w
Headlines
Home » ಆನಂದಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ: ಗಾಂಜಾ ಸಹಿತ ಇಬ್ಬರ ಬಂಧನ

ಆನಂದಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ: ಗಾಂಜಾ ಸಹಿತ ಇಬ್ಬರ ಬಂಧನ

GridArt 20260624

ಆನಂದಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ: 95 ಗ್ರಾಂ ಗಾಂಜಾ ಸಹಿತ ಇಬ್ಬರ ಬಂಧನ

Anandapur Police arrested two accused for transporting 95 grams of ganja on a motorcycle near Ulluru village in Sagar taluk. The contraband and vehicle were seized during a special operation led by PSI Praveen.

ಸಾಗರ, ಜೂನ್ 23: ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ್ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 95 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 23ರಂದು ಮಧ್ಯಾಹ್ನ ಯಡೆಹಳ್ಳಿ ಗ್ರಾಮದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಸಾಗರದಿಂದ ಆನಂದಪುರ ಕಡೆಗೆ ಬೈಕ್‌ನಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಿ.ಎಸ್.ಐ. ಪ್ರವೀಣ್ ಅವರಿಗೆ ಲಭಿಸಿತು.

ತಕ್ಷಣವೇ ಅವರು ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಿ, ಅವರ ಮಾರ್ಗದರ್ಶನದಂತೆ ಅಬಕಾರಿ ಉಪಾಧೀಕ್ಷಕರ ಸಮ್ಮುಖದಲ್ಲಿ ಉಳ್ಳೂರು ಗ್ರಾಮದ ಹೋಟೆಲ್ ಸಮೀಪ ವಾಹನ ತಪಾಸಣೆ ನಡೆಸಿದರು.

ಮಧ್ಯಾಹ್ನ ಸುಮಾರು 2.15ರ ವೇಳೆಗೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಬೈಕ್‌ನ್ನು ತಡೆದು ಪರಿಶೀಲಿಸಿದಾಗ, ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲಿದ್ದ ಬ್ಯಾಗ್‌ನೊಳಗಿನ ಪ್ಲಾಸ್ಟಿಕ್ ಚೀಲದಲ್ಲಿ 95 ಗ್ರಾಂ ಗಾಂಜಾ ಪತ್ತೆಯಾಯಿತು.

ಈ ಸಂಬಂಧ ಮುಜಾಮಿಲ್ ಹಾಗೂ ಹಫೀಜುಲ್ಲಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಂದ ಗಾಂಜಾ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.