ಜಿಲ್ಲಾ ಸುದ್ದಿ:
ಕೆಂಚನಾಲ ಗ್ರಾಮದಲ್ಲಿ ಮತಾಂತರಗೊಳ್ಳುವಂತೆ ಮಹಿಳೆಗೆ ಜೀವ ಬೆದರಿಕೆ : ದೂರು ದಾಖಲು
ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಂಚನಾಳ ಗ್ರಾಮದಲ್ಲಿ ಸರ್ವೆ ನಂಬರ್ 38/1 ರಲ್ಲಿ ಜಯಲಕ್ಷ್ಮೀ ಎಂಬುವರು ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುವ ವೇಳೆ ಸಂಬಂಧಿಕರಾದ ಮಂಜಪ್ಪ ಮತ್ತು ಸಂಗೀತ ಎಂಬುವರು ಏಕಾಏಕಿ ತೋಟಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಮಹಿಳೆಯನ್ನ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ನಿನಗೆ ಯಾರೂ ಇಲ್ಲ ನಿನಗೆ ಜಮೀನು ಏನಕ್ಕಾಗಿ…..
ರೈತನ ಹೊಟ್ಟೆಗೆ ತಿವಿದ ಕಾಡುಕೋಣ..!!! ಚಿಂತಾಜನಕ ಸ್ಥಿತಿಯಲ್ಲಿರುವ ರೈತ ಮಣಿಪಾಲ್ ಆಸ್ಪತ್ರೆಗೆ ದಾಖಲು
ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಅರಣ್ಯ ವಲಯದ ಆಗುಂಬೆ ಗ್ರಾಮ ಪಂಚಾಯಿತಿಯ ಹೊಸೂರು ಬಳಿಯ ಅಸಿಮನೆಯಲ್ಲಿ ಕಾಡುಕೋಣವೊಂದು ರೈತರೊಬ್ಬರಿಗೆ ತಿವಿದ ಘಟನೆ ಸೋಮವಾರ ಸಂಜೆ ನಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಅಸಿಮನೆ ರಾಘವೇಂದ್ರ ಭಟ್ ಎಂಬುವರ ತೋಟಕ್ಕೆ ಬಂದಿದ್ದ ಕಾಡು ಕೋಣಗಳನ್ನು ರಾಘವೇಂದ್ರ ಭಟ್ ಮತ್ತು ಅವರ ಪತ್ನಿ ತೋಟದಿಂದ ಬೆರೆಸಲು ಹೋಗಿದ್ದಾಗ ಏಕಾಏಕಿ ಹೊಟ್ಟೆಗೆ ಇರಿದಿದೆ. ಗಂಭೀರ ಗಾಯಗೊಂಡ ರಾಘವೇಂದ್ರ ಭಟ್ ಅವರನ್ನು ಆಗುಂಬೆ ಭಾಗದ ಪ್ರಮುಖ ನಾಯಕ ಹಸಿರುಮನೆ ನಂದನ್ ಮತ್ತು ಸ್ನೇಹಿತರು ತಮ್ಮ…
ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ರಿಪ್ಪನ್‌ಪೇಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಪ್ರಜ್ವಲ್ ಎನ್ ಎಮ್ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 23ನೇ ಯುವ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟೀಯ ಮಟ್ಟದ ವಾಲಿಬಾಲ್ (21ವರ್ಷದೊಳಗಿನ ವಯೋಮಿತಿ) ಪಂದ್ಯವು ಇದೇ ತಿಂಗಳ 11 ರಿಂದ 16 ರವರೆಗೆ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿದೆ. ರಿಪ್ಪನ್ ಪೇಟೆಯ ವಿದ್ಯಾ ನಗರ ನಿವಾಸಿಗಳಾದ ಶಿಕ್ಷಕರಾದ ಮಹೇಶ್ವರ ಆಚಾರಿ ಹಾಗೂ ಮೀನಾಕ್ಷಿ ದಂಪತಿಗಳ…
ಬಿದರಹಳ್ಳಿ ಕುಮಧ್ವತಿ ನದಿಯಲ್ಲಿ ಮೀನುಗಳ ಮಾರಣಹೋಮ : ನದಿಯ ಒಡಲಿಗೆ ವಿಷ ಬೆರೆಸಿದ ಪಾಪಿಗಳು
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿ ಮೀನು ಸೇರಿದಂತೆ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿರುವ ಘಟನೆ ನಡೆದಿದೆ. ಹೌದು ಬಿದರಹಳ್ಳಿ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ನದಿಯ ನೀರಿಗೆ ಮೈಲುತುತ್ತ ವಿಷ ಬೆರೆಸಿ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿದ್ದಾರೆ.ಕುಮದ್ವತಿ ನದಿಯಲ್ಲಿ ಬೇಸಿಗೆ ಕಾರಣದಿಂದ ನೀರು ಇಂಗಿ ಹೋಗಿದ್ದು ಅಲ್ಲಲ್ಲಿ ಕೆಲ ಹೊಂಡದಲ್ಲಿ ಪ್ರಾಣಿ ಪ್ರಭೇದಗಳು ಜೀವಿಸುತ್ತವೆ.ಇದನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ವಿಷಯುಕ್ತ “ಮೈಲುತುತ್ತ” ವನ್ನು ಆ ನೀರಿಗೆ ಬೆರೆಸಿ ಲಕ್ಷಾಂತರ…
ಹಲಾಲ್ – ಜಟ್ಕಾ ಹೆಸರಿನಲ್ಲಿ ಸಮಾಜ ಒಡೆಯುವ ಕುತಂತ್ರ ನಡೆಯುತ್ತಿದೆ : ಸಚಿವ ಕೆ ಎಸ್ ಈಶ್ವರಪ್ಪ
ಹಲಾಲ್ ಅಥವಾ ಜಟ್ಕಾ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಭಾನುವಾರ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ಎಂಆರ್‌ಎಫ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಹಲಾಲ್ ಹಾಗೂ ಜಟ್ಕಾ ವಿವಾದ ಸೃಷ್ಟಿಸಿರುವುದು ಕೆಲವು ವ್ಯಕ್ತಿಗಳು ಹಾಗೂ ಪಕ್ಷಗಳು. ಯಾರು ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೋ ಅದನ್ನೇ ಮುಂದುವಸಿಕೊಂಡು ಹೋಗಲಿ’ ಎಂದು ಹೇಳಿದರು. ‘ಹಲಾಲ್ ಹಾಗೂ ಜಟ್ಕಾ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ತೊಡೆ ತಟ್ಟಿ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗೋಣ’…
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಹಿನ್ನಲೆ ವೈಯಕ್ತಿಕ ದ್ವೇಷ, ಹಳೆಯ ಗಲಾಟೆ ವಿಚಾರ ಅಲ್ಲ : NIA ದಾಖಲು ಮಾಡಿರುವ ಪ್ರಥಮ ವರದಿಯಲ್ಲಿ ಅಘಾತಕಾರಿ ಅಂಶ!!!!
ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು. ತನ್ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗಪಡಿಸಿದೆ. NIA ದಾಖಲು ಮಾಡಿರುವ ಎಫ್‌ಐಆರ್‌ನಲ್ಲಿ ಏನೇನು ಉಲ್ಲೇಖವಾಗಿದೆ ಎಂಬುದರ ವಿವರ ಟಿವಿ9 ಗೆ ಲಭ್ಯವಾಗಿದೆ. ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಮಾಜಯದಲ್ಲಿ ಭಯ ಹುಟ್ಟಿಸುವ…
ಕಾಗೋಡು ಪುತ್ರಿ ರಾಜನಂದಿನಿ ಸಿಡಿಸಿದ ಹೊಸ ಬಾಂಬ್ : ಜಿಕೆಬಿ ಗೆ ಟಿಕೆಟ್ ತಪ್ಪಿಸಲು ಉರುಳಿಸಿದ ಹೊಸ ಅಸ್ತ್ರವೇ ????
ಕರ್ನಾಟಕ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ ಪ್ರಬಲ ಆಕಾಂಕ್ಷಿಗಳು ಕೂಡ ತಮಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಜನ ಇದ್ದಾರೆ. ಸಾಗರದಿಂದಲೂ ಹಲವಾರು ಆಕಾಂಕ್ಷಿಗಳು ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಳ್ಳಲು ಜೋರು ತಯಾರಿ ಕೂಡಾ ನಡೆಸುತ್ತಿದ್ದಾರೆ. ಆದರೆ ಇವತ್ತು ಸಾಗರದಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾಗೋಡು ತಿಮ್ಮಪ್ಪನವರು ಸ್ಪರ್ಧಿಸಲಿದ್ದಾರೆ ಅವರಿಗೆ ಟಿಕೆಟ್ ಸಿಗಲಿದೆ ಹಾಗೂ ಅವರು ಇನ್ನೂ ಜನಸೇವೆ ಮಾಡುವ…
ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದವರಿಂದ ಹಲ್ಲೆ: ಪ್ರಕರಣ ದಾಖಲು
ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದ ಸದಸ್ಯರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟು ದಿನಕಳೆದಂತೆ ಹೆಚ್ಚಾಗುತ್ತಿದೆ. ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಭಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ವಿವಾದಗಳು ಒಂದಾದ ಮೇಲೊಂದರಂತೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿವೆ. ಇದರ ಬೆನ್ನಲ್ಲೆ ಹಲಾಲ್ ಮಾಂಸ ಮಾರಾಟಗಾರನ ಮೇಲೆ ಹಲ್ಲೆ ಮಾಡಿರುವುದು ಹಿಂಸಾಚಾರವನ್ನು ಭುಗಿಲೇಳಲಿದೆ. ಇದಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಹೀಗಾಗಿ ರಾಜ್ಯದಲ್ಲಿ ಧಾರ್ಮಿಕ…
ಎಸಿಬಿ ಬಲೆಗೆ ಬಿದ್ದ ಪಿಡಿಒ ವಿರುದ್ದ ದೂರು ಕೊಟ್ಟ ವ್ಯಕ್ತಿಗೆ ಬೆದರಿಕೆ ಹಾಕಿದ ಗ್ರಾಪಂ ಸದಸ್ಯ
ಹೊಸನಗರ ತಾಲೂಕಿನ ಕೋಡೂರಿನ ಕುಸಗುಂಡಿಯ ಸಿದ್ದಗಿರಿ ನಿವಾಸಿ ಸತೀಶ್ ರವರ ಬಳಿ ಎಂ ಗುಡ್ಡೆಕೊಪ್ಪದ ಪಿಡಿಒ ಮುರುಗೇಶ್ 30 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆಬಿದ್ದಿದರು. ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮುಟೇಷನ್ ಮತ್ತು 9 ಮತ್ತು 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್ ಕೆಲಸಕ್ಕೆ ಪಿಡಿಒ ಮುರುಗೇಶ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಈ ಸಂಬಂಧ ಎಸಿಬಿ ಮೊರೆ…
ಪರೀಕ್ಷಾ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ :
ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪದವಿಯ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪರೀಕ್ಷ ಶುಲ್ಕ ಕಟ್ಟಲು ಸೂಚಿಸಿರುವ ಹಿನ್ನೆಲೆಯಲ್ಲಿ ಪರೀಕ್ಷ ವಿಭಾಗದ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಪ್ರತಿಭಟನೆಗೆ ಇಳಿದಿದ್ದಾರೆ. ಪರೀಕ್ಷಾ ಶುಲ್ಕವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಹಿಂದಿನ ಸೆಮಿಸ್ಟರ್ ನಲ್ಲಿ ಸಂಪೂರ್ಣ ಪರೀಕ್ಷಾ ಶುಲ್ಕ ಪಾವತಿಸಿದ್ದು ಕೋವಿಡ್ ಕಾರಣ ಪರೀಕ್ಷೆ ನಡೆದಿರುವುದಿಲ್ಲ, ಕೇವಲ ಅಂಕ ಪಟ್ಟಿಯನ್ನು ಮಾತ್ರ ನಿಂತಿರುತ್ತಾರೆ ಈ ಕಾರಣದಿಂದ ಈ ಬಾರಿ ಪರೀಕ್ಷಾ ಶುಲ್ಕದ ಬಾಕಿಯನ್ನು ಕಳೆದ ಬಾರಿ ಕಟ್ಟಿರುವ ಶುಲ್ಕಕ್ಕೆ ಜಮಾ ಮಾಡಿಕೊಂಡು ವಿದ್ಯಾರ್ಥಿಗಳ…