Headlines

ವೃಕ್ಷಮಾತೆ ತಿಮ್ಮಕ್ಕ ಸ್ಮರಣೆಗೆ ಶಿಗ್ಗಾವಿಯಲ್ಲಿ ಸಸಿ ನೆಡುವ ಮೂಲಕ ಗೌರವ

ಹಾವೇರಿ: ಜಿಲ್ಲೆಯ ಶಿಗ್ಗಾವಿಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದ ಸಂದರ್ಭದಲ್ಲಿ, ಶಿಗ್ಗಾವಿ ನಗರದಲ್ಲಿರುವ ಶಬರಿಗಿರಿ ವೈಷ್ಣವಿ ಉದ್ಯಾನವನದಲ್ಲಿ ಅವರ ಸ್ಮರಣಾರ್ಥವಾಗಿ ಸಸಿಗಳನ್ನು ನೆಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು. ನಂತರ ಮೌನಾಚರಣೆ ನಡೆಸಿ ತಿಮ್ಮಕ್ಕ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಶಬರಿಗಿರಿ ವೈಷ್ಣವಿ ಬಡಾವಣೆಯ ವೈ.ಎಸ್. ಪಾಟೀಲ್, ಮಲ್ಲಪ್ಪ ಚಕ್ರಸಾಲಿ, ಚನ್ನಪ್ಪ ನೆಲೋಗಲ್, ಶಿವಲಿಂಗಪ್ಪ ಹುರಳಿ, ಬಸವರಾಜ್ ಬಸರಿಕಟ್ಟಿ ಹಾಗೂ ರಾಜ್ ಡಾನ್ಸ್ ಸ್ಕೂಲಿನ ಮಕ್ಕಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ವರದಿ : ನಿಂಗರಾಜ್…

Read More

ಟ್ರೂಕಾಲರ್ ಯುಗದ ಅಂತ್ಯ? — ಈಗ ಕರೆ ಮಾಡಿದವರ ‘ಆಧಾರ್ ಹೆಸರು’ ನೀವೇ ನೋಡ್ತೀರಾ!

ಟ್ರೂಕಾಲರ್ ಯುಗದ ಅಂತ್ಯ? — ಅಪರಿಚಿತ ಕರೆ? ಸಮಸ್ಯೆ ಇಲ್ಲ! — ಸರ್ಕಾರದ CNAP ಹೇಳುತ್ತೆ ಯಾರು ಕರೆ ಮಾಡಿದವರ ಹೆಸರು! ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ “ಯಾರು?” ಎಂಬ ಗೊಂದಲ ಈಗ ಕಡಿಮೆಯಾಗುವ ಸಾಧ್ಯತೆ ಇದೆ. ಟ್ರೂಕಾಲರ್‌ಗಿಂತ ನಿಖರವಾದ ಮಾಹಿತಿ ನೀಡುವ CNAP (Calling Name Presentation) ಎಂಬ ಹೊಸ ಸರ್ಕಾರಿ ಕಾಲರ್ ಐಡಿ ವ್ಯವಸ್ಥೆ ದೇಶದ ಹಲವೆಡೆಗಳಲ್ಲಿ ಪರೀಕ್ಷೆಗೆ ಬಂದಿದೆ. ಯಾರಾದರೂ ಕರೆ ಮಾಡಿದಾಗ, ಅವರ ಸಂಖ್ಯೆಗೆ ಲಿಂಕ್ ಆಗಿರುವ ಆಧಾರ್ ಹೆಸರು ನೇರವಾಗಿ…

Read More

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಮೇಜರ್ ಸರ್ಜರಿ’ ಸಿದ್ಧ! – ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ | ಬೇಳೂರು ಗೋಪಾಲಕೃಷ್ಣಗೆ ಸಿಗುತ್ತಾ ಮಂತ್ರಿಗಿರಿ!? ಈ ಸುದ್ದಿ ನೋಡಿ

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಮೇಜರ್ ಸರ್ಜರಿ’ ಸಿದ್ಧ! – ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ | ಬೇಳೂರು ಗೋಪಾಲಕೃಷ್ಣಗೆ ಸಿಗುತ್ತಾ ಮಂತ್ರಿಗಿರಿ!? ಈ ಸುದ್ದಿ ನೋಡಿ ಬೆಂಗಳೂರು, ನವೆಂಬರ್ 16: ರಾಜ್ಯ ಕಾಂಗ್ರೆಸ್ ಪಾಳೆಯಲ್ಲಿ ಬಹುಕಾಲದಿಂದ ಕಾದಿದ್ದ ಭಾರೀ ಬದಲಾವಣೆಯ ಚರ್ಚೆ ಈಗ ವೇಗ ಪಡೆದುಕೊಂಡಿದೆ. ಬಿಹಾರ ಚುನಾವಣಾ ಫಲಿತಾಂಶ ಹೊರಬಿದ್ದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗಳನ್ನು ಭೇಟಿಯಾದುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಸಾಗರ…

Read More

ಕಿರಿ ವಯಸ್ಸಿನಲ್ಲಿ ಹಿರಿ ಸಾಧನೆ – ಉತ್ತರಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಕಾವ್ಯಶ್ರೀ ಭಟ್

ಕಿರಿ ವಯಸ್ಸಿನಲ್ಲಿ ಹಿರಿ ಸಾಧನೆ – ಉತ್ತರಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಕಾವ್ಯಶ್ರೀ ಭಟ್ ಉತ್ತರಕನ್ನಡ: ಹಾರಬೇಕೆನ್ನೋ ಕನಸು  ಕಾಣದೇ ಇರೋ ಹೆಣ್ಣು ಮನಸಿಲ್ಲ, ಆದರೆ ಆ ಕನಸು ಜವಾಬ್ದಾರಿಗೋ ಮರ್ಜಿಗೋ ಕುಸಿದು ಬೀಳೋದು ಇದ್ದೇ ಇದೆ. ಈ ಹುಡುಗಿ ಬರೀ ಆಗಸದಲ್ಲಿ ಹಾರಾಟ ಮಾಡಿಲ್ಲ ಬದಲಿಗೆ ಈಕೆಯ ಕನಸಿನ ರೆಕ್ಕೆಗಳು ಕೋಟಿ ಕಂಗಳಿಗೆ  ಸ್ಫೂರ್ತಿಯಾಗಿದೆ. ಜಪ ಮಾಡೋರ ಮಗಳ ಕೈಗೆ ಬಂತು ಜಾಯ್‌ಸ್ಟಿಕ್ : ಅಪ್ಪ ಪುಟ್ಟ ಮಗುವನ್ನು ಎತ್ತಿಕೊಂಡು ಆಕಾಶದಲ್ಲಿ ವಿಮಾನ ಹಾರಾಡುತ್ತಿರುವುದನ್ನು…

Read More

SSLC, ದ್ವಿತೀಯ ಪಿಯುಸಿ ಪರೀಕ್ಷೆ : 1 ಮತ್ತು 2 ಅಂತಿಮ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

SSLC, ದ್ವಿತೀಯ ಪಿಯುಸಿ ಪರೀಕ್ಷೆ : 1 ಮತ್ತು 2 ಅಂತಿಮ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ಬೆಂಗಳೂರು: 2025-26ನೇ ಸಾಲಿನ SSLC ಮತ್ತು ದ್ವೀತಿಯ ಪಿಯುಸಿ ಪರೀಕ್ಷೆ 1 ಮತ್ತು 2 ಅಂತಿಮ ವೇಳಾಪಟ್ಟಿಯನ್ನ ಶಿಕ್ಷಣ ‌ಇಲಾಖೆ ಪ್ರಕಟ ಮಾಡಿದೆ. ಫೆಬ್ರವರಿಯಿಂದಲೇ ಈ ವರ್ಷದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮೇ ಗೆ ಎರಡು ಪರೀಕ್ಷೆಗಳು ಮುಗಿಯಲಿವೆ. SSLC ಪರೀಕ್ಷೆ 1 ಮಾರ್ಚ್ 18 ರಿಂದ ಏಪ್ರಿಲ್ 2 ವರೆಗೆ ನಡೆದರೆ, SSLC ಪರೀಕ್ಷೆ 2 ಮೇ 18 ರಿಂದ…

Read More

ಗವಿಸಿದ್ಧೇಶ್ವರ ಕೃಪೆಗಾಗಿ ಹಿಂದೂ-ಮುಸ್ಲಿಂ ಸಮಾನ ಉಪವಾಸ ವ್ರತಾಚರಣೆ | ತಾಂಬಾದಲ್ಲಿ ಜಾತ್ರೆಯ ಸೌಹಾರ್ದ ಸ್ಪಂದನ

ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಕೃಪೆಗೆ ಪಾತ್ರರಾಗಲು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಜಾತಿ-ಧರ್ಮ ಬದಿಗೊತ್ತಿ ಒಂದು ತಿಂಗಳು ಉಪವಾಸ ವ್ರತಾಚರಣೆಯನ್ನು ಮುಕ್ತಾಯಗೊಳಿಸಿದರು. ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಮತ್ತು ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವವೂ ನಡೆಯಲಿದ್ದು, ಎರಡೂ ದೇವರ ಜಾತ್ರೆ ಒಟ್ಟಿಗೆ ನಡೆಯುವುದು ವಿಶೇಷ. ಗವಿಸಿದ್ಧೇಶ್ವರ ಮತ್ತು ಮಹಾಲಕ್ಷ್ಮೀಯ ಮೇಲೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರ ಅಪಾರ ನಂಬಿಕೆ, ಸುತ್ತಮುತ್ತಲಿನ ಗ್ರಾಮಗಳ ಜನರು…

Read More

ಹಾಸ್ಯ ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ – ಶೂಟಿಂಗ್ ನಲ್ಲಿದ್ದಾಗಲೇ ನಡೆಯಿತು ದುರಂತ

ಹಾಸ್ಯ ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ – ಶೂಟಿಂಗ್ ನಲ್ಲಿದ್ದಾಗಲೇ ನಡೆಯಿತು ದುರಂತ ಹಾಸ್ಯ ಕಲಾವಿದ, ತಮ್ಮ ಕಾಮಿಡಿ ಮೂಲಕವೇ ಉತ್ತರ ಕರ್ನಾಟಕದಲ್ಲಿ ನಗುವಿನ ಹೊನಲು ಹರಿಸಿದ್ದ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ನಗುವಿನ ಹುಚ್ಚು ಹಿಡಿಸಿದ್ದ, ಕಲಿಯುಗದ ಕುಡುಕ ಖ್ಯಾತಿಯ ನಟ ರಾಜು ತಾಳಿಕೋಟೆ ಮೃತಪಟ್ಟಿದ್ದಾರೆ. ಉಡುಪಿಯ ಮಣಿಪಾಲ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟ ಶೈನ್ ಶೆಟ್ಟಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ರಾಜು ತಾಳಿಕೋಟೆ, ಸಿನಿಮಾ ಶೂಟಿಂಗ್​ ಗೆ…

Read More

ಶಿವಮೊಗ್ಗದ ಮೂವರು ಮಹಿಳೆಯರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಶಿವಮೊಗ್ಗದ ಮೂವರು ಮಹಿಳೆಯರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬೆಂಗಳೂರು: ಸಾಹಿತಿಗಳಾದ ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್‌ ಸಹಿತ ಐವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ 2024 ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಚಾಮರಾಜನಗರದ ಡಾ.ಎಂ.ಬಸವಣ್ಣ, ಬೆಂಗಳೂರಿನ ಶೂದ್ರ ಶ್ರೀನಿವಾಸ್‌, ಪ್ರತಿಭಾ ನಂದಕುಮಾರ್, ಕಲಬುರಗಿಯ ಡಾ.ಡಿ.ಬಿ.ನಾಯಕ್, ಮುಂಬೈಯ ಡಾ.ವಿಶ್ವನಾಥ ಕಾರ್ನಾಡ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು. ಸಾಹಿತ್ಯಶ್ರೀ ಪ್ರಶಸ್ತಿಗೆ ಚಿಕ್ಕಮಗಳೂರಿನ ಡಾ.ಬಿ.ಎಂಪುಟ್ಟಯ್ಯ, ಬೆಂಗಳೂರು ಡಾ.ಕೆ.ವೈ. ನಾರಾಯಣಸ್ವಾಮಿ, ಕೋಲಾರದ ಪದ್ಮಾಲಯ ನಾಗರಾಜ್, ತುಮಕೂರಿನ ಬಿ.ಯು.ಸುಮಾ,…

Read More

ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ – ಸುಜಾತಾ ಭಟ್

ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ – ಸುಜಾತಾ ಭಟ್ ಧರ್ಮಸ್ಥಳ ಅನನ್ಯ ಪ್ರಕರಣ – ಸುಜಾತ ಭಟ್ ಬಂಡವಾಳ ಬಯಲಿಗೆಳೆದು ಪ್ರಕರಣಕ್ಕೆ ತಿರುವು ತಂದ ಮೊದಲ ಮಾಧ್ಯಮ ಪೋಸ್ಟ್ ಮ್ಯಾನ್ ನ್ಯೂಸ್ ಕನ್ನಡ .. ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಕಟ್ಟುಕತೆ ಪ್ರಕರಣದ ತನಿಖೆಯನ್ನು ಎಸ್‌ಐಟಿ (SIT) ಮುಂದುವರಿಸಿದೆ. ಈ ಪ್ರಕರಣದ ಹಿಂದೆ ಬಹುಭಾಷಾ ನಟನ ಸಹೋದರನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಎಸ್‌ಐಟಿ ನೋಟಿಸ್…

Read More

ಅ.6 ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು‌ ನಿಲುಗಡೆ

ಅ.6 ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು‌ ನಿಲುಗಡೆ ಶಿವಮೊಗ್ಗ :  ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ: 20651 / 20652) ನಿಲುಗಡೆಗೆ ಸೌಲಭ್ಯ ಒದಗಿಸಲು ತಾತ್ಕಾಲಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ. ಈ ನಿಲುಗಡೆ ಸೌಲಭ್ಯವನ್ನು 2025ರ ಅಕ್ಟೋಬರ್ 6 ರಿಂದ 2026ರ ಜನವರಿ 5 ರವರೆಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೊಳಿಸಿ ರೈಲ್ವೆ ಇಲಾಖೆಯು ಆದೇಶ ನೀಡಿದೆ….

Read More