POSTMANNEWS

ನೈಜ ಸುದ್ದಿ ನೇರ ಬಿತ್ತರ..

ದೆಹಲಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದ ಸಂಸ್ಕೃತಿ ಪ್ರತಿನಿಧಿಸಿದ ಸಾಗರದ ಯೂತ್ ಫೋರ್ಸ್

Sagara Youth Force Association represented Karnataka at the Republic Day parade on Kartavya Path, New Delhi, showcasing Dollu Kunitha, Pooja Kunitha and Yakshagana.

ದೆಹಲಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಸಾಗರದ ಯೂತ್ ಫೋರ್ಸ್ ಸಂಚಲನ

ಸಾಗರ: ಈ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪಥಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ “ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್” ಗಮನಸೆಳೆದಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯ ಅತಿಥಿಗಳಾದ ಯುರೋಪ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೋ ಕೊಸ್ಟಾ ಮತ್ತು ಯುರೋಪ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್ ಜೊತೆಗೆ ಹೊಸನಗರ ಹಾಗೂ ನಗರ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕದ ಜಾನಪದ ಕಲೆಯನ್ನು ಪ್ರತಿಬಿಂಬಿಸುವ ಡೊಳ್ಳುಕುಣಿತ, ಪೂಜಾ ಕುಣಿತ ಮತ್ತು ಯಕ್ಷಗಾನವನ್ನು ಮನಮೋಹಕವಾಗಿ ಪ್ರದರ್ಶಿಸಿದರು.

ಡೊಳ್ಳುಕುಣಿತ ತಂಡವು ಭಾರತದ ವಿವಿಧ ರಾಜ್ಯಗಳ ವಾದ್ಯವೃಂದಗಳನ್ನು ಮುನ್ನಡೆಸಿ ಪಥಸಂಚಲನಕ್ಕೆ ವಿಶೇಷ ಶೋಭೆ ನೀಡಿತು. ನಂತರ ಪೂಜಾ ಕುಣಿತ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು.

ವಿವಿಧ ದಳಗಳ ಪಥಸಂಚಲನದ ಬಳಿಕ ‘ವಂದೇ ಮಾತರಂ’ ಗೀತೆಗೆ ತಂಡ ಹೆಜ್ಜೆ ಹಾಕಿದ್ದು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತು.

ತಂಡದ ಸಾರಥ್ಯವನ್ನು ಸಂಘದ ಅಧ್ಯಕ್ಷೆ ಪುಷ್ಪಲತಾ ಹೆಚ್.ಎಸ್., ಕಾರ್ಯದರ್ಶಿ ಭಾರತಿ ಎಸ್., ಪಟ್ಲ ಫೌಂಡೇಶನ್‌ನ ಸತೀಶ್ ಹಾಗೂ ಮಲೆನಾಡು ವಾಯ್ಸ್‌ ಪತ್ರಿಕೆಯ ನಗರ ರಾಘವೇಂದ್ರ ವಹಿಸಿದ್ದರು.

About The Author