ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶಿಸಿದೆ. ರವಿ ಡಿ. ಚನ್ನಣ್ಣನವರ್- ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಡಾ. ಭೀಮಾಶಂಕರ್ ಎಸ್.ಗುಳೇದ್- ಬೆಂಗಳೂರು ನಗರ ಪೂರ್ವ ವಲಯ ಡಿಸಿಪಿ, ಅಬ್ದುಲ್ ಅಹದ್- ಕೆಎಸ್ಆರ್ಟಿಸಿ ಭದ್ರತಾ ಮತ್ತು ಜಾಗ್ರತ ದಳದ ನಿರ್ದೇಶಕ, ಟಿ. ಶ್ರೀಧರ- ಡಿಸಿಆರ್ಇ ಎಸ್ಪಿ, ಟಿ. ಪಿ. ಶಿವಕುಮಾರ್- ಚಾಮರಾಜನಗರ ಎಸ್ಪಿ ದಿವ್ಯಾ ಸಾರಾ ಥಾಮಸ್ – ಮೈಸೂರು ಕೆಪಿಎ…