Headlines

ನಾಳೆ (20-11-2022) ರಿಪ್ಪನ್‌ಪೇಟೆಯಲ್ಲಿ ವಿಸ್ತಾರ ಕನ್ನಡ ಸಂಭ್ರಮ|vistara

ರಿಪ್ಪನ್‌ಪೇಟೆ : ನಾಡಿನ ಜನತೆಯ ನಿರೀಕ್ಷೆಯ “ವಿಸ್ತಾರ” ನ್ಯೂಸ್ ಚಾನೆಲ್ ನವೆಂಬರ್ 6 ರಂದು ಲೋಕಾರ್ಪಣೆಗೊಂಡಿದೆ. ಕನ್ನಡ ನಾಡು, ನುಡಿಗೆ ಸದಾ ಮಿಡಿಯುವ ಜೊತೆಗೆ “ನಿಖರ” “ಜನಪರ” ಧ್ಯೇಯದೊಂದಿಗೆ‌ ವಿಸ್ತಾರ ನ್ಯೂಸ್” ಕನ್ನಡಿಗರ ಮನೆ-ಮನ ತಲುಪಿದೆ. ವಿಸ್ತಾರ ಬಳಗವು ರಾಜ್ಯಾದ್ಯಂತ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮ ಆಯೋಜಿಸುತ್ತಿದೆ.

ಹೊಸನಗರ ತಾಲ್ಲೂಕಿನ ವಿಸ್ತಾರ ಕನ್ನಡ ಸಂಭ್ರಮ ನವೆಂಬರ್ 20ರ ಭಾನುವಾರ ಬೆಳಗ್ಗೆ 10:00 ಕ್ಕೆ ಅಶ್ರಿತಾ ಸಭಾಭವನ ಹೊಸನಗರ ರಸ್ತೆ ರಿಪ್ಪನ್‌ಪೇಟೆ ಇಲ್ಲಿ ನಡೆಯಲಿದೆ.

ಬೆಳಗ್ಗೆ 10:30 ಪ್ರಖ್ಯಾತ ಗಾಯಕರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಇರುತ್ತದೆ. 11:30 ರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ. ನರಸಿಂಹ, ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ. ಲಕ್ಷ್ಮಣಗೌಡ, ಹೊಸನಗರ ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್, ಜೆಡಿಎಸ್ ಅಧ್ಯಕ್ಷ ಎನ್. ವರ್ತೇಶ್, ಆಮ್ಆದ್ಮಿ ಅಧ್ಯಕ್ಷ ಗಣೇಶ್ ಸೂಗೋಡು, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ.ಕೆ. ರಾವ್ ಮತ್ತು ವಿಸ್ತಾರ ನ್ಯೂಸ್ ಬ್ಯುರೋ ಚೀಫ್ ವಿವೇಕ್ ಮಹಾಲೆ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನಿಗಳೆಲ್ಲರೂ ಪಾಲ್ಗೊಂಡು ವಿಸ್ತಾರ್ ನ್ಯೂಸ್ ಚಾನೆಲ್ ಗೆ ಶುಭ ಕೋರಬೇಕೆಂದು ಸಬಾಸ್ಟಿನ್ ರಿಪ್ಪನ್‌ಪೇಟೆ ಮೊ : 9448722553, ಪುರುಷೋತ್ತಮ್ ಶಾನುಬೋಗ್ ನಿಟ್ಟೂರು. ವರದಿಗಾರರು,ವಿಸ್ತಾರ ನ್ಯೂಸ್, ಮೊ: 9945749427 ಕೋರಿದ್ದಾರೆ.

Leave a Reply

Your email address will not be published. Required fields are marked *