Headlines

ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದವರಿಂದ ಹಲ್ಲೆ: ಪ್ರಕರಣ ದಾಖಲು

ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದ ಸದಸ್ಯರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟು ದಿನಕಳೆದಂತೆ ಹೆಚ್ಚಾಗುತ್ತಿದೆ. ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಭಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ವಿವಾದಗಳು ಒಂದಾದ ಮೇಲೊಂದರಂತೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿವೆ. ಇದರ ಬೆನ್ನಲ್ಲೆ ಹಲಾಲ್ ಮಾಂಸ ಮಾರಾಟಗಾರನ ಮೇಲೆ ಹಲ್ಲೆ ಮಾಡಿರುವುದು ಹಿಂಸಾಚಾರವನ್ನು ಭುಗಿಲೇಳಲಿದೆ. ಇದಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಹೀಗಾಗಿ ರಾಜ್ಯದಲ್ಲಿ ಧಾರ್ಮಿಕ…

Read More

ಎಸಿಬಿ ಬಲೆಗೆ ಬಿದ್ದ ಪಿಡಿಒ ವಿರುದ್ದ ದೂರು ಕೊಟ್ಟ ವ್ಯಕ್ತಿಗೆ ಬೆದರಿಕೆ ಹಾಕಿದ ಗ್ರಾಪಂ ಸದಸ್ಯ

ಹೊಸನಗರ  ತಾಲೂಕಿನ ಕೋಡೂರಿನ ಕುಸಗುಂಡಿಯ ಸಿದ್ದಗಿರಿ ನಿವಾಸಿ ಸತೀಶ್ ರವರ ಬಳಿ ಎಂ ಗುಡ್ಡೆಕೊಪ್ಪದ ಪಿಡಿಒ ಮುರುಗೇಶ್ 30 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ‌ಬಿದ್ದಿದರು. ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮುಟೇಷನ್ ಮತ್ತು‌ 9  ಮತ್ತು 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್ ಕೆಲಸಕ್ಕೆ ಪಿಡಿಒ ಮುರುಗೇಶ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಈ ಸಂಬಂಧ ಎಸಿಬಿ ಮೊರೆ…

Read More

ಪರೀಕ್ಷಾ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ :

ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪದವಿಯ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪರೀಕ್ಷ ಶುಲ್ಕ ಕಟ್ಟಲು ಸೂಚಿಸಿರುವ ಹಿನ್ನೆಲೆಯಲ್ಲಿ ಪರೀಕ್ಷ ವಿಭಾಗದ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಪ್ರತಿಭಟನೆಗೆ ಇಳಿದಿದ್ದಾರೆ. ಪರೀಕ್ಷಾ ಶುಲ್ಕವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಹಿಂದಿನ ಸೆಮಿಸ್ಟರ್ ನಲ್ಲಿ ಸಂಪೂರ್ಣ ಪರೀಕ್ಷಾ ಶುಲ್ಕ ಪಾವತಿಸಿದ್ದು ಕೋವಿಡ್  ಕಾರಣ ಪರೀಕ್ಷೆ ನಡೆದಿರುವುದಿಲ್ಲ, ಕೇವಲ ಅಂಕ ಪಟ್ಟಿಯನ್ನು ಮಾತ್ರ ನಿಂತಿರುತ್ತಾರೆ ಈ ಕಾರಣದಿಂದ ಈ ಬಾರಿ ಪರೀಕ್ಷಾ ಶುಲ್ಕದ ಬಾಕಿಯನ್ನು ಕಳೆದ ಬಾರಿ ಕಟ್ಟಿರುವ ಶುಲ್ಕಕ್ಕೆ ಜಮಾ ಮಾಡಿಕೊಂಡು ವಿದ್ಯಾರ್ಥಿಗಳ…

Read More

ಜನಮನ್ನಣೆ ಗಳಿಸಿರುವ ತೀರ್ಥಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸುಧಾಕರ್ ರವರಿಗೆ ಎರಡನೆ ಬಾರಿ ಒಲಿದ ಮುಖ್ಯಮಂತ್ರಿ ಪದಕ

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್  ಸೇವೆ ಸಲ್ಲಿಸುತ್ತಿರುವ ಸುಧಾಕರ್ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಮುಖ್ಯಮಂತ್ರಿಗಳ ಪದಕದ ಗೌರವ ಲಭಿಸಿದೆ .ಈ ಪದಕ ಅವರಿಗೆ ಎರಡನೇ ಬಾರಿ ಲಭಿಸುತ್ತಿರುವುದು  ಹೆಮ್ಮೆಯ ವಿಚಾರವಾಗಿದೆ . ಸುಧಾಕರ್ ರವರು ತೀರ್ಥಹಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಅನೇಕ ಪ್ರಕರಣಗಳಲ್ಲಿ ಕ್ರಿಮಿನಲ್  ಆರೋಪಿಗಳನ್ನು ಪತ್ತೆ ಹಚ್ಚಲು  ಹೆಚ್ಚಿನ ಶ್ರಮವಹಿಸಿದವರಾಗಿದ್ದಾರೆ .ತೀರ್ಥಹಳ್ಳಿಯ  ವ್ಯಾಪ್ತಿಯ ಹತ್ತಾರು ಗಂಭೀರವಾದ ಕ್ರೈಮ್  ಪ್ರಕರಣಗಳಲ್ಲಿ ಕ್ಷಣಮಾತ್ರದಲ್ಲಿ ವಿಷಯವನ್ನು ಸಂಗ್ರಹಿಸಿ ತನಿಖೆಗೆ ಸಹಕರಿಸುವ ವಂತಾಗಲು ,ಆರೋಪಿಗಳನ್ನು…

Read More

ಸಾಮಾನ್ಯ ಸಭೆಯಲ್ಲಿ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು

ಸಾಗರ : ಸಾಗರದ ನಗರಸಭೆಯಲ್ಲಿ ಬುಧವಾರ 2022-23 ನೇ ಸಾಲಿನ ಆಯವ್ಯಯ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಸಭೆಗೆ ಬಂದ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಸಭೆ ಆರಂಭವಾಗುತ್ತಿದ್ದಂತೆ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಪ್ರತಿಭಟಿಸಿದರು. ಇತ್ತೀಚೆಗೆ ಸಾಗರದ ಪ್ರತಿಷ್ಟಿತ ಎಲ್ ಬಿ ಕಾಲೇಜಿನ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹಾಲಪ್ಪ ಅವರ ಎದುರಲ್ಲೇ ಹಲ್ಲೆ ನಡೆದಿತ್ತು. ಈ ಘಟನೆಯನ್ನು ಈ ರೀತಿಯಾಗಿ ಖಂಡಿಸಲಾಯಿತು. ಆಡಳಿತ ಪಕ್ಷದವರಿಂದ ನಮಗೆ…

Read More

ರಸ್ತೆ ಕಾಮಗಾರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ : ದರ್ಪ ತೋರಿದ ಗುತ್ತಿಗೆದಾರನ ಬೆವರಿಳಿಸಿದ ಗ್ರಾಮಸ್ಥರು

ರಿಪ್ಪನ್‌ಪೇಟೆ: ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲಿ, ಆನೆಗದ್ದೆ ಸಂಪರ್ಕ ರಸ್ತೆಯ 125ಮೀ. ಉದ್ದದ ಕಾಂಕ್ರೀಟ್ ರಸ್ತೆ ಮತ್ತು ಡಾಂಬರೀಕರಣ ರಸ್ತೆಯ ಕಾಮಗಾರಿಗೆ ಸರ್ಕಾರ ಮಂಜುರಾತಿ ಆದೇಶ ನೀಡಿದ್ದು ಆದರೆ ಕಾಮಗಾರಿಯ ಗುತ್ತಿಗೆದಾರರು ಮೂಡ್ಲಿ ರಸ್ತೆಯನ್ನು ಮಾಡದೆ ಬೇರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಕಾಮಗಾರಿ ತಡೆದು ಇಂದು ಮೂಡ್ಲಿ ಗ್ರಾಮದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇಂದು ಮೂಡ್ಲಿ ಗ್ರಾಮಕ್ಕೆ ಮಂಜೂರಾದ ರಸ್ತೆಯನ್ನು ಬೇರೆಡೆ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೆಲಸ ನಿಲ್ಲಿಸುವಂತೆ ಹೇಳಿದಾಗ ಗುತ್ತಿಗೆದಾರನು…

Read More

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ :

ಹೊಸನಗರ ತಾಲೂಕಿನ ಎಂ.ಗುಡ್ಡೇಕೊಪ್ಪದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹೆಚ್ಚುವರಿ ಪ್ರಭಾರ ಪಿಡಿಒ ಮುರುಗೇಶ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಇಂದು ಬೆಳಿಗ್ಗೆ ತಾಲೂಕಿನ ಕೋಡೂರಿನ ಕುಸಗುಂಡಿಯ ಸಿದ್ದಗಿರಿ ನಿವಾಸಿ ಸತೀಶ್ ರವರ ಬಳಿ ಪಿಡಿಒ ಮುರುಗೇಶ್ 30 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ‌ಬಿದ್ದಿದ್ದಾನೆ. ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮುಟೇಷನ್ ಮತ್ತು‌ 9  ಮತ್ತು 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್…

Read More

2023 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡ್ತಾರಾ ಕಿಮ್ಮನೆ ರತ್ನಾಕರ್ !?

ತೀರ್ಥಹಳ್ಳಿ : ವಿಧಾನಸಭಾ ಚುನಾವಣೆ 2023 ರಲ್ಲಿ ನೆಡೆಯಲಿದ್ದು ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಪಕ್ಷ ಸ್ಪರ್ಧೆ ಮಾಡಲಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದು ಅದರಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಸ್ಪರ್ಧೆ ಮಾಡಲಿದ್ದಾರ ಎಂಬ ಪ್ರೆಶ್ನೆ ಮೂಡಿದೆ..!?  ಕಾರಣ ತೀರ್ಥಹಳ್ಳಿಯ ಕಾಂಗ್ರೆಸ್ ಪಕ್ಷದಲ್ಲಿ ಈಗ ಆರ್ ಎಂ ಮಂಜುನಾಥ ಗೌಡರು ಸಹ ಇದ್ದು ಕಿಮ್ಮನೆ…

Read More

ರಿಪ್ಪನ್ ಪೇಟೆ ಮೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಗೋವುಗಳ ಬಲಿ : ನರ ಬಲಿಯಾಗುವವರೆಗೂ ಕಾಯುತ್ತಿದೆಯೋ ಮೆಸ್ಕಾಂ ಇಲಾಖೆ

ರಿಪ್ಪನ್ ಪೇಟೆ : ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕೆದಲುಗುಡ್ಡೆ ಗ್ರಾಮದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು ಮೆಸ್ಕಾಂ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಆರೋಪಿಸಿದ್ದಾರೆ  ಕೆದಲು ಗುಡ್ಡೆಯ ಗಣೇಶ್ ಎಂಬುವವರಿಗೆ ಸೇರಿದ ಹಸುವೊಂದು ಮೊನ್ನೆ ಕೆದಲು ಗುಡ್ಡೆ ಗ್ರಾಮದಲ್ಲಿ ಅಳವಡಿಸಿರುವ ಟ್ರಾನ್ಸ್ ಫರ್ಮ್ ಶಾರ್ಟ್ ಸರ್ಕ್ಯೂಟ್ ಆಗಿ ಅರ್ಥಿಂಗ್ ಆಗಿರುವುದರಿಂದ ಮೃತಪಟ್ಟಿದೆ.ಈ ಬಗ್ಗೆ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ರೈತರು ಕಷ್ಟಪಟ್ಟು ಸಾಕಿ…

Read More

ಶಿವಮೊಗ್ಗದ ಮಾರಿ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಬೇಡ ಎಂದ ಬಿಜೆಪಿ ಯವರು ನಗರದ ಸಿಟಿ ಮಾಲ್​ನಲ್ಲಿ ಮುಸ್ಲಿಂ ಉದ್ಯಮಿಯ ಫನ್​-ಗೇಮ್​ ಉದ್ಘಾಟಿಸುತ್ತಾರೆ : ಯಮುನಾ ರಂಗೇಗೌಡ

ಶಿವಮೊಗ್ಗ : ನಾಗರಿಕರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲದಿದ್ದರೂ ನಾಗರಿಕರ ಹಿತಕಾಯುವಲ್ಲಿ ವಿಫಲರಾದರೂ ನಕಲಿ ಹಿಂದುತ್ವದ ಘೋಷಣೆ ಕೂಗುತ್ತಾ ಬಡ ಮುಸ್ಲಿಂ ವ್ಯಾಪಾರಿಗಳನ್ನು ದ್ವೇಷ ಮಾಡಿ, ಅವರ ದಿನನಿತ್ಯದ ಕೂಲಿಯನ್ನು ಕಿತ್ತುಕೊಂಡು ಕಾರ್ಪೊರೇಟ್ ಬಂಡವಾಳಶಾಹಿ ಮುಸ್ಲಿಮರೊಂದಿಗೆ ಕೈಜೋಡಿಸುತ್ತಿರುವ ನಕಲಿ ಹಿಂದುತ್ವವಾದಿಗಳು ಈ ಬಿಜೆಪಿ ಯವರು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿಯಾದ ಯಮುನಾ ರಂಗೇಗೌಡ ವಾಗ್ದಾಳಿ ನಡೆಸಿದ್ದಾರೆ. ಕಳೆದವಾರ ನಡೆದ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಮುಸ್ಲಿಮರಿಗೆ ವ್ಯಾಪಾರ ಕೊಡಬಾರದೆಂದು ರೋಷಾವೇಷ ತೋರಿದ್ದ…

Read More