Headlines

ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಕೇಸ್ : ಸಿಎಂ ಬೊಮ್ಮಾಯಿ ಘೋಷಣೆ

ಭಾಷೆ ನೆಪದಲ್ಲಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಗೂಂಡಾ ಕಾಯ್ದೆ, ದೇಶದ್ರೋಹದ ಕೇಸ್ ದಾಖಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಕೃತ್ಯ ಖಂಡಿಸಿ ವಿಧಾನಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ. ಎಂಇಎಸ್ ವಿರುದ್ಧ ಸರ್ವಾನುಮತದ ಖಂಡನಾ ನಿರ್ಣಯ ಕೂಡ ಅಂಗೀಕರಿಸಲಾಗಿದೆ. ಸುವರ್ಣ ಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚೆನ್ನಮ್ಮನ ಪ್ರತಿಮೆ ನಿರ್ಮಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಎಂಇಎಸ್ ಬ್ಯಾನ್ ಮಾಡಲು ಆಗದಿದ್ದರೂ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು…

Read More

ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನ : ಗಣ್ಯರ ಸಂತಾಪ

ಮಾಜಿ ಕೇಂದ್ರ ಸಚಿವ,ಹಿರಿಯ ಕಾಂಗ್ರೆಸ್ ನಾಯಕ ಆರ್.ಎಲ್.ಜಾಲಪ್ಪ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 96 ವರ್ಷ ಪ್ರಾಯವಾಗಿತ್ತು. ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಾಲಪ್ಪ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದೊಡ್ಡಬಳ್ಳಾಪುರದ ತೂಬಗೆರೆ ನಿವಾಸದಲ್ಲಿ ಪಾರ್ಶುವಾಯುವಿಗೆ ತುತ್ತಾಗಿದ್ದ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಗಡೆ ಅವರ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅವರು,ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1996…

Read More

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ : ಜಾತ್ಯಾತೀತತೆ ಎಂಬ ಮಾತು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆಯಾ ?????

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷರನ್ನು ಸ್ಥಾನದಿಂದ ವಜಾ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸಿ.ಎನ್.ಅಕ್ಮಲ್ ಜಾಮಿಯಾ ಮಸೀದಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡವರು. ಅಕ್ಮಲ್ ಅವರು ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಕೂಡ. ಇತ್ತೀಚೆಗೆ ನಗರದ ರಾಮನಹಳ್ಳಿಯಲ್ಲಿ ನೂತನವಾಗಿ ಆರಂಭಗೊಂಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಅನ್ನದಾನ ಏರ್ಪಡಿಸಿದ್ದರು. ಈ ವೇಳೆ ಅಕ್ಮಲ್ ಅವರು ದೇವಸ್ಥಾನಕ್ಕೂ ಹೋಗಿದ್ದರು. ಅಲ್ಲಿ ಪೂಜೆ ಬಳಿಕ ಮಂಗಳಾರತಿ ಪಡೆದಿದ್ದರು. ಈ ಕಾರಣಕ್ಕೆ ಅವರನ್ನು ಜಾಮೀಯ ಮಸೀದಿ ಅಧ್ಯಕ್ಷ ಸ್ಥಾನದಿಂದ…

Read More

ಲೋಕಾಯುಕ್ತದ ಪವರ್ ತೋರಿಸಿದ್ದ ಎನ್ ವೆಂಕಟಾಚಲ ನಿಧನ :

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು’ ಎಂದು ಸಾಧಿಸಿ ತೋರಿಸಿದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂತು. ‘ಬಳ್ಳಾರಿ ರಸ್ತೆಯ…

Read More

ಸಿದ್ದರಾಮಯ್ಯ ನಿವಾಸಕ್ಕೆ ಬಂಗಾರಪ್ಪ ಪುತ್ರರ ಭೇಟಿ..! ಇಬ್ಬರ ನಡುವೆ ಸಂಧಾನಕ್ಕೆ ಸಿದ್ದವಾಗಿದೆಯಾ ವೇದಿಕೆ ??

ಬೆಂಗಳೂರಿನ  ಶಿವಾನಂದ ಸರ್ಕಲ್ ಬಳಿಯಿರುವ ಸಿದ್ದರಾಮಯ್ಯ ನಿವಾಸಕ್ಕೆ ಮಧು ಬಂಗಾರಪ್ಪ ಇಂದು ಭೇಟಿ ನೀಡಿದರು. ಇದಾದ ಅರ್ಧ ಗಂಟೆ ಬಳಿಕ ಕುಮಾರ್ ಬಂಗಾರಪ್ಪ ಕೂಡ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ. ವಿಜಯದಶಮಿ ಪ್ರಯುಕ್ತ ಸಿದ್ದರಾಮಯ್ಯಗೆ ಶುಭಕೋರಲು ಮಧು ಬಂಗಾರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದರು. ಇದೇ ವೇಳೆ ಕುಮಾರ್ ಬಂಗಾರಪ್ಪ ಕೂಡ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸಿದ್ದರಾಮಯ್ಯ ಅಣ್ಣ-ತಮ್ಮನ ಸಂಧಾನಕ್ಕೆ ಮುಂದಾದರ ಎಂಬ ಪ್ರಶ್ನೆ ಮೂಡಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ‌, ನನ್ನ‌ ಮಗಳ ಮದುವೆ…

Read More

ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ :

ಬೆಂಗಳೂರು: ಕೊರೊನಾ ಆತಂಕದ ಮಧ್ಯೆ ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ಅಳೆದು ತೂಗಿ ಅನುಮತಿ ನೀಡಿದೆ. ಕಳೆದ ಬಾರಿಗಿಂತ ಈ ಬಾರಿ ಕೊಂಚ ಸಡಿಲಿಕೆ ಹೆಚ್ಚಿಸಿ, ಸರಳ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಮನೋರಂಜನೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ನಿರ್ಬಂಧ ಹೇರಿದೆ. ಮನೆ, ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದ್ದು, ಗಲ್ಲಿಗೊಂದರಂತೆ ಗಣೇಶ ಕೂರಿಸುವುದಕ್ಕೆ ಅನುಮತಿ ನೀಡಿಲ್ಲ. ಕೊರೊನಾ ಹೆಚ್ಚಿರುವ ಗಡಿ ಜಿಲ್ಲೆಗಳಲ್ಲಿ ಗಣೇಶೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುವ ಸಾಧ್ಯತೆಯಿದೆ. ಗಣೇಶೋತ್ಸವಕ್ಕೆ ಸರ್ಕಾರದ ಷರತ್ತುಗಳೇನು..? -ಮೆರವಣಿಗೆ ಮಾಡುವುದಕ್ಕೆ…

Read More

ಮೈಸೂರು ಗ್ಯಾಂಗ್‍ರೇಪ್ ಪ್ರಕರಣ ಸಂಬಂಧ ಕಾರ್ಯಾಚರಣೆ ಯಶಸ್ವಿ: ಗೃಹ ಸಚಿವ

ಬೆಂಗಳೂರು: ಮೈಸೂರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಈಗ ಮಾಹಿತಿ ಕೊಡಲು ಸಾಧ್ಯವಿಲ್ಲ. ಆದರೆ ಇನ್ನೆರಡು ಗಂಟೆಯ ಒಳಗೆ ನಿಮಗೆ ಎಲ್ಲಾ ಮಾಹಿತಿ ನೀಡುತ್ತೇವೆ. ನಾನು ಅಥವಾ ಪೊಲೀಸರು ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಿಳಿಸಿದರು. ಪ್ರಕರಣ ಸಂಬಂಧ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಂದು ಬೆಳಗ್ಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ….

Read More

ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿರುತ್ತವೆ ಅದಕ್ಕೆಲ್ಲಾ ಏನೂ ಮಾಡೋಕೆ ಆಗಲ್ಲ : ಸಚಿವ ಉಮೇಶ್ ಕತ್ತಿ

ಚಾಮರಾಜನಗರ: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಂಥ ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಇದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು  ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಇವೆಲ್ಲವೂ ಸಮಾಜದಲ್ಲಿ ನಡೆಯುತ್ತವೆ. ನಡೆಯಬಾರದು, ಆದರೂ ನಡೆಯುತ್ತವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ನಾನು ಗೃಹ ಮಂತ್ರಿ ಅಲ್ಲ, ಈ ಸಮಸ್ಯೆಯನ್ನು ಗೃಹಮಂತ್ರಿ ಬಗೆ ಹರಿಸುತ್ತಾರೆ. ಗೂಂಡಾಗಳು ಗೂಂಡಾಗಿರಿ ಮಾಡುತ್ತಿದ್ದಾರೆ. ಮೂರು ಲಕ್ಷ ರುಪಾಯಿ ಕೊಟ್ಟರೆ ಬಿಡುವುದಾಗಿ…

Read More

ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ‘ ಎಂಬ ಹೇಳಿಕೆ ಹಿಂಪಡೆಯುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಆನೇಕಲ್: ‘ರೇಪ್ ಆಗಿದ್ದು ಅಲ್ಲಿ, ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ’ ಎಂಬ ಮಾತನ್ನು ಹಿಂಪಡೆಯುವುದಾಗಿ ಸೆಂಟ್ರಲ್ ಜೈಲಿನ ಬಳಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನನಗೆ ಬಹಳ ಆತಂಕ ಆಗಿತ್ತು, ಆತಂಕದಲ್ಲಿ ಈ ಮಾತು ಹೇಳಿದ್ದೆ. ನಾನು ನೀಡಿದ್ದ ಹೇಳಿಕೆ ಹಿಂಪಡೆಯುತ್ತೇನೆ. ಸಂತ್ರಸ್ತೆಯನ್ನು ನನ್ನ ಮಗಳ ಸ್ಥಾನದಲ್ಲಿ ನೋಡುವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಈ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಗೃಹ ಸಚಿವರ…

Read More

ಸಾಹಿತಿ ನಯನ ಕೋಟ ರವರಿಗೆ ಒಲಿದ ರಾಜ್ಯಮಟ್ಟದ ಗುರುಕುಲ ಸಾರ್ವಭೌಮ ಕವಿತಾ ಕೃಷ್ಣ ಪ್ರಶಸ್ತಿ:

ಚಿತ್ರದುರ್ಗ: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರಶಸ್ತಿ “ಗುರುಕುಲ ಕಲಾ ಸಾರ್ವಭೌಮ ಕವಿತಾಕೃಷ್ಣ” ಪ್ರಶಸ್ತಿಗೆ ಚಿತ್ರದುರ್ಗದ ಸಾಹಿತಿಯಾದ ನಯನ ಕೋಟ ರವರು ಆಯ್ಕೆಯಾಗಿದ್ದಾರೆ.  ಈ ಕುರಿತು ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಯನ ಕೋಟ ರವರು ಮೂಲತಃ ಉಡುಪಿ ಜಿಲ್ಲೆಯ ಕೋಟದವರು.ಪ್ರಸ್ತುತ  25 ವರ್ಷದಿಂದ ಚಿತ್ರದುರ್ಗದ ನಿವಾಸಿ. ಇವರ ತಾಯಿ ಸಾಹಿತಿ ನಾಗರತ್ನ ಬಿ(ವನಸುಮ ವಡ್ಡರ್ಸೆ) ಅವರಿಂದ ಪ್ರೇರಣೆ ಪಡೆದು 20 ವರ್ಷಗಳಿಂದ ಎಲೆಮರೆಯ…

Read More