Headlines

ರಿಪ್ಪನ್ ಪೇಟೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ಪ್ರಮೀಳಾ ಲಕ್ಷ್ಮಣಗೌಡ ಪದವಿ ಸ್ವೀಕಾರ

ರಿಪ್ಪನ್‌ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನ ಸಾಗಿಸುತ್ತಿರುವ ಇಂದಿನ ನಾಗರಿಕರಿಗೆ  ಮಾನಸಿಕ ನೆಮ್ಮದಿ ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಮಾನವ ಸಮಾಜ ಸೇವೆಯಲ್ಲಿ ಪಡೆದುಕೊಂಡಾಗ ಮಾತ್ರ ನೆಮ್ಮದಿಯನ್ನು ಕಾಣಬಹುದು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೊಟೇರಿಯನ್ ಎಚ್ ಎಲ್ ರವಿ ಹೇಳಿದರು. ಪಟ್ಟಣದ ಸಾಗರ ರಸ್ತೆಯಲ್ಲಿನ ವಿಶ್ವಮಾನವ ಸಮುದಾಯಭವನದಲ್ಲಿ ಅಯೋಜಿಸಲಾಗಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ  ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ಜಗತ್ತಿನಲ್ಲಿ…

Read Full News

ಬಡವರ ಕಣ್ಣೀರು ತಾಲೂಕ್ ಆಡಳಿತಕ್ಕೆ ಕಾಣಿಸುತ್ತಿಲ್ಲವೇ .???? : ಆರ್ ಎಂ ಮಂಜುನಾಥ್ ಗೌಡ

ತೀರ್ಥಹಳ್ಳಿ : ತಾಲೂಕಿನ ತಹಶೀಲ್ದಾರರು ಬಿಬಿಎಂಪಿ ಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದವರು ಈಗ ಹಳ್ಳಿಗೆ ಬಂದಿದ್ದಾರೆ, ಮಳೆಗಾಲದಲ್ಲಿ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಅರಿವು ಅವರಿಗೆ ಹೆಚ್ಚು ತಿಳಿದಂತೆ ಇಲ್ಲ.ಕೊನೆ ಪಕ್ಷ ಬೇರೆಯವರ ಬಳಿ ಕೇಳಿ ತಿಳಿದುಕೊಂಡು ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ತಾಲೂಕು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಬೆಟ್ಟಮಕ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ…

Read Full News

ರಾಜ್ಯ ಗೃಹ ಮಂತ್ರಿಗಳ ಕ್ಷೇತ್ರ ಕರಡಿಗ-ಬೆಳಕೋಡು ಗ್ರಾಮದಲ್ಲಿ ಹೊಳೆದಾಟುವ ಹರಸಾಹಸಾದಲ್ಲಿ ಶಾಲಾ-ಕಾಲೇಜು ಮಕ್ಕಳು,ಗ್ರಾಮಸ್ಥರು : ಸಾರ್ವಜನಿಕರ ಗೋಳು ಕೇಳುವವರು ಯಾರು…..!?

ರಿಪ್ಪನ್‌ಪೇಟೆ;- ರಾಜ್ಯದ ಗೃಹ ಮಂತ್ರಿಗಳು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಆರಗ ಜ್ಞಾನೇಂದ್ರ ರವರ ಕ್ಷೇತ್ರದ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು ಪ್ರತಿನಿತ್ಯ ನೂರಾರು ಜನ ಇಲ್ಲಿನ ಅಸುರಕ್ಷಿತ ಕಾಲಸಂಕ ಬಳಸಿ ತಮ್ಮ ದೈನಂದಿನ ಕಾರ್ಯಚಟುವಟಿಕೆಗಾಗಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಪ್ರತಿವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿಬಳಸಿ ದೂರದ ಪ್ರಯಾಣದಿಂದ ಜನರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಪೇಟೆ…

Read Full News

ರಿಪ್ಪನ್ ಪೇಟೆಯಲ್ಲಿ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಕಾರ್ಯಗಾರ : ಆಧುನಿಕ ಸಮಾಜದಲ್ಲಿ ಎಲ್ಲಕ್ಕಿಂತಲೂ ಮಿಗಿಲಾದದ್ದು ಶಿಕ್ಷಣ : ಎಸ್ ಎಲ್ ಭೋಜೇಗೌಡ

ರಿಪ್ಪನ್ ಪೇಟೆ : ಆಧುನಿಕ ಸಮಾಜದಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಶಿಕ್ಷಣ ಮತ್ತು ಆರೋಗ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಹೇಳಿದರು. ಪಟ್ಟಣದ ಆಶ್ರೀತಾ ಸಭಾಭವನದಲ್ಲಿ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕಾರ್ಯಾಗಾಗಾರ  ಹಾಗೂ ನಿವೃತ್ತ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ  ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸರಕಾರಿ ಕಾಲೇಜುಗಳ ಹಾಗೂ ಶಾಲೆಗಳ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಇಡೀ ರಾಜ್ಯದಲ್ಲಿ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳು  ಮೂಲ ಸೌಕರ್ಯಗಳಿಲ್ಲದೆ…

Read Full News

ರಿಪ್ಪನ್‌ಪೇಟೆಯ ದ್ವಿಪಥ ರಸ್ತೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಪಟ್ಟಣದ ಜನರ ಹಲವು ವರ್ಷಗಳ ಬೇಡಿಕೆ ದ್ವಿಪಥ ರಸ್ತೆಗೆ  ರಾಜ್ಯ ಸರ್ಕಾರ ಸ್ಪಂದನೆ ನೀಡಿದ್ದು ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ  ಚಾಲನೆ ನೀಡಲಾಗುವುದು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ವಿನಾಯಕ ವೃತ್ತದಿಂದ ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ಹಾಗೂ ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶಬರೀಶನಗರದವರೆಗೂ ದ್ವಿಪಥ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸೆಪ್ಟೆಂಬರ್ ನಲ್ಲಿ…

Read Full News

ಬಸವಾಪುರ : ರಸ್ತೆ ಅಗೆದು ಕೆರೆಯ ಕೋಡಿ ನೀರನ್ನು ಹರಿಯಬಿಟ್ಟ ಪ್ರಭಾವಿ ವ್ಯಕ್ತಿಗಳು,ಜೆಸಿಬಿ ತಡೆದು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾವಪುರ ಗ್ರಾಮದ ಸರ್ವೆ ನಂ 26 ರ  ಹಳ್ಳದಕಟ್ಟೆ ಕೆರೆಯ ಕೋಡಿ ನೀರನ್ನು ಖಾಸಗಿ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡುವ ಉದ್ದೇಶದಿಂದ ಸರ್ಕಾರಿ ರಸ್ತೆಯ ಮೇಲೆ ಜೆಸಿಬಿ ಮೂಲಕ ಕಾಲುವೆ ತೋಡಿ ನೀರನ್ನು ಹರಿಯಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.  ಬಸಾವಪುರ ಗ್ರಾಮದ ಗುಂಡೂರು ಮೂಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ಕಾರಿ ರಸ್ತೆಯ ಮೇಲೆ ಖಾಸಗಿ ಪ್ರಭಾವಿ ವ್ಯಕ್ತಿಗಳು ಹಳ್ಳದಕಟ್ಟೆ ಕೆರೆಯ ಕೋಡಿ ನೀರನ್ನು ರಸ್ತೆಯ ಮೇಲೆ…

Read Full News

ಮಲಗಿದ್ದ ತಾಯಿ,ಮಗಳ ಮೇಲೆ ಗೋಡೆ ಕುಸಿತ : ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಮನೆಯಲ್ಲಿ‌ ಮಲಗಿದ್ದವರ ಮೇಲೆ ಏಕಾಏಕಿ ಗೋಡೆ ಕುಸಿದು ತಾಯಿ ಮತ್ತು ಮಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಾಲ್ಕನೇ ಕ್ರಾಸ್​​ನ ಯತಿರಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ ಉಮಾ ಹಾಗೂ ಮಗಳು ಕಾವ್ಯ ಎಂಬುವರ ಮೇಲೆ ಇಂದು ಬೆಳಿಗ್ಗೆ ಮನೆಯ ಗೋಡೆ‌ ಕುಸಿದಿದೆ. ಉಮಾ ಅವರ ಕಾಲು ಮುರಿದಿದ್ದು, ಕಾವ್ಯ ಅವರ ಬಲಗೈ ಮುರಿತವಾಗಿದೆ. ಗೋಡೆಯು ಯತಿರಾಜ್ ಅವರ ಕಡೆಯೂ ಬಿದ್ದಿದ್ದರಿಂದ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಗೊಂಡಿರುವ…

Read Full News

ಕಾಲೇಜುಗಳ ಕ್ಯಾಂಪಸ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವಂತೆ ಇರಬೇಕು : ಹರತಾಳು ಹಾಲಪ್ಪ

ಶೈಕ್ಷಣಿಕ ಕೆಂದ್ರಗಳನ್ನು ಸುಸಜ್ಜಿತವಾಗಿ,ಶುಚಿತ್ವವಾಗಿ, ಸುಂದರವಾಗಿ ರೂಪುಗೊಳಿಸಬೇಕು ಕಾರಣ ಪರಿಸರವು ಅಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳ ಮನಸ್ಸಿನ  ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಎಂಎಸ್‌ಐಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆ ಪಟ್ಟಣದಲ್ಲಿ 20 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರವೇಶ ರಸ್ತೆಯ ಕಾಮಗಾರಿಯ ಶಂಕುಸ್ಥಾಪನಾ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಮಾತನಾಡಿ ಕಾಲೇಜುಗಳ ಕ್ಯಾಂಪಸ್ ವಿದ್ಯಾರ್ಥಿ, ಸಾರ್ವಜನಿಕರ ಗಮನ ಸೆಳೆಯುವಂತಿರಬೇಕು ಅದಕ್ಕಾಗಿ ಕಾಲೇಜಿಗೆ ದ್ವಿಪಥ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯ ಸುಸಜ್ಜಿತ ರಸ್ತೆ…

Read Full News

ರಿಪ್ಪನ್ ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 17ಕ್ಕೆ

ರಿಪ್ಪನ್‌ಪೇಟೆ: ಪಟ್ಟಣದ ರೋಟರಿ ಕ್ಲಬ್‌ನ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 17ರ ಭಾನುವಾರ ವಿಶ್ವಮಾನವ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ತಿಳಿಸಿದರು. ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ನಮ್ಮ ಸಂಸ್ಥೆಯ ಸದಸ್ಯರು ಪ್ರಪ್ರಥಮವಾಗಿ ಮಹಿಳಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಿದ್ದಾರೆ, ಇದರ ಉದ್ದೇಶ ಮಹಿಳಾ ಸಬಲೀಕರಣವಾಗಿದ್ದು ಸೇವೆಯಲ್ಲಿ ಮಹಿಳೆಯರ ಹೆಚ್ಚು ಪಾಲ್ಗೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ. ಸಂಸ್ಥೆಯು ಇಮ್ಯಾಜಿನ್ ರೋಟರಿ ಎಂಬ ಕಲ್ಪನೆಯನ್ನು ಕೊಟ್ಟಿದ್ದು ಸಮಾನ ಶಿಕ್ಷಣ,…

Read Full News

ಆಗುಂಬೆ ಘಾಟಿಯಲ್ಲಿ ಮತ್ತೇ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಮರಗಳು: ಸಂಚಾರ ಸಂಪೂರ್ಣ ಅಸ್ತವ್ಯಸ್ತ

ಆಗುಂಬೆ : ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಆಗುಂಬೆ ಘಾಟಿಯಲ್ಲಿ ಮತ್ತೆ ಬೃಹತ್ ಗಾತ್ರದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದೂ, ಸಂಚಾರ ಅಸ್ತವ್ಯಸ್ತವಾಗಿದೆ. ಇತ್ತೀಚೆಗೆ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು ಹಾಗೂ ನೆನ್ನೆಯಿಂದ ಲಘ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮರ ಬಿದ್ದು ಗಂಟೆಗಳಾದರೂ ಇನ್ನೂ ತೆರವು ಕಾರ್ಯಾಚರಣೆ ಪ್ರಾರಂಭವಾಗಿಲ್ಲ,ಸುಮಾರು 4 ರಿಂದ 5 ಕಿಮೀ ರಸ್ತೆಯಲ್ಲಿ ಲಘು ವಾಹನಗಳಿದ್ದು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತಿದ್ದಾರೆ. ರೋಗಿಗಳನ್ನು…

Read Full News

ತುಂಗಾ ನದಿಗೆ ಬಾಗಿನ ಅರ್ಪಿಸಿದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ತೀರ್ಥಹಳ್ಳಿಯ ಪವಿತ್ರ ತುಂಗಾ ನದಿಯ ನೀರು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಗುರುವಾರ ಸಂಜೆ ರಾಜ್ಯ ಸರ್ಕಾರದ ಗೃಹಸಚಿವರು, ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ತುಂಗಾ ನದಿಗೆ  ಬಾಗಿನ ಅರ್ಪಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮಳೆ ಎಷ್ಟು ಬೇಕಾದರೂ ಬರಲಿ, ನದಿ ಉಕ್ಕಿ ಹರಿಯಲಿ ಅದು ಸಮೃದ್ಧಿಯ ಸಂಕೇತ ಆದರೆ ಎಲ್ಲೂ ಕೂಡ ಹನಿಯಾಗದ ರೀತಿಯಲ್ಲಿ ಕಾಪಾಡು ಎಂದು ರಾಮೇಶ್ವರನಲ್ಲಿ ಬೇಡಿ ಬಾಗಿನ ಅರ್ಪಿಸಿದ್ದೇವೆ…

Read Full News

ಸಾಗರದಲ್ಲಿ ಪೊಲೀಸ್ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ : ಪೊಲೀಸರು ಸಾಗರ ಶಾಸಕರ ಕೈಗೊಂಬೆಯಾಗಿದ್ದಾರೆ : ಬೇಳೂರು ಗೋಪಾಲಕೃಷ್ಣ

 ಮಾರ್ಚ್17 ರಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಯಲ್ಲಿ ಉಪಾಧ್ಯಕ್ಷ ಶ್ರೀಪಾದ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸದ ಕ್ರಮ ಖಂಡಿಸಿ ಗುರುವಾರ ಬ್ರಾಹ್ಮಣ ವೀರಶೈವ ಒಕ್ಕೂಟದ ವತಿಯಿಂದ ಡಿವೈಎಸ್‌ಪಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಎಂಡಿಎಫ್‌ನಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡ ಶ್ರೀಪಾದ ಹೆಗಡೆ…

Read Full News

ಹೊಸನಗರ ತಾಲೂಕಿನಾದ್ಯಂತ ನಾಳೆ(14-07-2022) ಶಾಲೆಗಳಿಗೆ ರಜೆ ಘೋಷಣೆ :

ಹೊಸನಗರ ತಾಲೂಕಿನ ಎಲ್ಲಾ ಶಾಲೆಗಳಿಗೆ ನಾಳೆ (14-07-2022)ರಂದು ರಜೆ ಘೋಷಿಸಲಾಗಿದೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೇಲೆಯಲ್ಲಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ.ಮತ್ತೊಮ್ಮೆ ಪರಿಸ್ಥಿತಿ ಪರಿಶೀಲಿಸಿ ತಹಶೀಲ್ದಾರ್,ಹೊಸನಗರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಸಹಮತದೊಂದಿಗೆ ಇಡೀ ಹೊಸನಗರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಿನಾಂಕ _14-07-2022 ರಂದು ರಜೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಕೃಷ್ಣಮೂರ್ತಿ ತಿಳಿಸಿದ್ದಾರೆ. ಈ ಮೊದಲು ನಗರ ಹೋಬಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು ಆದರೆ ಇನ್ನುಳಿದ ಹೋಬಳಿಗಳ ಪೋಷಕರ ಒತ್ತಡ ಹಾಗೂ ಮಳೆಯ…

Read Full News

ಹೊಸನಗರ ತಾಲೂಕಿನ ನಗರ ಹೋಬಳಿಯ ಶಾಲೆಗಳಿಗೆ ಮಾತ್ರ ರಜೆ : ಸಾಗರ ತಾಲ್ಲೂಕಿನಾದ್ಯಂತ ಶಾಲೆಗಳಿಗೆ ರಜೆ : ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಪತ್ತೆ

ಹೊಸನಗರ ತಾಲ್ಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ಹಿತ ದೃಷ್ಟಿಯಿಂದ ನಾಳೆ ಗುರುವಾರ ದಿನಾಂಕ 14/07/2022 ರಂದು ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ರವರು ತಿಳಿಸಿದ್ದಾರೆ.  (ಹೆಚ್ ಆರ್ ಕೃಷ್ಣಮೂರ್ತಿ BEO ಹೊಸನಗರ) ತಾಲ್ಲೂಕಿನ ಇತರೆ 3 ಹೋಬಳಿಗಳಲ್ಲಿ ಎಡಬಿಡದೆ ಸುರಿಯುತ್ತಿರುವ  ಮಳೆಯಿಂದ ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುತ್ತಿದ್ದಲ್ಲಿ ಅಂತಹ ಮಕ್ಕಳ ಪೋಷಕರಿಗೆ ಶಾಲೆಗೆ ಮಕ್ಕಳನ್ನು ಕಳಿಸಿವುದು ಬೇಡವೆಂದು ತಿಳಿಸುವುದು. …

Read Full News

ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದಲ್ಲಿ ಗುರು ಪೂರ್ಣಿಮೆ

ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ನಡುವೆ ಒತ್ತಡದ ಬದುಕಿನಲ್ಲಿ ಜ್ಞಾನದ ಬೆಳಕಿನ ದೀವಿಗೆ ನೀಡಿದ ಗುರು ಸ್ಮರಣೆ ಅತಿ ಅಗತ್ಯ ಎಂದು ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಹೇಳಿದರು. ಇಂದು ರಾಜ್ಯದ ಆರ್ಯ ಈಡಿಗರ ಪವಿತ್ರ ಯಾತ್ರಾ ಸ್ಥಳವಾದ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದಲ್ಲಿ  ಗುರು ಪೂರ್ಣಿಮೆಯ ಪ್ರಯುಕ್ತ  ಆಯೋಜಿಸಲಾಗಿದ್ದ  ಧಾರ್ಮಿಕ ಸಮಾರಂಭದ  ಸಾನಿಧ್ಯ ವಹಿಸಿ ಆಶೀರ್ವಚನ  ನೀಡಿದ ಅವರು ಇಂದಿನ ಜನರಿಗೆ ಶಿಕ್ಷಣ ಹಾಗೂ ಸಂಸ್ಕಾರದ…

Read Full News

ಸಾಗರ-ಸಿಗಂದೂರು ಸಂಪರ್ಕ ರಸ್ತೆ ಸಂಪೂರ್ಣ ಬಂದ್ : ವಾಹನ ಸವಾರರ ಪರದಾಟ..

ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಕರಾವಳಿ- ಮಲೆನಾಡು ಭಾಗದಲ್ಲಂತೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರ, ವಿದ್ಯುತ್‌ ಕಂಬಗಳು ಉರುಳಿದ್ದು, ಗುಡ್ಡ ಕುಸಿತ, ಸೇತುವೆ ಮುಳುಗಡೆ, ನೆರೆಯಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ತೀರ್ಥಹಳ್ಳಿ, ಸಾಗರ,ಹೊಸನಗರದಲ್ಲಿ ಅವಘಡಗಳು ಹೆಚ್ಚಾಗುತ್ತಿವೆ ಭಾರಿ ಮಳೆಗೆ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಸಾಗರ- ಸಿಗಂದೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಸಿಗಂದೂರು ಹೊಳೆಬಾಗಿಲು ಸಮೀಪದ ಅಂಬಾರಗೊಡ್ಡು ಬಳಿ ರಸ್ತೆಗೆ ಅಡ್ಡಲಾಗಿ ಹಲವಾರು ಮರಗಳು ಬಿದ್ದಿದ್ದು, ಕಳೆದ 1 ಗಂಟೆಯಿಂದ ಸಿಗಂದೂರು ರಸ್ತೆ ಸಂಪೂರ್ಣ ಬಂದ್ ಆಗಿದೆ….

Read Full News

ಗರ್ತಿಕೆರೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ : ರಿಪ್ಪನ್‌ಪೇಟೆ – ತೀರ್ಥಹಳ್ಳಿ ಮಾರ್ಗ ಬಂದ್!!!!

ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಅನೇಕ ಅನಾಹುತಗಳು ಸಂಭವಿಸುತ್ತಿವೆ. ಗರ್ತಿಕೆರೆ ಬಳಿಯ ಸುಣ್ಣದಬಸ್ತಿ ಎಂಬಲ್ಲಿ ಇಂದು ಬೃಹತ್ ಮರವೊಂದು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೋಣಂದೂರು – ರಿಪ್ಪನ್‌ಪೇಟೆ ಸಂಪರ್ಕ ಕಡಿತಗೊಂಡಿದೆ‌. ಬದಲಿ ಮಾರ್ಗವಾಗಿ ಹೆದ್ದಾರಿಪುರ – ಬಿದರಹಳ್ಳಿ ಮಾರ್ಗವಾಗಿ ಗರ್ತಿಕೆರೆ ಮೂಲಕ ವಾಹನಗಳು ಸಂಚರಿಸುತ್ತಿದ್ದು ಈ ಮಾರ್ಗವು ಕಿರಿದಾಗಿರುವ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಅಮೃತ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರ…

Read Full News

ಅಕ್ರಮ ಗಾಂಜಾ ಬೆಳೆ ಪತ್ತೆ ಹಚ್ಚಿ ಸರ್ಕಾರಕ್ಕೆ ಎಚ್ಚರಿಸಿದ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಸ್ಥಳವನ್ನು ಗುರುತಿಸಿ ಅಪರಾಧಿಗಳನ್ನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕಣ್ಣು ಮುಚ್ಚಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾಡಿದ್ದಾರೆ. ಹೌದು, ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಬೆಳೆಗಳ ನಡುವೆ ಗೌಪ್ಯವಾಗಿ ಬೆಳೆಯುತ್ತಿರುವ ಮತ್ತು ಮಾರಾಟ ಮಾಡುವ ವಿಷಯ ಕೇಳಲಾಗುತ್ತಿತ್ತು. ಆದರೀಗ ಇದು ನಗರ ಪ್ರದೇಶದವರೆಗೂ ಹಬ್ಬಿರುವುದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ತೆಹಚ್ಚಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ…

Read Full News

ತಾಯಿಯ ಮೃತದೇಹ ಮನೆಯಲ್ಲಿ : ಶವ ಸಂಸ್ಕಾರ ಮುಂದೂಡಿ ಪರೀಕ್ಷೆ ಬರೆದ ಮಗಳು

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರ ಗ್ರಾಮದ ನಾಗರಾಜ್ ಎಂಬುವರ ಪತ್ನಿ ಅನುರಾಧ (45) ಎಂಬ ಮಹಿಳೆ ಸೋಮವಾರ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.  ಸೋಮವಾರ ಮೃತ ಮಹಿಳೆಯ ಶವವನ್ನು ಮನೆಗೆ ತರಲಾಯಿತು ಆದರೆ ಮಂಗಳವಾರ ಮೃತ ಮಹಿಳೆ ಅನುರಾಧ ರವರ ಮಗಳು ಸ್ಪೂರ್ತಿ ಎಂಬ ಯುವತಿ ಬಿಎಸ್ ಸಿ ಕೃಷಿ ಪದವಿಗೆ ಕೃಷಿ ಕೋಟದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು .ಅಮ್ಮನ ಶವ ಮನೆಯಲ್ಲಿದ್ದರೂ…

Read Full News

ಹಳೇ ದ್ವೇಷದ ಹಿನ್ನಲೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ !!!???

 ಮೂತ್ರ ವಿಸರ್ಜನೆಗೆಂದು ಹೊರ ಹೋದ ಯುವಕನ ಮೇಲೆ ಕೆಲ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಸೋಮವಾರ ರಾತ್ರಿ 10 ಗಂಟೆಯ ಆಸುಪಾಸಿನ ಸಮಯದಲ್ಲಿ ನೆಡೆದಿದೆ. ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ  ತಮ್ಮ ಮನೆಯ ಬಳಿ ಕಾಂತರಾಜು (27) ಮನೆಯಿಂದ ಹೊರ ಬಂದು ಮೂತ್ರ ವಿಸರ್ಜನೆ ಮಾಡುವಾಗ ಹಿಂಬದಿಯಿಂದ ಬಂದ ನಾಲ್ಕೈದು ಜನ ಮಚ್ಚು ಮತ್ತು ಬ್ಯಾಟ್ ನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಯುವಕ ಅವರ ಬಳಿ ಇದ್ದ ಆಯುಧಗಳನ್ನು  ಕಸಿದುಕೊಂಡು ತಮ್ಮ ಕುಟುಂಬ…

Read Full News

ಮುಂದುವರಿದ ಭಾರಿ ಮಳೆ : ಹೊಸನಗರ ಮತ್ತು ಸಾಗರ ತಾಲೂಕಿನ ಶಾಲೆಗಳಿಗೆ ನಾಳೆ(12-07-2022) ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಎರಡು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ ಹೊಸನಗರ ಮತ್ತು ಸಾಗರ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 12ರ ಮಂಗಳವಾರದಂದು ರಜೆ ಘೋಷಿಸಲಾಗಿದೆ ಎಂದು ಸಾಗರ-ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Read Full News

ತೀರ್ಥಹಳ್ಳಿ ಗಾಂಧಿಚೌಕ್ ನಲ್ಲಿ ದಂಪತಿಗಳ ಹೈಡ್ರಾಮ : ಮಗುವಿಗೆ ಹಿಂಸೆ ನೀಡಿದ ಪ್ರಕರಣದಲ್ಲಿ ತಂದೆ ಅರೆಸ್ಟ್

ತೀರ್ಥಹಳ್ಳಿ: ಹುಚ್ಚುತನದ ಪರಮಾವಧಿಯಾಗಿ ಧರ್ಮದ ಅಮಲಿನಲ್ಲಿ ತನ್ನ ಎಳೆಯ ಕಂದಮ್ಮನನ್ನು ಮಳೆಯಲ್ಲಿ ನೆನೆಸುತ್ತಾ ಹುಚ್ಚು ಹುಚ್ಚಾಗಿ ಅರಚುತ್ತಿದ್ದ ತಂದೆಯನ್ನು ಅನುಮಾನದ ಮೇಲೆ ಪೊಲೀಸರು ವಿಚಾರಣೆ ನಡೆಸಿ ಆತನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಮಳೆಯಲ್ಲೇ ಅದನ್ನು ಮೇಲೆತ್ತಿ ಹಾಕುತ್ತ ಹಿಂಸೆ ನೀಡುತ್ತಿರುವ ದೃಶ್ಯವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ತೀರ್ಥಹಳ್ಳಿಯ ಫರ್ನಾಂಡಿಸ್ ಎಂದು ಗುರುತಿಸಿದ್ದು ಈತ ಕಾರಿನ ಮೇಲೆ ವಿವಿಧ ಧರ್ಮದ ಅಮಲಿನಲ್ಲಿ ಬರಹ ಬರೆದು…

Read Full News

ಮಾಸ್ತಿಕಟ್ಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಖಾಸಗಿ ಬಸ್ :

ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್’ಗೆ ಖಾಸಗಿ ಬಸ್ ಗುದ್ದಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ನಡೆದಿದೆ. ಕುಂದಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿದ್ದು ಮನೆಯ ಮುಂಭಾಗದ ಕಾಂಪೌಡ್ ಪುಡಿಪುಡಿಯಾಗಿವೆ.  ಕುಂದಾಪುರದಿಂದ ಹೊಸನಗರ ಮಾರ್ಗವಾಗಿ ಹೋಗುತ್ತಿದ್ದ KA 20 ಸಿ 6293 ಸಂಖ್ಯೆಯ ಶ್ರೀ ದುರ್ಗಾಂಬಾ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಕಾಂಪೌಂಡ್ ಗೆ ಗುದ್ದಿದೆ. ಹಾನಿಗೊಳಗಾದ…

Read Full News

ರಿಪ್ಪನ್ ಪೇಟೆ : ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ

ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ  ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು.  ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್  ಸಖಾಫೀ  ಮಾತನಾಡಿ,  ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ  ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು.     ರಿಪ್ಪನ್ ಪೇಟೆಯಲ್ಲಿ ಮಳೆ ಹಿನ್ನಲೆಯಲ್ಲಿ  ಮೆರವಣಿಗೆಯನ್ನು ಸ್ಥಗಿತಗೊಳಿಸಿ ಗುಂಪು…

Read Full News

ಆಗುಂಬೆ ಘಾಟಿಯಲ್ಲಿ ಗುಡ್ದ ಕುಸಿತ : ಮೂರು ಬದಲಿ ಮಾರ್ಗ ವ್ಯವಸ್ಥೆ!!!!!ಯಾವ್ಯಾವುದು ಗೊತ್ತಾ??? ಈ ಸುದ್ದಿ ನೋಡಿ

ತೀರ್ಥಹಳ್ಳಿ : ಆಗುಂಬೆ ಘಾಟಿಯ  10ನೇ ತಿರುವಿನಲ್ಲಿ ಗುಡ್ಡಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ (DC) ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ. ಭೂ ಕುಸಿತದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಜುಲೈ 12ರ ಮುಂಜಾನೆ 8ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಆ ಬಳಿಕ ಜುಲೈ 30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಮೂರು…

Read Full News

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ : ಸಂಚಾರ ಸಂಪೂರ್ಣ ಬಂದ್

ಆಗುಂಬೆ ಘಾಟಿಯಲ್ಲಿ ವ್ಯಾಪಕ ಮಳೆಯಾಗಿರುವ ಹಿನ್ನಲೆಯಲ್ಲಿ ತಿರುವಿನಲ್ಲಿ ಮಣ್ಣುಕುಸಿದಿದ್ದು, ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರಬಿದ್ದಿದೆ. ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಈ ಮಾರ್ಗದಲ್ಲಿ ಹೋದವರು ಸಂಚಾರ ಬಂದ್ ಆಗಿರುವ ಹಿನ್ನಲೆಯಲ್ಲಿ ವಾಪಾಸ್ ಆಗುತಿದ್ದಾರೆ. ಆಗುಂಬೆ ಘಾಟಿ ಕೆಳಗೆ ಸೋಮೇಶ್ವರ ಚೆಕ್​​ಪೋಸ್ಟ್​ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ.  ಮೇಲ್ಬಾಗ ಆಗುಂಬೆ ಘಾಟಿ ಚೆಕ್​ಪೋಸ್ಟ್​ ಬಳಿಯೇ ವಾಹನಗಳನ್ನು ವಾಪಸ್​ ಕಳುಹಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ವೀಡಿಯೋ ಇಲ್ಲಿ ವೀಕ್ಷಿಸಿ👇

Read Full News

ಬುಕ್ಕಿವರೆ – ಬೆಳ್ಳೂರು – ರಿಪ್ಪನ್‌ಪೇಟೆ ಮಾರ್ಗಕ್ಕೆ ನೂತನ KSRTC ಬಸ್ ಸೌಲಭ್ಯ : ಕುಗ್ರಾಮದ ಜನರ ಮೊಗದಲ್ಲಿ ಮೂಡಿದ ಸಂತಸ

ರಿಪ್ಪನ್‌ಪೇಟೆ : ಬೆಳ್ಳೂರು-ಬುಕ್ಕಿವರೆ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸೌಲಭ್ಯವು ಪ್ರಾರಂಭವಾಗಿದ್ದು ಎಲ್ಲರ ಮೊಗದಲ್ಲಿ ಮಂದಹಾಸ ತಂದಿದೆ. ಶರಾವತಿ, ಚಕ್ರಾ, ವರಾಹಿ, ಮಾಣಿ, ಮಡೆನೂರು ಡ್ಯಾಂ ನಿರ್ಮಾಣಕ್ಕಾಗಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಮುಳುಗಡೆ ಸಂತ್ರಸ್ತ ಕುಟುಂಬದವರೇ ಹೆಚ್ಚು ವಾಸಿಸುತ್ತಿರುವ ಕುಗ್ರಾಮಗಳಾದ ಬೆಳ್ಳೂರು, ಬುಕ್ಕಿವರೆ, ಚಾಣಬೈಲು, ದೋಬೈಲು, ಮಸ್ಕಾನಿ, ಕಳಸೆ, ಹಾರೋಹಿತ್ತಲು, ಬಸವಾಪುರ, ಕಲ್ಲುಹಳ್ಳ, ಗುಳಿಗುಳಿ ಶಂಕರ, ಗುಬ್ಬಿಗಾ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಮತ್ತು ಶಾಲಾ – ಕಾಲೇಜ್ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರು…

Read Full News

ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ : ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಆರೆಂಜ್ ಅಲರ್ಟ್ ಇದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಖಡಕ್ ಸೂಚನೆ ನೀಡಿದ್ದಾರೆ. ಮಳೆಯಿಂದ ಆಗಬಹುದಾದ ಹಾನಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಹಾನಿ ನಿರ್ವಹಣೆ ಕುರಿತು ಅಗತ್ಯ…

Read Full News

ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ MSIL ಉದ್ಯೋಗಿ ನವೀನ್ ಕುಮಾರ್ ಕುಟುಂಬಕ್ಕೆ 5 ಲಕ್ಷದ ಚೆಕ್ ವಿತರಿಸಿದ ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ MSIL ಮದ್ಯ ಮಾರಾಟ ಮಳಿಗೆಯಲ್ಲಿ ADO ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಸಾಳು ನಿವಾಸಿ ನವೀನ್ ಕುಮಾರ್ ರವರ ಕುಟುಂಬಕ್ಕೆ MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ರವರು MSIL ವತಿಯಿಂದ 5 ಲಕ್ಷ ರೂ ಪರಿಹಾರ ಧನದ ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದರು. ಇತ್ತೀಚೆಗೆ ಸಮೀಪದ ಅರಸಾಳು – ಬೆನವಳ್ಳಿ ನಡುವಿನ ರಸ್ತೆಯಲ್ಲಿ ಟೊಯೋಟಾ ಇಟಿಯೋಸ್ ಕಾರ್ ಹಾಗೂ ಬಜಾಜ್ ಡಿಸ್ಕವರ್ ಬೈಕ್ ನಡುವೆ ನಡೆದ ಭೀಕರ…

Read Full News

ಹಿಂದೂ ಹರ್ಷನ ಸಹೋದರಿ ಅಶ್ವಿನಿ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು??? ಈ ಸುದ್ದಿ ನೋಡಿ

ನ್ಯಾಯ ಕೇಳಲು ಹೋದರೆ, ಗೃಹ ಸಚಿವರು ಬೈದು ಕಳಿಸಿದ್ದಾರೆ ಎನ್ನುವ ಹರ್ಷ ಸಹೋದರಿ ಆರೋಪಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಅವರು ಏನೇನೋ ಮಾತನಾಡಿದ್ರು, ಆ ರೀತಿ ಮಾತನಾಡಿದ್ರೆ ನಾವೇನು ಮಾಡೋಣ ಎಂದು ಸಚಿವರು ಪ್ರಶ್ನಿಸಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅರಗ ಜ್ಞಾನೇಂದ್ರ, ರಾಜು ನನ್ನ ಅತ್ಯಂತ ಆಪ್ತ ಮಿತ್ರ ಎಂದು ಮೊದಲು ಹೇಳಿದರು. ಈ ವೇಳೆ ಪತ್ರಕರ್ತರು ರಾಜು ಅಲ್ಲ ಹರ್ಷ ಎಂದು ನೆನಪಿಸಿದ್ದು, ಈ ವೇಳೆ ಸಚಿವರು, ಸಾರಿ ಹರ್ಷ ನನ್ನ…

Read Full News