RIPPONPETE | ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕ್ ಒಕ್ಕಲಿಗ ಸಂಘದಿಂದ ಪ್ರತಿಭಟನೆ
ರಿಪ್ಪನ್‌ಪೇಟೆ :ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮುನಿರತ್ನನನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ವಿನಾಯುಕ ವೃತ್ತದಿಂದ ಮೆರವಣಿಗೆ ತೆರಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಎಂ ಎಂ ಪರಮೇಶ್ ಮಾತನಾಡಿ, .ಸ್ವಾತಂತ್ರ‍್ಯ ಬಂದು 77 ವರ್ಷಗಳು ಕಳೆಯುತ್ತಿದ್ದರೂ ದೇಶದ ಕೆಲವು ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಇದೆ. ಸಮಾಜವನ್ನು ಉತ್ತಮ ದಿಕ್ಕಿನ ಕಡೆಗೆ ಮುನ್ನಡೆ ಸಬೇಕಾದ ಜನಪ್ರತಿನಿಧಿಗಳೇ ಜಾತಿ ನಿಂದನೆ ಮಾಡಿರುವುದು ಖಂಡನೀಯ. ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಶಾಸಕ ಮುನಿರತ್ನ ಹಣ ಹಾಗೂ ಅಧಿಕಾರ ಬಲದಿಂದ ದಲಿತ ಗುತ್ತಿಗೆದಾರರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಂಡು ಜಾತಿ ಹೆಸರಿಡಿದು ಬಾಯಿಗೆ ಬಂದಂತೆ ಮಾತನಾಡಿ ಕೋಲೆ ಬೆದರಿಕೆ ಹಾಕಿದ್ದಾರೆ. ನಾಗರಿಕ ಸಮಾಜ ಇಂತಹ ಅವೀವೇಕಿಗಳ ನಡತೆಯನ್ನು ತೀವ್ರವಾಗಿ ಖಂಡಿಸಬೇಕಾಗಿದೆ ಎಂದರು.
ರವೀಂದ್ರ ಕೆರೆಹಳ್ಳಿ ಮಾತನಾಡಿ ಶಾಸಕ ಮುನಿರತ್ನ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಂವಿಧಾನ ವಿರೋಧಿಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು, ಜೀವ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಸಂವಿಧಾನ ವಿರೋಧಿ ವರ್ತನೆ ತೋರಿರುವ ಶಾಸಕನನ್ನು ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಮುದಾಯದ ಮುಖಂಡರಾದ ಕಲ್ಲೂರು ತೇಜಮೂರ್ತಿ ,ಷಣ್ಮುಖ ಬೈರಾಪುರ ,ರಾಜು ಹಾಲುಗುಡ್ಡೆ , ಚಿಂತು ಹಾಲುಗುಡ್ಡೆ ,ಸುಮಂಗಳ ಹರೀಶ್ , ಶಿಲ್ಪಾ ರಾಜೇಶ್ , ವನಜಾಕ್ಷಿ ಲೋಕಪ್ಪ ಗೌಡ , ಸವಿತಾ ರವಿ ,ರಾಘವೇಂದ್ರ ಬೈರಾಪುರ , ಕೃಷ್ಣಮೂರ್ತಿ ಗರ್ತಿಕೆರೆ , ಸತೀಶ್ ಬುಕ್ಕಿವರೆ ಹಾಗೂ ಇನ್ನಿತರರಿದ್ದರು.