Headlines

ಅ.16ಕ್ಕೆ ತಳಲೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಹುಸೇವಾ ವಾಣಿಜ್ಯ ಸಂಕೀರ್ಣ ಉದ್ಘಾಟನೆ |Ripponpet

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ಜಿಲ್ಲೆಯಲ್ಲಿಯೇ ಪ್ರಥಮ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮು ಅಕ್ಟೋಬರ್ 16 ರ ಭಾನುವಾರ ಬೆಳಿಗ್ಗೆ 11 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ  ಹೆಚ್.ಎಸ್. ದಿನೇಶ್‌ಗೌಡ ಹೇಳಿದರು. ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 70 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲಾಗಿದೆ. ನಬಾರ್ಡ್ ಯೋಜನೆಯಂತೆ…

Read More

ಕೆಂಚನಾಲದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ : ಗ್ರಾಮಸ್ಥರ ಮಧ್ಯಸ್ಥಿಕೆ |Flex

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ನಂತರ ಗ್ರಾಮಸ್ಥರ ಮಧ್ಯಸ್ಥಿಕೆಯಿಂದಾಗಿ ತಿಳಿಗೊಂಡಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚನಾಲ ಗ್ರಾಮದ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.  ಟಿಪ್ಪು ಬ್ಯಾನರ್ ಕಟ್ಟಲು ಕೆಲ ಯುವಕರು ಮುಂದಾದಾಗ ಕೆಲ ಯುವಕರು ಆಕ್ಷೇಪಿಸಿದ್ದಾರೆ. ಕೆಂಚನಾಲ ವೃತ್ತದಲ್ಲಿ ಇದುವರೆಗೂ ಯಾವ ಬ್ಯಾನರ್ ಗಳನ್ನು ಹಬ್ಬದ ಸಂದರ್ಭದಲ್ಲಿಯೂ…

Read More

ಶಿವಮೊಗ್ಗ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ ಜಿ ಎಸ್ ವರದರಾಜ್ ನೇಮಕ |JDS

ರಿಪ್ಪನ್‌ಪೇಟೆ : ಪಟ್ಟಣದ ಜೆ.ಡಿ.ಎಸ್.ಪಕ್ಷದ ಹಿರಿಯ ಸದಸ್ಯ ಜಿ.ಎಸ್. ವರದರಾಜ್‌ರವರನ್ನು ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಎಂ. ಶ್ರೀಕಾಂತ್‌ರವರ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಜನತಾದಳ (ಜ್ಯಾತ್ಯಾತೀತ) ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎನ್. ರಾಮಕೃಷ್ಣರವರು ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಗಾಗಿ ಸಹಕರಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್, ಕಾರ್ಯಧ್ಯಕ್ಷ ಕೆ.ಎನ್ ರಾಮಕೃಷ್ಣರವರಿಗೆ ಜಿ.ಎಸ್. ವರದರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

Read More

ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯ ,ಜಾತಿ ಧರ್ಮದ ಕಟ್ಟುಪಾಡುಗಳು ಬೇಡ : ಹರತಾಳು ಹಾಲಪ್ಪ|Sagara

ಅಭಿವೃದ್ದಿಯಲ್ಲಿ ರಾಜಕೀಯ, ಜಾತಿಧರ್ಮದ ಕಟ್ಟುಪಾಡುಗಳು ಬೇಡ. ಅಗತ್ಯ ಇರುವ ಕಡೆಗಳಲ್ಲಿ ಜಾತಿಮತ ಪಂಥ ನೋಡದೆ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ MSIL ಅಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು. ತಾಲ್ಲೂಕಿನ ಕೆಳದಿಯಲ್ಲಿ ಬುಧವಾರ ಕಸಬಾ ಹೋಬಳಿ ವ್ಯಾಪ್ತಿಯ ಸುಮಾರು ೩ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಅಂಗನಾಡಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಾ, ಇದು ಅಭಿವೃದ್ದಿಯ ದಿನಗಳಾಗಿದ್ದು, ಇನ್ನು ಎಷ್ಟು ವರ್ಷ…

Read More

ಹೊಸನಗರದ ಸಂತ ಅಂತೋನಿ ದೇವಾಲಯದ ವಾರ್ಷಿಕೋತ್ಸವ – ಭಾವೈಕ್ಯತೆಗೆ ಹೊಸ ಇತಿಹಾಸ ಬರೆದ ಹೊಸನಗರ ಜನತೆ|Hosanagara

ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಕ್ರೈಸ್ತ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರ ನಾಮ ಭಜಿಸುತ್ತಾ ಧಾರ್ಮಿಕ  ಮೆರವಣಿಗೆ ನಡೆಸಿದರು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೊಸನಗರ ಪಟ್ಟಣದ ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ರೆವೆರೆಂಡ್ ಫಾದರ್ ಸೈಮನ್ ರವರೊಂದಿಗೆ ಜಿಲ್ಲೆಯ 30ಕ್ಕೂ ಹೆಚ್ಚು ಚರ್ಚ್ ಗಳ ಧರ್ಮ ಗುರುಗಳು ಪಾಲ್ಗೊಂಡಿದ್ದರು. ಇತ್ತೀಚೆಗೆ ಪಟ್ಟಣದ ಹಿಂದುಗಳು ಶ್ರೀ ಗಣೇಶೋತ್ಸವ,ನವರಾತ್ರಿ ಸಡಗರ ಉತ್ಸಾಹ ಸಂಭ್ರಮದಿಂದ ಆಚರಿಸಿದ್ದು ಅದರ ಬೆನ್ನಲ್ಲೇ ಮುಸ್ಲಿಂ ಬಾಂಧವರು ಈದ್…

Read More

ಅ.13 ರಂದು ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಮೇಳ – Job news

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಅ. 13 ರಂದು ರಂದು ಬೆಳಗ್ಗೆ 10.00ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ / ನೇರ ಸಂದರ್ಶನ ಆಯೋಜಿಸಿದೆ. ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೊಮೋ, ಯಾವುದೇ ಪದವಿಗಳಲ್ಲಿ ತೇರ್ಗಡೆ ಹೊಂದಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರ ಆಸಕ್ತರು ತಮ್ಮ ಬಯೋಡಾಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ…

Read More

ಹದಿನೈದು ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಮಾನವೀಯತೆ ಮೆರೆದ ಗುರುರಾಜ್ |Railwaystation

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಸುಮಾರು‌ 300 ಗ್ರಾಂ ಚಿನ್ನಾಭರಣವನ್ನು ಹಿಂತಿರುಗಿಸಿ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ತುಮಕೂರಿನ ವಕ್ಕೋಡಿ ಗ್ರಾಮದ ಗುರುರಾಜ್ ಎಂಬುವವರು ಕಳೆದು ಹೋದ ಬ್ಯಾಗ್​ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಶಿವಮೊಗ್ಗ ಮೂಲದ ಕುಟುಂಬವೊಂದು 300 ಗ್ರಾಂ ಚಿನ್ನ ಇದ್ದು ಬ್ಯಾಗ್​ ಕಳೆದುಕೊಂಡಿತ್ತು. ಪೊಲೀಸರ ಸಹಾಯದಿಂದ ಗುರುರಾಜ್​ ಅವರು ಬ್ಯಾಗನ್ನು ಮಾಲೀಕರು ಮರಳಿಸಿದ್ದಾರೆ. ತುಮಕೂರು ತಾಲೂಕಿನ ವಕ್ಕೋಡಿ ಗ್ರಾಮದ ಗುರುರಾಜ್ ನ್ಯಾಯಾಲಯದಲ್ಲಿ ಎಫ್​ಡಿಎ ಆಗಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ರೈಲ್ವೆ‌ ನಿಲ್ದಾಣದ ಲಿಫ್ಟ್​ನಲ್ಲಿ ಬ್ಯಾಗ್…

Read More

ಗವಟೂರು-ಮಾವಿನಸರ ಕಳಪೆ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ – ಅಧಿಕಾರಿಗಳಿಗೆ ತರಾಟೆ

ರಿಪ್ಪನ್‌ಪೇಟೆ : ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುದಾನದ ಗವಟೂರು- ಮಾವಿನಸರ ರಸ್ತೆ ಕಾಮಗಾರಿ ಕಳೆಪೆಯಾಗಿದೆ ಎಂಬ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಹಾಗೂ ಹಲವು ಮಾಧ್ಯಮಗಳಲ್ಲಿ ಆರೋಪ ಬಂದ ಹಿನ್ನಲೆಯಲ್ಲಿ ಶಾಸಕ ಹಾಗೂ MSIL ಅಧ್ಯಕ್ಷ  ಹರತಾಳು ಹಾಲಪ್ಪ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ,ನೂತನ ತಂತ್ರಜ್ಞಾನ ಅಳವಡಿಕೆಯಿಂದಾಗಿ ಕಾಮಗಾರಿಯಲ್ಲಿ ಲೋಪ ಕಂಡುಬಂದಿದೆ. ರಸ್ತೆ ಅಂಚಿನಲ್ಲಿ ನೀರು ಸರಾಗವಾಗಿ ಹೋಗಲು ಬಾಕ್ಸ್ ಚರಂಡಿಯಲ್ಲಿ ರಂದ್ರ…

Read More

ಶಾಂತಿಯ ಹಬ್ಬವಾದ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಬೇಸರ ವ್ಯಕ್ತಪಡಿಸಿದ ಟಿಪ್ ಟಾಪ್ ಬಶೀರ್ | ಗಾಂಜಾ ವ್ಯಸನಿಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಆಗ್ರಹ |Eidmilad

ಈದ್ ಮಿಲಾದ್ ಆಚರಣಿಯ ಮೆರವಣಿಗೆಯಲ್ಲಿ ಭಾನುವಾರ ಕೆಲವೆಡೆ ಮುಸ್ಲಿಂ ಯುವಕರು ಡಿಜೆ ಹಾಡುಗಳನ್ನು ಹಾಕಿಕೊಂಡು, ಕುಣಿದು ಕುಪ್ಪಳಿಸಿರುವುದರ ಬಗ್ಗೆ ಸಾಗರ ನಗರ ಸಭೆ ಸದಸ್ಯ ಬೇಸರ ವ್ಯಕ್ತಪಡಿಸಿ ಜಿಲ್ಲೆಯ ಜನತೆಯ ಕ್ಷಮೆ ಕೋರಿದ್ದಾರೆ. ಶಾಂತಿಯುತ ಈದ್ ಮೆರವಣಿಗೆಯ ನಿಜವಾದ ರೀತಿ, ರಿವಾಜುಗಳನ್ನು ಗಾಳಿಗೆ ತೂರಿದ್ದಾರೆ. ಎಂದಿಗೂ ಇಲ್ಲದ ಇಂತಹ ಕೆಟ್ಟ ಆಚರಣೆಗಳು ಈಗ ಯಾಕೆ ಹುಟ್ಟಕೊಂಡಿದ್ದಾವೋ ಗೊತ್ತಿಲ್ಲ, ಆದರೆ ಇದು ಶಾಂತಿಧೂತ ಮಹಮದ್ ಪೈಂಗಂಬ‌ ಅವರಿಗೆ ಮಾಡಿದ ಅವಮಾನವಾಗಿದ್ದು, ಇದು ನನ್ನ ಮನಸ್ಸಿಗೆ ತೀವ್ರ ನೋವು ತಂದಿದೆ….

Read More

ಹೊಸನಗರ ಮತ್ತು ಜಯನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ | Eid milad

ಹೊಸನಗರ ಪಟ್ಟಣ ಹಾಗೂ ಜಯನಗರದಲ್ಲಿ ಇಂದು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಮೆರವಣಿ ಗೆಯಲ್ಲಿ ಪಾಲ್ಗೊಂಡು ಪ್ರವಾದಿ ಮಹಮದ್ ರವರ ಜನ್ಮದಿನವನ್ನು ಶ್ರದ್ದಾಪೂರ್ವಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು ಸಂದೇಶ ನೀಡಿ ಪ್ರವಾದಿ ಅವರ ಆಲೋಚನೆಗಳು ಅತ್ಯಂತ ಪ್ರಸ್ತುತವಾಗಿದೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಗುರಿ ಸಂದೇಶಗಳು ಪೂರಕವಾಗಿದೆ ಮಾನವ ಜೀವನದ ಸಮಗ್ರ ಸುಧಾರಣೆ ಪ್ರವಾದಿ ಅವರ ಗುರಿಯಾಗಿತ್ತು.ಪ್ರವಾದಿಯವರ ಆಶೋತ್ತರಗಳು ಕೇವಲ ಇಸ್ಲಾಂ ಸಮುದಾಯಕ್ಕೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಪ್ರತಿಯೊಬ್ಬರಿಗೂ…

Read More