Headlines

ಎಲ್ಲೆಲ್ಲೂ RCB ಹವಾ – ರಕ್ತದಾನ, ಪ್ರಾರ್ಥನೆ  ; RCB ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ಶಾಸಕ ಬೇಳೂರು

ಎಲ್ಲೆಲ್ಲೂ RCB ಹವಾ – ರಕ್ತದಾನ, ಪ್ರಾರ್ಥನೆ  ; RCB ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ಶಾಸಕ ಬೇಳೂರು ಸುಮಾರು 60 ದಿನಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇಂದು ತೆರೆ ಬೀಳಲಿದೆ.18ನೇ ಆವೃತ್ತಿಯ ಐಪಿಎಲ್‌ ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಸತತ 17 ವರ್ಷ ಕಠಿಣ ತಪ್ಪಸ್ಸನ್ನೇ ಮಾಡಿದ್ದು, ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿವೆ. ಇಬ್ಬರಲ್ಲಿ ಒಬ್ಬರ…

Read More

ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ – ಸಾಗರ ಮೂಲದ ವ್ಯಕ್ತಿ ಬಂಧನ | Arrested

ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ –  ಸಾಗರ ಮೂಲದ ವ್ಯಕ್ತಿ ಬಂಧನ  ಜಿಂಕೆ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನು ಬೆಂಗಳೂರು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಂದ್ರಶೇಖರಪ್ಪ ಗೌಡ (43) ಎಂಬಾತನನ್ನು ಬಂಧಿಸಲಾಗಿದೆ.  ಆರೋಪಿಯಿಂದ ಒಂದು ಜಿಂಕೆ ಚರ್ಮ, 12 ಜಿಂಕೆ ಕೊಂಬುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿ ಜಿಂಕೆ ಚರ್ಮ ಮಾರಾಟಕ್ಕೆ…

Read More

ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli

ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli ತೀರ್ಥಹಳ್ಳಿ : ಜಾತ್ರೆಯಲ್ಲಿ ವ್ಯಾಪರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಂದಿದ್ದ ಬಿಹಾರಿ ಮೂಲದ ಆರಿಫ್ (13) ಎಂಬ ಬಾಲಕ ತುಂಗಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ತಂದೆಯ ಜೊತೆ ಸ್ನಾನಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಜಾತ್ರೆಯ ತಯಾರಿ ಬಿರುಸಿನಿಂದ ಸಾಗುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆ ಹಾಕಲು ದೇಶಾದ್ಯಂತ ವ್ಯಾಪಾರಿಗಳು ಪ್ರತಿ ವರ್ಷವೂ…

Read More

Ripponpete | ಸರಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ತಾರತಮ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ :ಶಾಸಕ ಗೋಪಾಲ ಕೃಷ್ಣ ಬೇಳೂರು.

ಸರಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ತಾರತಮ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ :ಶಾಸಕ ಗೋಪಾಲ ಕೃಷ್ಣ ಬೇಳೂರು ರಿಪ್ಪನ್ ಪೇಟೆ : ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶ್ವಿಸಿಯಾಗಿ ಕಾರ್ಯನಿರ್ವಹಿಸಿ ನುಡಿದಂತೆ ನಡೆದಿದೆ, ಸರಕಾರದ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ತಾರತಮ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಲಾಗುವುದು ಎಂದು ರಾಜ್ಯ ಅರಣ್ಯ…

Read More

HOSANAGARA | ಇಬ್ಬರು ಶ್ರೀಗಂಧ ಚೋರರ ಬಂಧನ

HOSANAGARA | ಇಬ್ಬರು ಶ್ರೀಗಂಧ ಚೋರರ ಬಂಧನ ಹೊಸನಗರ : ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಸ. ನಂ.18 ರ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಪರಿವರ್ತಿಸಿ ಬೈಕಿನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಚೋರರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಶನಿವಾರ ನಡೆದಿದೆ. ಬಂಧಿತರನ್ನು ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆ ವಾಸಿ ರಾಘವೇಂದ್ರ (32) ಎಂದು ಗುರುತಿಸಲಾಗಿದೆ….

Read More

Ripponpete | ಅನಾರೋಗ್ಯ ಹಿನ್ನಲೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Ripponpete | ಅನಾರೋಗ್ಯ ಹಿನ್ನಲೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಶವಂತ್ (19) ಮೃತಪಟ್ಟ ದುರ್ಧೈವಿಯಾಗಿದ್ದಾನೆ ಅನಾರೋಗ್ಯ ಹಿನ್ನಲೆಯಲ್ಲಿ ಮನನೊಂದು ಶನಿವಾರ ಮಧ್ಯಾಹ್ನ ವಿಷ ಸೇವಿಸಿದ್ದಾನೆ ತಕ್ಷಣ ಕುಟುಂಬಸ್ಥರು ಯುವಕನನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಯುವಕನು ಭಾನುವಾರ ತಡರಾತ್ರಿ…

Read More

ಮಾರಿಕಾಂಬ ಜಾತ್ರೆ ವೇಳೆ ಸಾಗರದ ಬಸ್ ನಿಲ್ದಾಣದಲ್ಲಿ ಬಂಗಾರದ ಚೈನ್ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್

ಮಾರಿಕಾಂಬ ಜಾತ್ರೆ ವೇಳೆ ಸಾಗರದ ಬಸ್ ನಿಲ್ದಾಣದಲ್ಲಿ ಬಂಗಾರದ ಚೈನ್ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್ A 43-year-old woman from Hunsur, Mysuru district, was arrested for stealing a 12-gram gold chain at Sagara KSRTC bus stand during the Marikamba fair. Police recovered the stolen chain worth ₹1.30 lakh. ಸಾಗರ: ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಚಿನ್ನದ ಸರ ಕಳ್ಳತನ ಪ್ರಕರಣವನ್ನು ಭೇದಿಸಿರುವ ಸಾಗರ…

Read More

Konanduru | ಹಿರಿಯ ಪತ್ರಕರ್ತ ಶೀನಪ್ಪ ಬಂಡಾರಿ ನಿಧನ

ಹಿರಿಯ ಪತ್ರಕರ್ತ ಶೀನಪ್ಪ ಬಂಡಾರಿ ನಿಧನ ತೀರ್ಥಹಳ್ಳಿ : ತಾಲೂಕಿನ ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೋಣಂದೂರಿನ ಹಿರಿಯ ಪತ್ರಕರ್ತ ಶೀನಪ್ಪ ಬಂಡಾರಿ ( 68) ವರ್ಷ ಇಂದು ಬುಧವಾರ ಮದ್ಯಾನ್ಹ ವಿಧಿವಷರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಕೋಣಂದೂರು ಭಾಗದಲ್ಲಿ ಪತ್ರಿಕಾ ವಿತರಕರಾಗಿ, ವರದಿಗಾರರಾಗಿ ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ತಮ್ಮ ಸೌಮ್ಯ ಮತ್ತು ಮೃದು ಸ್ವಭಾವದಿಂದ ಎಲ್ಲರೊಂದಿಗೆ ಪ್ರೀತಿ ಪಾತ್ರರಾಗಿ ಕರ್ತವ್ಯ ನಿರ್ವಹಿಸಿ ಕೋಣಂದೂರು ಭಾಗದಲ್ಲಿ ಜನಮನ್ನಣೆ ಪಡೆದಿದ್ದರು. ಆ ಭಾಗದಲ್ಲಿ ಬಂಡಾರಿ ಸಮುದಾಯದ ಏಳಿಗೆಗಾಗಿ…

Read More

ಅದ್ದೂರಿಯಾಗಿ ಜರುಗಿದ ಕೆಂಚನಾಲ ಉರೂಸ್ ಕಾರ್ಯಕ್ರಮ :

ಕೆಂಚನಾಲ : ಇಲ್ಲಿನ ಹಜರತ್ ಸೈಯದ್ ಚಮನ್ ಷಾ ವಲಿಯೂಲ್ಲಾ ದರ್ಗಾದ ಉರೂಸ್ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಜರುಗಿತು. ಕೆಂಚನಾಲ ಸುನ್ನಿ ಜಾಮೀಯಾ ಮಸೀದಿಯ ಖತೀಬ್ ರವರಾದ ಮೊಹಮ್ಮದ್ ಝುಲ್ಪಿಕರ್ ದುವಾ ಮಾಡುವ ಮೂಲಕ ಸಂದಲ್ ಮೆರವಣಿಗೆಗೆ ಚಾಲನೆ ನೀಡಿದರು. ಕೆಂಚನಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂದಲ್ ಮೆರವಣಿಗೆ ಸಾಗಿತು.ಈ ಸಂಧರ್ಭದಲ್ಲಿ ಶಿವಮೊಗ್ಗದ ಮುರ್ಷದ್ ರವರು ಸಂದಲ್ ಮೆರವಣಿಗೆಯಲ್ಲಿ ದಫ಼್ ಬಾರಿಸುವ ಮೂಲಕ ಹಜರತ್ ಸೈಯದ್ ಚಮನ್ ಷಾ ರವರ ಸಂದಲ್ ಮೆರವಣಿಗೆಗೆ ರಂಗು ತಂದರು.ನೂರಾರು ಭಕ್ತಾದಿಗಳು…

Read More

ಆಲುವಳ್ಳಿ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ|Aluvalli

ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಆಲುವಳ್ಳಿ ಗ್ರಾಮದಲ್ಲಿ  67ನೇ ಕರ್ನಾಟಕ  ರಾಜ್ಯೋತ್ಸವದ ಅದ್ಧೂರಿಯಾಗಿ ನಡೆಯಿತು. ಆಲುವಳ್ಳಿ ಗ್ರಾಮದ ವೃತ್ತದಲ್ಲಿ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರೆ ಮತ್ತು  ಮೆರವಣಿಗೆ ನಡೆಯಿತು. ಮಕ್ಕಳು ವಿವಿಧ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲಾರ ಗಮನ ಸೆಳೆದರು. ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮವನ್ನು ಕನ್ನಡ ಸಂಘದ ಅಧ್ಯಕ್ಷರಾದ ಟೀಕೇಶಪ್ಪ ಗೌಡ ನೆರವೇರಿಸಿದರು ಈ ಸಂಧರ್ಭದಲ್ಲಿ ಗ್ರಾಮದ ಹೈಮಾಸ್ಕ್ ಬೀದಿ ದೀಪವನ್ನು ಹೊಸನಗರ ತಾಪಂ ಮಾಜಿ ಅಧ್ಯಕ್ಷ…

Read More