ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ರೈತ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಗ್ಗಲಿ ವೀರಭದ್ರಪ್ಪ ಗೌಡರು 80 ರ ದಶಕದಲ್ಲಿ ರೈತ ಪರ ಹೋರಾಟದಲ್ಲಿ ಧಾರವಾಡ ಹಿಂಡಲಗಾ ಜೈಲಿನಲ್ಲಿ 21 ದಿನ ಜೈಲು ವಾಸ…

Read More

ರಿಪ್ಪನ್ ಪೇಟೆಯ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಕೊರೊನಾ ಸೋಂಕು ನಿವಾರಣೆಗಾಗಿ ಶ್ರೀ ಸತ್ಯನಾರಾಯಣ ಪೂಜೆ.

ರಿಪ್ಪನ್ ಪೇಟೆ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ನಿವಾರಣೆಯಾಗಿ ದೇಶದ ಜನತೆ ಉತ್ತಮ ಆರೋಗ್ಯವನ್ನು ಹೊಂದಲಿ ಎಂದು ಪಟ್ಟಣದ ಕಾಲಭೈರವೇಶ್ವರ  ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು  ಸರಳವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷ ಅಧ್ಯಕ್ಷೆ ವಾಣಿ ಗೋವಿಂದಪ್ಪ ಗೌಡ ಮಾಧ್ಯಮದವರೊಂದಿಗೆ ಮಾತನಾಡಿ ಕೋವಿಡ್ 19 ರ ಕಾರಣದಿಂದ ದೇಶದಲ್ಲಿ ಕೋಟ್ಯಂತರ ಜನರು ಸೋಂಕಿನಿಂದ ಬಳಲುವಂತಾ ಯಿತು. ಹಾಗೆಯೇ ಲಕ್ಷಾಂತರ ಜನರು ಮರಣವನ್ನು ಹೊಂದಿದರು….

Read More

ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ” ಅಂಬೇಡ್ಕರ್ ಓದು ಕಾರ್ಯಕ್ರಮ” : ಅಂಬೇಡ್ಕರ್ ರವರ ಚಿಂತನೆಗಳು ಇಂದಿನ ಯುವ ಸಮೂಹಕ್ಕೆ ಅಗತ್ಯವಾಗಿದೆ :ಉಮೇಶ್

ರಿಪ್ಪನ್ ಪೇಟೆ : ಜಗತ್ತಿನಲ್ಲಿ ಪ್ರಜಾಪ್ರಭುತ್ವ ಆಡಳಿತ ಇರುವ ದೇಶಗಳಲ್ಲಿ ಭಾರತವೂ ಅತ್ಯುನ್ನತ ದೇಶವಾಗಿದೆ. ಇದಕ್ಕೆ ಭಾರತದಲ್ಲಿ ರಚನೆಗೊಂಡ ಬಿಆರ್. ಅಂಬೇಡ್ಕರ್ ರವರ  ಸಂವಿಧಾನದ ಆಶಯಗಳೆ ಕಾರಣವಾಗಿದೆ ಎಂದು ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್.ಹೇಳಿದರು.  ಅಮೃತ ಗ್ರಾಮದಲ್ಲಿ ಕರ್ನಾಟಕ ಸರ್ಕಾರ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಇದರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ  ಅಂಬೇಡ್ಕರ್  ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ…

Read More

ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೋವಿಡ್ ಲಸಿಕಾ ಅಭಿಯಾನ: ಗೊಂದಲ ಮತ್ತು ಭಯ ಪಡದೆ ನಿರಂತಕವಾಗಿ ಲಸಿಕೆ ಪಡೆಯಬೇಕು : ಮಂಜುಳಾ

ರಿಪ್ಪನ್ ಪೇಟೆ : ಮಕ್ಕಳಿಗೆ ಕೋರೋಣ ಲಸಿಕೆ ನೀಡುವ ಅಭಿಯಾನ ಇಡೀ ದೇಶಾದ್ಯಂತ ಆರಂಭವಾಗಿದ್ದು. ಈ ಹಿನ್ನೆಲೆಯಲ್ಲಿ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು.  ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಪಂಚಾಯತ್. ಗ್ರಾಮ ಪಂಚಾಯತ್ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ಯೋಗದಲ್ಲಿ ಆಯೋಜಿಸಲಾಗಿದ್ದ ಕೊ ರೊ ನಾ ಲಸಿಕಾ ಅಭಿಯಾನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ  ಉದ್ಘಾಟಿಸಿದರು.  ಕೋವಿಡ್ ಮತ್ತು ಇದರ ರೂಪಾಂತರಿ ಸೋಂಕನ್ನು ನಿಯಂತ್ರಿಸಲು ಸರಕಾರ…

Read More

ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಪ್ರಾರಂಭವಾದ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ :

ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ವೃತ್ತದ ಜೋಹರ ಪ್ಲಾಜಾದಲ್ಲಿ ನೂತನವಾಗಿ ಶ್ರೀ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಆರಂಭವಾಗಿದೆ. ರಿಪ್ಪನ್ ಪೇಟೆಯ ಸುತ್ತಮುತ್ತಲಿನ ಜನತೆಗೆ ಅಗತ್ಯವಾಗಿ ಬೇಕಾಗಿದ್ದ ಸುಸಜ್ಜಿತ ಆಧುನಿಕ ಡೆಂಟಲ್ ಕ್ಲಿನಿಕ್ ಪ್ರಾರಂಭವಾಗಿದ್ದು ಜನತೆಯಲ್ಲಿ ಸಂತಸ ತಂದಿದೆ. ಟೇಪ್ ಕತ್ತರಿಸುವ ಮೂಲಕ ಕ್ಲಿನಿಕ್ ನ್ನು ಉಧ್ಘಾಟಿಸಿದ ಜೋಹರ ಪ್ಲಾಜಾ ಮಾಲೀಕರು ಹಾಗೂ ಉದ್ಯಮಿಗಳಾದ ಎ ಕೆ ಮಹಮ್ಮದ್ ಸಾಬ್ ಮಾತನಾಡಿ ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ವ್ಯಕ್ತಿಗಳ ಸೌಂದರ್ಯವೂ ವೃದ್ಧಿಸುತ್ತದೆ. ನಮ್ಮಲ್ಲಿ ಪಾಶ್ಚಿಮಾತ್ಯ…

Read More

ರಿಪ್ಪನ್ ಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ : ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಹರತಾಳು ಹಾಲಪ್ಪ ಚರ್ಚೆ

ರಿಪ್ಪನ್ ಪೇಟೆ : ಪಟ್ಟಣದ ರಸ್ತೆಗಳ  ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಇಂದು ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪರವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈಗಾಗಲೇ ಪಟ್ಟಣದ ರಸ್ತೆಗಳ ಅಗಲೀಕರಣಕ್ಕೆ 6ಕೋಟಿ ಹಣ ಬಿಡುಗಡೆಯಾಗಿದ್ದು ಇನ್ನೂ ಹೆಚ್ಚಿನ 2ಕೋಟಿ ಅನುದಾನ ನೀಡುವಂತೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಹಾಗೆಯೇ ಸಾಗರದ ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಶಾಸಕರು ಇದೇ ಸಂದರ್ಭದಲ್ಲಿ ಚರ್ಚೆ ನಡೆಸಿದರು.

Read More

ಗವಟೂರು ಹೊಳೆಸಿದ್ದೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದ ಎಳ್ಳಮವಾಸ್ಯೆ ಜಾತ್ರಾ ಮಹೋತ್ಸವ:

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಹೊಳೆಸಿದ್ದೇಶ್ವರ ಸ್ವಾಮಿಯ ಎಳ್ಳಮವಾಸ್ಯೆ ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ಮಳಲಿಮಠದ ಷ.ಬ್ರ.ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಗಳು ಸಂಘಟನೆ ಸದ್ಭಾವನೆಯೊಂದಿಗೆ ಯುವಜನಾಂಗ ಧಾರ್ಮಿಕ ಅಚರಣೆಗಳಲ್ಲಿ ತೊಡಗಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು,  ದುಡಿಮೆಯಿಂದ ಗಳಿಸಿದ ಹಣವನ್ನು ದಾನ, ಧರ್ಮಕ್ಕಾಯಕ್ಕೆ ವಿನಿಯೋಗಿಸಿದರೆ ಪುಣ್ಯನಾದರು ಬರುತ್ತದೆ ಅದೇ ಬಚ್ಚಿಟ್ಟರೆ ಪರರ ಪಾಲಾಗುತ್ತದೆ ಈಗಲಾದರೂ ಗಳಿಸಿದ ಸಂಪತ್ತು ಇನ್ನೊಬ್ಬರಿಗೆ ದಾನ…

Read More

ಎಳ್ಳಮವಾಸ್ಯೆ ನಿಮಿತ್ತ ಶ್ರೀ ಕ್ಷೇತ್ರ ರಾಮತೀರ್ಥದಲ್ಲಿ ಮಿಂದೆದ್ದ ಭಕ್ತ ಸಮೂಹ

ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ  ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ಶರ್ಮೀಣ್ಯಾವತಿ ನದಿ ತೀರದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಎಳ್ಳಮಾವಾಸ್ಯೆ ನಿಮಿತ್ತ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು. ಸುತ್ತಮುತ್ತಲ ಗ್ರಾಮಗಳಿಂದ ತಂಡೋಪತಂಡವಾಗಿ ಬಂದ ಭಕ್ತರು ನದಿಯಲ್ಲಿ ಮಿಂದೆದ್ದು, ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.  ಕೆಂಜಿಗಾಪುರದ ಶ್ರೀಧರ್ ಭಟ್ ಹಾಗೂ ದೇವಸ್ಥಾನದ ಅರ್ಚಕ ಎ.ವಿ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹೋಮ…

Read More

ಎಳ್ಳಮವಾಸ್ಯೆ ಪ್ರಯುಕ್ತ ಜ.2 ರಂದು ರಾಮತೀರ್ಥದಲ್ಲಿ ಜಾತ್ರಾ ಮಹೋತ್ಸವ

ರಿಪ್ಪನ್‌ಪೇಟೆ: ಎಳ್ಳಮವಾಸ್ಯೆ ಪ್ರಯುಕ್ತ ಜ.2 ರಂದು ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾಣ ಪ್ರಸಿದ್ಧ ಅಗಸ್ತ್ಯ ಮಹರ್ಷಿಗಳ ಪುಣ್ಯಾಶ್ರಮವಾದ ಶರ್ಮೀಣ್ಯಾವತಿ ನದಿ ತೀರದಲ್ಲಿರುವ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ 40ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 9ನೇ ವರ್ಷದ ವಾರ್ಷಿಕೋತ್ಸವ ಏರ್ಪಡಿಸಲಾಗಿದೆ ಎಂದು ಶ್ರೀ ರಾಮೇಶ್ವರ ದೇವಸ್ಥಾನದ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 8.00 ಗಂಟೆಯಿಂದ ಪ್ರಧಾನ ಪುರೋಹಿತರಾದ ಕೆಂಜಿಗಾಪುರದ ಶ್ರೀಧರ್ ಭಟ್, ಶ್ರೀ ಸತ್ಯನಾರಾಯಣ…

Read More

ಕುವೆಂಪುರವರ ವಿಚಾರದಾರೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ನಡವಳಿಕೆಗಳಲೂ ಬದಲಾವಣೆ ಮಾಡಿಕೊಳ್ಳೋಣ : ಎಂ ಬಿ ಲಕ್ಷ್ಮಣಗೌಡ

ರಿಪ್ಪನ್‌ಪೇಟೆ : ಇಲ್ಲಿನ ವಿಶ್ವಮಾನವ ಕಲ್ಯಾಣ ಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ 118ನೇ ಜನ್ಮ ದಿನಾಚರಣೆಯನ್ನು ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ  ಕೇವಲ ಮನುಷ್ಯ ಅಥವಾ ಮಾನವರಾಗದೆ ವಿಶ್ವಮಾನವರಾಗೋಣ ಎಂದು ಕುವೆಂಪು ಸಂದೇಶ ನೀಡಿದ್ದಾರೆ ಇಂತಹ ಮಹನೀಯರನ್ನು ಭಾವಚಿತ್ರಕ್ಕೆ ಅಷ್ಟೆ ಸೀಮಿತಗೊಳಿಸದೆ ಅವರ ವಿಚಾರದಾರೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ನಡವಳಿಕೆಗಳಲೂ ಬದಲಾವಣೆ ಮಾಡಿಕೊಳ್ಳೋಣ,ಆಧ್ಯಾತ್ಮಿಕವಾಗಿ ಧರ್ಮವನ್ನು ರಾಷ್ಟ್ರ ಕವಿ ಕುವೆಂಪು ಅವರು ಒಪ್ಪಿಕೊಂಡಿದ್ದರು…

Read More