Headlines

ಹೊಸನಗರ: ಯುವಕನ ಕಿಡ್ನಿ ವೈಫಲ್ಯ,ಚಿಕಿತ್ಸೆಗೆ ನೆರವು ಯಾಚನೆ :

ಹೊಸನಗರ: ಇಲ್ಲಿನ ಮಾರಿಗುಡ್ಡ ವಾಸಿಯಾದ ಯುವಕನೊಬ್ಬ 3 ವರ್ಷಗಳಿಂದ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗದೆ ಅವರ ಕುಟುಂಬ ದಾನಿಗಳಿಂದ ನೆರವು ಯಾಚಿಸಿದೆ. ಹೊಸನಗರದ ಮಾರಿಗುಡ್ಡ ವಾಸಿಯಾದ ಮಂಜುನಾಥ ಮತ್ತು ಪದ್ಮಾವತಿ ದಂಪತಿಗಳ  ಮಗನಾದ 23  ವರ್ಷ ವಯ್ಯಸ್ಸಿನ ಶರತ್ ಎಂಬುವವರು ಸುಮಾರು 3 ವರ್ಷದಿಂದ ಕಿಡ್ನಿ ವೈಫಲ್ಯಗೊಂಡಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಡಯಾಲಿಸಿಸ್ ಮಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಈಗಾಗಲೇ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಆರಂಭವಾಗಿದೆ, ಇನ್ನೂ ಹೆಚ್ಚಿನ  ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ…

Read More

ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು|kodachadri

ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು ಹೊಸನಗರ: ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಕಳೆದ 15 ದಿನಗಳಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ವಿಧಿಸಿದ ನಿರ್ಬಂಧ ವನ್ನು ಇಂದಿನಿಂದ (ಭಾನುವಾರ) ತೆರವುಗೊಳಿಸಲಾಗಿದೆ. ಕೇವಲ ವಾಹನಗಳಲ್ಲಿ ತೆರಳಲು ಮಾತ್ರ ಅವಕಾಶ ನೀಡಲಾಗಿದ್ದು, ಚಾರಣ ಮಾಡಲು ಇನ್ನೂ ಅನುಮತಿ ನೀಡಿಲ್ಲ ಎಂದು ವನ್ಯಜೀವಿ ಇಲಾಖೆ ತಿಳಿಸಿದೆ. ಕೊಡಚಾದ್ರಿಗೆ ತೆರಳುವ ರಸ್ತೆ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ವಳಪಟ್ಟಿದ್ದು, ರಸ್ತೆ ಸಂಚಾರ ಮಾಡಲು ಸಾಧ್ಯವಾಗದಷ್ಟು…

Read More

RIPPONPETE | ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕ್ ಒಕ್ಕಲಿಗ ಸಂಘದಿಂದ ಪ್ರತಿಭಟನೆ

RIPPONPETE | ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕ್ ಒಕ್ಕಲಿಗ ಸಂಘದಿಂದ ಪ್ರತಿಭಟನೆ ರಿಪ್ಪನ್‌ಪೇಟೆ :ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮುನಿರತ್ನನನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ವಿನಾಯುಕ ವೃತ್ತದಿಂದ ಮೆರವಣಿಗೆ ತೆರಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎಂ ಎಂ ಪರಮೇಶ್ ಮಾತನಾಡಿ,…

Read More

ಆರಗ ಜ್ಞಾನೇಂದ್ರ ವಿರುದ್ಧವೇ ಕೇಸುಗಳಿವೆ, ಈಗ ಅವರೇ ಗೃಹ ಮಂತ್ರಿ!!! ಹೀಗಾದರೆ ನ್ಯಾಯ ಸಿಗುತ್ತಾ? -ಕಿಮ್ಮನೆ ರತ್ನಾಕರ್ ವ್ಯಂಗ್ಯ

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ ಹಿಂದೆ ಆರಗ ಜ್ಞಾನೇಂದ್ರರ ಪಾತ್ರ ಇದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್​ಕಾಯಿನ್ ವಿಷಯದಲ್ಲಿ ಗೃಹ ಸಚಿವರು ಬಾಲಿಷವಾಗಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಬಗ್ಗೆ ಲಘುವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಟ್​ಕಾಯಿನ್ ವಿಷಯದ ಗಂಭೀರತೆ ಅರಿತು ಪ್ರಧಾನಿ ಮೋದಿ ರಾತ್ರೋರಾತ್ರಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಆರಗ ಜ್ಞಾನೇಂದ್ರ ರಾಜ್ಯಕ್ಕಲ್ಲ, ತೀರ್ಥಹಳ್ಳಿಗೆ ಗೃಹ ಸಚಿವರಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ…

Read More

ರಿಪ್ಪನ್‌ಪೇಟೆ : ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆ – ದೂರು ದಾಖಲು

ರಿಪ್ಪನ್‌ಪೇಟೆ : ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆಯಾಗಿರುವ ಫ಼ಟನೆ ಪಟ್ಟಣದ ಗವಟೂರು ಗ್ರಾಮದಲ್ಲಿ ನಡೆದಿದೆ. ಗವಟೂರು ಗ್ರಾಮದ ದೇವರಾಜ್ ಗೌಡ ರವರಿಗೆ ಸೇರಿದ 15 ಹಸುಗಳನ್ನು 21-07-2022 ರಂದು ಮನೆಯ ಬಳಿಯೇ ಮೇಯಲು ಬಿಡಲಾಗಿತ್ತು ಸಂಜೆಯ ವೇಳೆ ಮನೆಗೆ ಹಸುಗಳು ಬಾರದೇ ಇದ್ದಾಗ ಎಲ್ಲಾ ಕಡೆ ಹುಡುಕಿದ್ದಾರೆ.ಸತತ ನಾಲ್ಕು ದಿನ ಹಸುಗಳನ್ನು ಹುಡುಕಿ ಪತ್ತೆಯಾಗದ ಹಿನ್ನಲೆಯಲ್ಲಿ ಇಂದು (26-07-2022) ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗ್ರಾಮ ಲೆಕ್ಕಾಧಿಕಾರಿ ವರ್ಷಿಣಿ ರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ :

ರಿಪ್ಪನ್ ಪೇಟೆ ನಾಡಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಂಚನಾಲ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರ್ಷಿಣಿ ರವರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಕೆಂಚನಾಲ ಗ್ರಾಮ ಪಂಚಾಯಿತ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ವರ್ಷಿಣಿ ರವರು ಕಳೆದ 6 ವರ್ಷಗಳಿಂದ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗರಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮಕ್ಕೆ ವರ್ಗಾವಣೆಗೊಂಡಿದ್ದಾರೆ. ಇವರ ಅನುಪಮ ಸೇವೆ ಹಾಗೂ ಕರ್ತವ್ಯಕ್ಕೆ ಗೌರವಸೂಚಕವಾಗಿ ಇಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧಿಕಾರಿ ವರ್ಗದವರು ಇಂದು ವರ್ಷಿಣಿ ರವರಿಗೆ ಸನ್ಮಾನಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ. ಈ…

Read More

Ripponpete | ಶ್ರದ್ದಾಭಕ್ತಿಯ ನಾಮಸ್ಮರಣೆ ಶಾಂತಿ ನೆಮ್ಮದಿ ಕರುಣಿಸುತ್ತದೆ – ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ

ಶ್ರದ್ದಾಭಕ್ತಿಯ ನಾಮಸ್ಮರಣೆ ಶಾಂತಿ ನೆಮ್ಮದಿ ಕರುಣಿಸುತ್ತದೆ – ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನ ಮುಂದೊಂದು ದಿನ ಪುಣ್ಯ ಕ್ಷೇತ್ರವಾಗಲಿದೆ – ಹೊಂಬುಜ ಶ್ರೀಗಳು ರಿಪ್ಪನ್‌ಪೇಟೆ : ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ.ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು ಅನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಜಿ ಹೇಳಿದರು. ರಿಪ್ಪನ್‌ಪೇಟೆಯ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಇಂದು ಆಯೋಜಿಸಲಾದ ಧಾರ್ಮಿಕ ಧರ್ಮಜಾಗೃತಿ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ…

Read More

ರಿಪ್ಪನ್‌ಪೇಟೆ ಮೂಲದ ಟೆಂಪಲ್ ಆಫ್ ಸಕ್ಸಸ್ ನ ಶ್ರೀ ರಘುನಾಥ್ ಗುರೂಜಿ ಇನ್ನಿಲ್ಲ : ರಾಷ್ಟ್ರದ ಪ್ರಮುಖ ಗುರೂಜಿಗಳಲ್ಲಿ ಒಬ್ಬರಾಗಿದ್ದರು.

ರಿಪ್ಪನ್‌ಪೇಟೆ : ಟೆಂಪಲ್ ಆಫ್ ಸಕ್ಸಸ್ ನ ಸಾಯಿದತ್ತ ರಘುನಾಥ್ ಗುರೂಜಿಯವರು ಬೆಂಗಳೂರಿನಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ತೀವ್ರ ಅಸೌಖ್ಯ ಗೊಂಡಿದ್ದ ರಘುನಾಥ್ ಗುರೂಜಿ ಅವರು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರೂಜಿಯವರು ಅಪಾರ ಭಕ್ತವೃಂದವನ್ನು ಹೊಂದಿದ್ದಾರೆ. ನಿನ್ನೆ (30th August 2022) ವಿಧಿವಶರಾದ ರಘುನಾಥ್ ಗುರೂಜಿ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 2 ರಂದು ಮಣಿಪಾಲದಲ್ಲಿ ನಡೆಯಲಿದೆ. ಅನುಯಾಯಿಗಳು ಬೆಂಗಳೂರು ಬಸವನಗುಡಿಯ ವಾಣಿ ನಿಲಾಸ ರಸ್ತೆಯಲ್ಲಿರುವ ಟೆಂಪಲ್ ಆಫ್ ಸಕ್ಸಸ್…

Read More

ವಾಟ್ಸಾಪ್‌ನಲ್ಲಿ ಡೆತ್ ನೋಟ್ ಬರೆದು ವಿಧವೆಯ ಆತ್ಮಹತ್ಯೆ: ಪೊಲೀಸಪ್ಪನ ಕಾಟ ಆರೋಪ, ಕ್ರಮಕ್ಕೆ ಆಗ್ರಹ

A widow in Bhadravathi taluk of Shivamogga district died by suicide after allegedly facing harassment and defamation by a police personnel, leaving behind a WhatsApp death note naming the accused. ವಾಟ್ಸಾಪ್‌ನಲ್ಲಿ ಡೆತ್ ನೋಟ್ ಬರೆದು ವಿಧವೆಯ ಆತ್ಮಹತ್ಯೆ: ಪೊಲೀಸಪ್ಪನ ಕಾಟ ಆರೋಪ, ಕ್ರಮಕ್ಕೆ ಆಗ್ರಹ ಶಿವಮೊಗ್ಗ: ಪೊಲೀಸರ ಕಾಟ ತಾಳಲಾರದೆ ವಿಧವೆಯೊಬ್ಬಳು ವಾಟ್ಸಾಪ್‌ನಲ್ಲಿ ಡೆತ್ ನೋಟ್ ಬರೆದು ನೇಣಿಗೆ ಶರಣಾದ ಘಟನೆ ಜಿಲ್ಲೆಯ ಭದ್ರಾವತಿ…

Read More

ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು – ಬಿ ವೈ ವಿಜಯೇಂದ್ರ | BYV

ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು – ಬಿ ವೈ ವಿಜಯೇಂದ್ರ ಬಿಜೆಪಿ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗದಿಂದ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ  ಪರ ಪ್ರಚಾರ ನಡೆಸಿದ ಅವರು, ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ರು. ಈ ಹಿಂದೆ ಈಶ್ವರಪ್ಪ ಸಚಿವರು, ಡಿಸಿಎಂ ಆಗಿದ್ದರು. ಹಾಗಿದ್ದರೂ ಶಿವಮೊಗ್ಗಕ್ಕೆ ಅವರ ಕೊಡುಗೆ ಏನು ಅಂತ ಪ್ರಶ್ನಿಸಿದ್ರು….

Read More