ಸೊರಬ: ತೀ ನಾ ಶ್ರೀನಿವಾಸ್ ಹೇಳಿಕೆಗೆ ಬಿಜೆಪಿ ಖಂಡನೆ
ಸೊರಬ: ಕಾಂಗ್ರೆಸ್ ಮುಖಂಡ ತೀನಾ ಶ್ರೀನಿವಾಸ್ ರವರು ನೀಡಿರುವ ಸೊರಬದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಸೊರಬ ಬಿಜೆಪಿ ಮುಖಂಡರು ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಗರ್ ಹುಕುಂ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಚನ್ನಾಪುರ ಅವರು ಸಾಗರದ ಕಾಂಗ್ರೆಸ್ ಮುಖಂಡರಾದ ತೀ ನಾ ಶ್ರೀನಿವಾಸ್ ರವರು ಸೊರಬ ತಾಲ್ಲೂಕಿನ ಬಗರ್ ಹುಕುಂ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿ ಬಿಡುತ್ತೇನೆ ಎಂಬ ವಿಚಾರವಾಗಿ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗುಡ್ಡೇಕೊಪ್ಪ ಹಾಯಾ ಬೆಟ್ಟದಕೂರ್ಲಿ ಸಿದ್ದಿಹಳ್ಳಿ …