Headlines

ಶಿವಮೊಗ್ಗ : ರಾತ್ರೋರಾತ್ರಿ ದೇವಸ್ಥಾನ ಕೆಡವಿ,ಅರ್ಚಕನ ಕಣ್ಣಲ್ಲಿ ನೀರು ತರಿಸಿದರು : ಗೋಪಾಲಕೃಷ್ಣ ಬೇಳೂರು

 

ಶಿವಮೊಗ್ಗ : ರಾತ್ರೋರಾತ್ರಿ ಕಳ್ಳರ ಹಾಗೆ ಹಿಂದೂ ದೇಗುಲಗಳನ್ನು ಕೆಡವಿದಾಗ ಹಿಂದುತ್ವದ ಕವಚ ತೊಟ್ಟ ಹಿಂದುತ್ವವಾದಿಗಳು ಮತ್ತು ಸರ್ಕಾರ ಎಲ್ಲಿ ಹೋಗಿತ್ತು ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಒಂದು ವೇಳೆ ಈ ಸಂದರ್ಭ ಕಾಂಗ್ರೆಸ್ ಸರ್ಕಾರಿವಿದ್ದಿದ್ದರೆ ಅಥವಾ ಮುಸ್ಲಿಂ ಅಧಿಕಾರಿಯೊಬ್ಬ ದೇಗುಲ ತೆರವು ಮಾಡಿಸಿದ್ದರೆ ಈ ಕವಚ ತೊಟ್ಟ ನಕಲಿ ಹಿಂದುತ್ವವಾದಿಗಳು ರಾಜ್ಯಕ್ಕೆ ಬೆಂಕಿ ಹಚ್ಚಿಬಿಡುತ್ತಿದ್ದರು ಎಂದು ಆರೋಪಿಸಿದರು.

ರಾತ್ರೋರಾತ್ರಿ ಕಳ್ಳರ ಹಾಗೆ ದೇವಸ್ಥಾನವನ್ನು ಒಡೆಸಿದ್ದಾರೆ. ಅಲ್ಲಿ ಬಿಜೆಪಿ ಸಂಸದರಿದ್ದಾರೆ. ಸರ್ಕಾರವು ಇವರದ್ದೆ. ಆದರೆ ಅಧಿಕಾರಿಗಳು ದೇಗುಲ ಒಡೆಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಇದು ಯಾವ ರೀತಿಯ ಸರ್ಕಾರ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.

ದೇಗುಲ ಕೆಡವಿದಾಗ ಅಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಕಣ್ಣೀರು ಹಾಕುತ್ತಿದ್ದರು. ಹಿಂದುತ್ವ ಅಂದರೆ ಇದೇನಾ ಎಂದು ಪ್ರಶ್ನಿಸಿದರು. ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಕೆಡವುವಾಗ ಪಕ್ಕದಲ್ಲೇ ಪುನರ್ ಸ್ಥಾಪನೆಗೆ ವ್ಯವಸ್ಥೆ ಮಾಡಬೇಕು ಎಂದರು.

ಈ ಹಿಂದೆ ಎಲ್ಲಾ ವಿಚಾರಕ್ಕೂ ಕೂಗಾಡುತ್ತಿದ್ದ ಶೋಭಾ ಕರಂದ್ಲಾಜೆ ಈಗ  ಎಲ್ಲಿ ಹೋಗಿದ್ದಾರೆ. ಅವರ ಬಾಯಿ ಈಗ ಬಂದ್ ಆಗಿದೆಯಾ. ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಆದಾಗಲೂ ಬಾಯಿ ಬಿಡಲಿಲ್ಲ. ದೇಗುಲ ಕೆಡವಿದ ವಿಚಾರದಲ್ಲೂ ಅವರು ಮಾತಾಡಲಿಲ್ಲವೇಕೆ. ಚುನಾವಣೆ ಬಂದಾಗ ಮಾತ್ರ ಬಾಂಬ್ ಹಾಕುತ್ತಿದ್ದರು ಎಂದು ಟೀಕಿಸಿದರು.

Leave a Reply

Your email address will not be published. Required fields are marked *