇಖಪ್ಪ ನೀಡಿದ ದೂರಿನ ಅನ್ವಯ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಹೊನ್ನಮ್ಮ ಭೋವಿ ಅವರು ಸುಮಾರು ೫.೪ಅಡಿ ಎತ್ತರ, ಬಿಳಿ ಮೈ ಬಣ್ಣ, ದಪ್ಪ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ದೀಪ್ತಿ ೩.೫ ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಕನ್ನಡ ಮಾತನಾಡುತ್ತಾಳೆ.
ಇವರ ಬಗ್ಗೆ ಸುಳಿವು ದೊರೆತವರು ಆನವಟ್ಟಿ ಪೊಲೀಸ್ ಠಾಣೆ ದೂ: ೦೮೧೮೪-೨೬೭೧೩೫ ಅಥವಾ ೯೪೮೦೮ ೦೩೩೬೯, ೯೪೮೦೮ ೦೩೩೩೯ ಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.