ಜಿಲ್ಲಾ ಸುದ್ದಿ:
ಜುಲೈ 4 ರ ಸೋಮವಾರ ಕಾಂಗ್ರೆಸ್ ಪಕ್ಷದ ವತಿಯಿಂದ ರಿಪ್ಪನ್‌ಪೇಟೆಯಲ್ಲಿ ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ :
ರಿಪ್ಪನ್ ಪೇಟೆ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರವರ ನೇತೃತ್ವದಲ್ಲಿ ಜುಲೈ 4 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗವಟೂರು ಗ್ರಾಮದಲ್ಲಿ ಸಮುದಾಯ ಆಸ್ಪತ್ರೆಗೆ ಕಾಯ್ದಿರಿಸಿರುವ ಸ್ಥಳದಿಂದ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಹೇಳಿದರು. ಪಟ್ಟಣದಲ್ಲಿ ಇಂದು ಪೂರ್ವಭಾವಿ…
ಪಂಪ್ ಹೌಸ್ ನಲ್ಲಿ ಪ್ರತ್ಯಕ್ಷವಾದ 13 ಅಡಿ ಉದ್ದದ ಕಿಂಗ್ ಕೋಬ್ರಾ :
ಸುಮಾರು 13 ಅಡಿ ಉದ್ದದ ಅಂದಾಜು 12 ವರ್ಷದ ಕಿಂಗ್ ಕೋಬ್ರಾ ಹಾವು ಪಂಪ್ ಹೌಸ್ ನಲ್ಲಿ ಕಾಣಿಸಿಕೊಂಡಿದ್ದು ಕೆಲಕಾಲ ಆತಂಕ ಉಂಟು ಮಾಡಿತ್ತು. ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕಿಮ್ಮನೆ ಗಾಲ್ಫ್ ಕ್ಲಬ್ ನಲ್ಲಿ 13 ಅಡಿ ಕಿಂಗ್ ಕೋಬ್ರಾವೊಂದು ಕಾಣಿಸಿಕೊಂಡಿದೆ. ಗಾಲ್ಫ್ ಕ್ಲಬ್ ನ ಪಂಪ್ ಹೌಸ್ ನಲ್ಲಿ ಈ ಕಿಂಗ್ ಕೋಬ್ರಾ ಕಾಣಿಸಿಕೊಂಡಿತ್ತು.ತಕ್ಷಣವೇ ಸ್ನೇಕ್ ಕಿರಣ್ ರವರಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳ ಅನುಮತಿ ಮೇರೆಗೆ ಸ್ನೇಕ್ ಕಿರಣ್ ಸೆರೆ ಹಿಡಿದು ಶೆಟ್ಟಿಹಳ್ಳಿ…
ಮನುಕುಲದ ವಿರೋಧಿ ಮತಾಂಧರನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು : ಹರತಾಳು ಹಾಲಪ್ಪ
ಸಾಗರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಸಾಗರ ನಗರ ಬಿಜೆಪಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಇಂತಹ ಅಮಾನವೀಯ ಘಟನೆ ಮಾನವ ಕುಲ ಒಪ್ಪುವಂತಹದಲ್ಲ,ಎಲ್ಲೇ ಆಗಲಿ ಇಂತಹ ವಾತವರಣ ನಿರ್ಮಾಣವಾದಲ್ಲಿ ಜಾತಿ,ಮತ,ಪಕ್ಷ ಭೇದ ಮರೆತು ಅಂತಹ ಮತಾಂಧರನ್ನು ಹೆಕ್ಕಿ ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು.ಸಮಾಜದಲ್ಲಿ ಇಂತಹ ಮನುಕುಲದ ವಿರೋಧಿಗಳನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡುವುದರ ಮೂಲಕ ಅವರ ನೆಲೆಯನ್ನು ಧ್ವಂಸಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹೇಡಿಗಳ…
ಯುವ ಕಾಂಗ್ರೆಸ್ ವತಿಯಿಂದ ರಾಜಭವನ ಮುತ್ತಿಗೆ ಯತ್ನ : ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ -ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ಬಂಧನ
ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ರಾಜಭವನ್ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸನಗರ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ರವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು. ಬೆಂಗಳೂರು ಕೆಪಿಸಿಸಿ ಕಛೇರಿಯಿಂದ ರಾಜಭವನಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಲಪಾಡ್ ರವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ರಾಜಭವನ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಹಲವಾರು ನಾಯಕರನ್ನು…
ಅಮೃತ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಮಂಜುಳಾ ರಾಘವೇಂದ್ರ ಆಚಾರ್ ಅವಿರೋಧವಾಗಿ ಆಯ್ಕೆ
ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಮಂಜುಳಾ ರಾಜು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಮಂಜುಳಾ ರಾಘವೇಂದ್ರ ಆಚಾರ್ ಆಯ್ಕೆಯಾಗಿದ್ದಾರೆ. 11 ಜನ ಸದಸ್ಯರಿರುವ ಗ್ರಾಮ ಪಂಚಾಯತಿ 2 ಕಾಂಗ್ರೆಸ್ ಸದಸ್ಯರಿದ್ದು 9 ಸ್ಥಾನ ಬಿಜೆಪಿ ಪಾಲಾಗಿತ್ತು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರರವರ ನೇತೃತ್ವದಲ್ಲಿ ಇಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಂಜುಳಾ ರಾಘವೇಂದ್ರ ಆಚಾರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ರಿಪ್ಪನ್‌ಪೇಟೆ- ಹುಂಚಾ ಬಿಜೆಪಿ ಮಹಾಶಕ್ತಿ…
ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ :
ತೀರ್ಥಹಳ್ಳಿ : ತಾಲೂಕಿನಲ್ಲಿ ಲಂಚವಿಲ್ಲದೆ ಎಲ್ಲೂ ಕೂಡ ಕೆಲಸ ನೆಡೆಯುತ್ತಿಲ್ಲ. ಜ್ಞಾನೇಂದ್ರರವರ ಇಲಾಖೆಯ ಪಿಎಸ್ಐ ನೇಮಕಾತಿಯಲ್ಲೂ ಹಗರಣ ಮಾಡಿ ಮೋಸ ಮಾಡಿದರು ಎಂದು ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನೆಡೆಸಿದರು. ಪಟ್ಟಣದ ತಾಲೂಕು ಕಚೇರಿ ಎದುರು ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನೆಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ ಭಾರತೀಯ ಸೇನೆಯಲ್ಲಿ ನೇಮಕಾತಿ ಸಂಬಂಧ ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚಿಗೆ ಅನುಷ್ಠಾನಗೊಳಿಸಿರುವ ಅಗ್ನಿಪಥ್ ಯೋಜನೆ ಜನವಿರೋಧಿಯಾಗಿದ್ದು ದೇಶದ ಯುವಜನತೆಯ ನಿರುದ್ಯೋಗ ಸಮಸ್ಯೆಯನ್ನು…
ಸಾಗರದಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ಅಸ್ವಸ್ಥ : ಸ್ಥಳಕ್ಕೆ ದೌಡಾಯಿಸಿದ ಶಾಸಕ ಹರತಾಳು ಹಾಲಪ್ಪ
ಸಾಗರ : ಜ್ವರ, ಕೆಮ್ಮು, ನೆಗಡಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ 14 ಮಕ್ಕಳು ಅಸ್ವಸ್ಥಗೊಂಡ ಘಟನೆ ರವಿವಾರ ಸಂಜೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ಸಂಜೆ ವೇಳೆ ಆಸ್ಪತ್ರೆಯ ದಾದಿ ಆಂಟಿಬಯೋಟಿಕ್ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಕೊಟ್ಟ ತಕ್ಷಣ ಮಕ್ಕಳು ಚಳಿ ಚಳಿ ಎಂದು ನಡುಗುತ್ತ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ. ಕರ್ತವ್ಯದಲ್ಲಿದ್ದ ವೈದ್ಯರು ಅಸ್ವಸ್ಥಗೊಂಡ 14 ಮಕ್ಕಳಲ್ಲಿ 4 ಮಕ್ಕಳನ್ನು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನುಳಿದ ಮಕ್ಕಳಿಗೆ ಉಪವಿಭಾಗೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ…
ಯಾವುದೇ ಕಾರಣಕ್ಕೂ ಮುಸ್ಲಿಂ ಮತ ಕೇಳಲ್ಲ – ಕೆ ಎಸ್ ಈಶ್ವರಪ್ಪ
ಶಿವಮೊಗ್ಗ : ನಾನು ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಮುಸ್ಲೀಂ ಜನರ ಬಳಿ ಮತ ಕೇಳುವುದಿಲ್ಲವೆಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಮುಸ್ಲೀಂ ಮತಗಳ ಮೇಲೆ ಬಿಜೆಪಿ ಅವಲಂಬಿತವಾಗಿಲ್ಲ. ನಾನಂತು ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಮುಸ್ಲೀಂ ಜನರ ಮತವನ್ನ ಕೇಳೊಲ್ಲ. 60 ಬೂತ್ ಗಳಲ್ಲಿ ಮುಸ್ಲೀಂ ಮತಗಳು ಬಿದ್ದಿವೆ. ಆದರೆ ವಿರೋಧ ಪಕ್ಷಗಳು ಮುಸ್ಲೀಂ ಮತಗಳ ಮೇಲೆ ಕಣ್ಣಿಟ್ಟು ಅವರನ್ನ ಓಲೈಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ನ್ನ ಬೈದರೆ…
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ್ ಹುಂಚದಕಟ್ಟೆ ರವರ ಮನೆಗೆ ದಿಡೀರ್ ಭೇಟಿ ನೀಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್
ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್ ರವರು ಇಂದು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಆದರ್ಶ ಹುಂಚದಕಟ್ಟೆಯವರ ಮನೆಗೆ ಭೇಟಿ ನೀಡಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಯಲ್ಲಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ್ ಹುಂಚದಕಟ್ಟೆರವರ ಮನೆಗೆ ದಿಡೀರ್ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿದ್ದ ರಾಹುಲ್ ಗಾಂಧಿಯವರ ಮೇಲಿನ ಈಡಿ ವಿಚಾರಣೆ ಅಗ್ನಿಪಥ್ ಯೋಜನೆಗಳನ್ನು ವಿರೋಧಿಸಿ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಬಿ ವಿ ಶ್ರೀನಿವಾಸ್ ರವರ ದಿಡೀರ್ ಭೇಟಿ ಕುತೂಹಲ ಕೆರಳಿಸಿದೆ….
ಕಾಂಗ್ರೆಸ್ ಮುಖಂಡ ಅರಸಾಳಿನ ಪಿಯೂಸ್ ಡಿಸೋಜ ಇನ್ನಿಲ್ಲ …
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಮ ಪಂಚಾಯತಿ ಮಾಜಿ ಪ್ರಧಾನರು ಹಾಗೂ ಕಾಂಗ್ರೆಸ್ ಮುಖಂಡರಾದ ಪಿಯೂಸ್ ಡಿಸೋಜ ರವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಎರಡು ದಿನಗಳ ಹಿಂದೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ರಾತ್ರಿ 10.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅರಸಾಳು ಗ್ರಾಮ ಪಂಚಾಯತಿಯ ಮಾಜಿ ಪ್ರಧಾನರಾಗಿದ್ದ ಅವರು ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾಗಿದ್ದರು.ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಬಂಗಾರಪ್ಪ, ಕಾಗೋಡು ತಿಮ್ಮಪ್ಪ…