Headlines

ರಿಪ್ಪನ್‌ಪೇಟೆಯಲ್ಲಿ ವಿಜ್ರಂಭಣೆಯಿಂದ ಜರುಗಿದ 75ನೇ ಸ್ವಾತಂತ್ರ ಅಮೃತ ಮಹೋತ್ಸವ :

ರಿಪ್ಪನ್‌ಪೇಟೆ: ಪಟ್ಟಣದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ೭೫ನೆ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಆಗಸ್ಟ್ ೧೩ ರಿಂದ ಹರ್‌ಗರ್ ತಿರಂಗ ಅಭಿಯಾನದಲ್ಲಿ ಪಾಲ್ಗೊಂಡ ಜನತೆ ೧೫ ರ ಸೋಮವಾರ ಅಧಿಕೃತ ಧ್ವಜಸ್ತಂಭಗಳಲ್ಲಿ ಧ್ವಜಾರೋಹಣ ನೇರವೇರಿಸುವುದರೊಂದಿಗೆ ರಾಷ್ಟ ಗೌರವ ಸಲ್ಲಿಸಿದರು. ಪಟ್ಟಣದ ಗ್ರಾಮ ಪಂಚಾಯತಿ, ನಾಡಕಛೇರಿ, ಪೊಲೀಸ್‌ ಠಾಣೆ,ವೊ ಪ್ರಾಥಮಿಕ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ, ಸರ್ಕಾರಿ ಬಿಸಿಎಂ ವಸತಿ ನಿಲಯ, ಪ್ರಥಮದರ್ಜೆ, ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ…

Read Full News

ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಬೆಂಗಾವಲು ಜೀಪ್ ಅಪಘಾತ :

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಾವಲು ಜೀಪ್ ಜಂಕ್ಷನ್ ಬಳಿ ಅಪಘಾತಕ್ಕೀಡಾಗಿದೆ. ಭದ್ರಾವತಿ ಜಂಕ್ಷನ್ ಬಳಿ ಈ ಅಪಘಾತವಾಗಿದ್ದು, ಬೆಂಗಾವಲು ಜೀಪಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಸಚಿವರು ತುಮಕೂರಿನಿಂದ ತೀರ್ಥಹಳ್ಳಿಗೆ ಬರುತ್ತಿದ್ದರು.  ಡಿಕ್ಕಿ ಹೊಡೆದ ಕಾರು ಬೆಂಗಳೂರು ಕಡೆಗೆ ಹೋಗುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ.

Read Full News

ಸಾವರ್ಕರ್ ಭಾವಚಿತ್ರ ತೆರವು ವಿವಾದ : ಶಿವಮೊಗ್ಗ ನಗರ ಉದ್ವಿಗ್ನ- ಎರಡು ದಿನ 144 ಸೆಕ್ಷನ್ ಜಾರಿ

ಶಿವಮೊಗ್ಗ:ಅಮೀರ್ ಅಹಮದ್ ಸರ್ಕಲ್’ನಲ್ಲಿ ಸಾವರ್ಕರ್ ಫೋಟೊ ವಿವಾದ ಸಂಬಂಧ ಪರಿಸ್ಥಿತಿ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಲಾಗಿದೆ. ಎರಡು ದಿನ ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಜಿಲ್ಲೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ ವಿವಾದ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ. ಇಂದು ಕೂಡ ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರಕ್ಕೆ ಎರಡು ಕೋಮಿನ ಯುವಕರ ನಡುವೆ ಜಟಾಪಟಿ ನಡೆದಿದೆ. ಶಿವಮೊಗ್ಗದ…

Read Full News

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 351ನೇ ಆರಾಧನ ಮಹೋತ್ಸವ

ರಿಪ್ಪನ್‌ಪೇಟೆ: ಸಮೀಪದ ಬೈರಾಪುರ ಗ್ರಾಮದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ 351ನೇ ಗುರುಸಾರ್ವಭೌಮರ ಆರಾಧನಾ ಮಹೋತ್ಸವವು ಸಂಭ್ರಮದೊಮದಿಗೆ ಸಂಪನ್ನಗೊಂಡಿತು. ಬೆಳಗ್ಗೆ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಪವಮಾನ ಪೂಜೆ ಹೋಮ ಹವನಗಳು ನಂತರ ರಾಯರಿಗೆ ಅಲಂಕಾರ ಪೂಜೆ ಮಹಾಮಂಗಳಾರತಿ ಜರುಗಿತು. ನಂತರ ಸಾಮೂಹಿಕ ಅನ್ನಸಂತರ್ಪಣೆಯೊಂದಿಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬಂದಿತು.

Read Full News

ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ನೀವೆ ಹಿಂಗೆ ಎಡವಟ್ಟು ಮಾಡಿದ್ರೆ ಹೆಂಗೆ???? ಇದು ನಿಮ್ಮ ಅವಿವೇಕಿತನವೋ???? ಅಸಡ್ಡೆಯೋ????

ತೀರ್ಥಹಳ್ಳಿ: ದೇಶಾದ್ಯಂತ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ದೇಶದ ಹಬ್ಬವಾಗಿ ಆಚರಿಸುತ್ತಿದ್ದು ಇಂದಿನಿಂದ ಆಗಸ್ಟ್ ಹದಿನೈದರವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ.ದೇಶಪ್ರೇಮಿಗಳು ತ್ರಿವರ್ಣ ಧ್ವಜಕ್ಕೆ ಪೂಜೆ ನೆರವೇರಿಸಿ ಮನೆಯ ಮುಂಭಾಗ ಹಾಗೂ ಮನೆಯ ಮೇಲೆ ಬಾವುಟವನ್ನು ಹಾರಿಸಿ ನಮಸ್ಕರಿಸುತ್ತಿದ್ದಾರೆ. ಆದರೆ ಕೆಲವು ಸರ್ಕಾರಿ ಅಧಿಕಾರಿಗಳು  ತ್ರಿವರ್ಣಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರಾ ಎಂಬ ಪ್ರೆಶ್ನೆ ಮೂಡುತ್ತಿದೆ. ಕಾರಣ ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನೆರವೇರಿಸಿದ ಧ್ವಜಾರೋಹಣದಲ್ಲಿ ಎಡವಟ್ಟು ಎದ್ದು ಕಾಣಿಸುತ್ತಿದ್ದು ಎಲ್ಲಾ ಕಡೆ ಟ್ರೊಲ್ ಆಗುತ್ತಿದೆ….

Read Full News

ಶಿವಮೊಗ್ಗದ ಶಾಪಿಂಗ್ ಮಾಲ್​ನಲ್ಲಿ ಸಾರ್ವಕರ್​ ಭಾವಚಿತ್ರ ವಿವಾದ!!! ಪೊಲೀಸರಿಂದ ಎಂಡಿ ಶರೀಫ್​ ವಶಕ್ಕೆ! ಠಾಣೆಯ ಎದುರು ರಾತ್ರೋರಾತ್ರಿ ನಡೀತು ಪ್ರತಿಭಟನೆ

ಶಿವಮೊಗ್ಗ: ಸಿಟಿ ಸೆಂಟ್ರಲ್​ ಮಾಲ್ : ನಿನ್ನೆ ಮಾಲ್​ನಲ್ಲಿ ವೀರ ಸಾರ್ವಕರ್​ ಫೋಟೋ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ, ತುಂಗಾ ನಗರ ಪೊಲೀಸ್ ಠಾಣೆಯ ಎದುರು ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಘಟನೆ ಸಂಬಂಧ ಕೇಸ್​ ದಾಖಲಿಸಿದ್ದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನೆಡಸ್ತಿದ್ದಾರೆ ಎಂಬ ವಿಚಾರ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕೆಲವು ಕಾರ್ಯಕರ್ತರು ಠಾಣೆ ಎದುರು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದರು. ಒಂದು ಗಂಟೆಗೂ ಅಧಿಕ ಕಾಲ ಸ್ಥಳದಲ್ಲಿ…

Read Full News

ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಹರ್-ಘರ್ ತಿರಂಗಾ : ವಿದ್ಯಾರ್ಥಿಗಳ ಕೈಯಲ್ಲಿ ರಾರಾಜಿಸಿದ ರಾಷ್ಟ್ರ ಧ್ವಜ

ರಿಪ್ಪನ್‌ಪೇಟೆ: ರಾಷ್ಟದ ಸ್ವಾತಂತ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ಹರ್‌ಘರ್ ತಿರಂಗ್ ಅಭಿಯಾನವನ್ನು ಭಾರತೀಯರಾದ ನಾವುಗಳು ಯಶಸ್ವಿಗೊಳಿಸಬೇಕಿರುವುದು ನಮ್ಮ ಆದ್ಯಕರ್ತವ್ಯವಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.   ಪಟ್ಟಣದ ರಾಮಕೃಷ್ಣ ಶಿಕ್ಷಣ ಸಂಸ್ಥೆ,ಪದವಿ ಕಾಲೇಜು,ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಡ ಶಾಲೆಯ ಮಕ್ಕಳಿಗೆ ಹರ್‌ಗರ್ ತಿರಂಗ ವಿತರಿಸಿ ಮಾತನಾಡಿ ಅಮೃತ ಮಹೋತ್ಸವ ಸುಸಂದರ್ಭದಲ್ಲಿ ಭಾರತ ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಪಸರಿಸುವಂತಾಗಲು ಅಭಿಯಾನ ಸರ್ವವ್ಯಾಪಿಯಾಗಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಲಾಷೆಯಂತೆ ದೇಶದ ಪ್ರತಿಯೊಂದು ಮನೆಯ…

Read Full News

ಶಿವಮೊಗ್ಗದ ಶಾಪಿಂಗ್ ಮಾಲ್​ ನಲ್ಲಿ ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ವಿವಾದ : ಬಿಗುವಿನ ವಾತಾವರಣ

ಶಿವಮೊಗ್ಗ : ನಗರದ ಸಿಟಿ ಸೆಂಟ್ರಲ್​ ಮಾಲ್​ ವಿವಾದವೊಂದಕ್ಕೆ ಸಾಕ್ಷಿಯಾಗಿ ಹಲವು ಸನ್ನಿವೇಶಗಳನ್ನು ಕಂಡಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಡಿದ್ದ ಅಲಂಕಾರದ ನಡುವೆ ವೀರ ಸಾರ್ವಕರ್​ ಫೋಟೋಹಾಕಿದ್ದನ್ನ ಪ್ರಶ್ನಿಸಿ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ಹೊರಹಾಕಿ ಪ್ರತಿಭಟಿಸಿದರೆ, ಬಿಜೆಪಿ ಕಾರ್ಯಕರ್ತರು ವೀರ ಹೋರಾಟಗಾರರಿಗೆ ಎಸ್​ಡಿಪಿಐ ಅವಮಾನ ಮಾಡಿದೆ ಎಂದು ಆಕ್ರೋಶ ಹೊರಹಾಕಿ ಮಾಲ್​ನ ಎದುರಲ್ಲೆ ಪ್ರತಿಭಟನೆ ನಡೆಸಿತು. ಮನೆಮನೆಗೂ ತಿರಂಗಾ ಅಭಿಯಾನದ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನಗರ ಪ್ರತಿಷ್ಟಿತ ಕಟ್ಟಡಗಳು ಹಾಗೂ ಸಾರ್ವಜನಿಕ…

Read Full News

ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತರ ನಿರ್ಲಕ್ಷ : ಹಿರಿಯ ಕಾರ್ಯಕರ್ತ ಯೋಗೇಂದ್ರಪ್ಪ ಗೌಡ ಆರೋಪ

ರಿಪ್ಪನ್ ಪೇಟೆ: ಹೊಸನಗರ ತಾಲೂಕಿನಲ್ಲಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಹಿರಿಯ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಕ್ಕೆ ಒಳಪಡಿಸಲಾಗಿದೆ. ಸರಕಾರ ಮತ್ತು ಎಲ್ಲಾ ಅಧಿಕಾರವಿದ್ದರೂ ಹಿರಿಯ ಕಾರ್ಯಕರ್ತರು ಕಡೆಗಣಿಸಿ ನಿನ್ನೆ ಮೊನ್ನೆ ಬಂದಂತಹ ಕಾಂಗ್ರೆಸ್ ಪಕ್ಷದವರಿಗೆ ಮಣೆ ಹಾಕಿ ನಾಮನಿರ್ದೇಶನ ಮಾಡಲಾಗುತ್ತಿದೆ ಆದ್ದರಿಂದ ಆಗಸ್ಟ್ 17ರ ಬುಧವಾರ ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರ ಕಚೇರಿ ಎದುರು ಧರಣಿ ನಡೆಸುವುದಾಗಿ ಪಕ್ಷದ ಹಿರಿಯ ಕಾರ್ಯಕರ್ತರಾದ ಯೋಗೇಂದ್ರಪ್ಪ ಗೌಡ ರವರು ತಿಳಿಸಿದ್ದಾರೆ.  ಇಂದು ಪಟ್ಟಣದಲ್ಲಿ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು…

Read Full News

ರಿಪ್ಪನ್‌ಪೇಟೆ : ದಂಡದ ಬದಲು ಇನ್ಸೂರೆನ್ಸ್ ಮಾಡಿಸಿದ ಪೊಲೀಸರು

ರಿಪ್ಪನ್‌ಪೇಟೆ :  ಇಂದು ಪಟ್ಟಣದ ಪೊಲೀಸರು ಬೈಕ್ ಸವಾರರಿಗೆ ಅವಶ್ಯಕ ದಾಖಲೆಗಳ ಬಗ್ಗೆ ವಿನೂತನವಾಗಿ ಚುರುಕು ಮುಟ್ಟಿಸುವ ಕಾರ್ಯಾಚರಣೆ ನಡೆಸಿದ್ದಾರೆ. ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ತಂಡ ಇಂದು ಪಟ್ಟಣದಲ್ಲಿ ವಾಹನಗಳನ್ನು ತಡೆ ಹಿಡಿದು ಸಾವಿರ ದಂಡ ಕಟ್ಟುವ ಬದಲು ಸಾವಿರ ರೂಪಾಯಿಯಲ್ಲೇ ಇನ್ಸೂರೆನ್ಸ್ ಮಾಡಿಸಿ ಎಂದು ಸವಾರರಿಗೆ ಬುದ್ದಿ ಹೇಳಿ ಸ್ಥಳದಲ್ಲಿಯೇ ಇನ್ಸೂರೆನ್ಸ್ ಹಾಕಿಸಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತ್ತು. ಪೊಲೀಸರು ವಾಹನ ಅಡ್ಡ ಹಾಕಿದ್ರೆ ಸಾಕು, ಲೈಸೆನ್ಸ್ ಎಲ್ಲಿ, ಆರ್.ಸಿ. ಕೊಡು, ಎಮಿಷನ್…

Read Full News

ಮಾನವೀಯತೆ ಮೆರೆದ ಶಾಸಕ ಹರತಾಳು ಹಾಲಪ್ಪ :

ರಿಪ್ಪನ್‌ಪೇಟೆ : ಇಂದು ಶಾಸಕರು ಹರ್ ಘರ್ ತಿರಂಗ ಅಭಿಯಾನ ಅಂಗವಾಗಿ ಸಾಗರದಿಂದ ರಿಪ್ಪನ್‌ಪೇಟೆ ಗೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಮಹಿಳೆಯೊಬ್ಬರನ್ನು ತಮ್ಮ ವಾಹನದಲ್ಲಿಯೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನೆವಟೂರು ಸಮೀಪದ ಆನೆಕೆರೆ ಗ್ರಾಮದ ಬಳಿ, ದೀಪಾ (CRP ಆಚಾಪುರ ಕ್ಲಸ್ಟರ್, ಶಿಕ್ಷಣ ಇಲಾಖೆ) ಎಂಬುವವರು ಅಪಘಾತಗೊಂಡು, ತೀವ್ರ  ರಕ್ತಸ್ರಾವದಲ್ಲಿರುವುದನ್ನು ಗಮನಿಸಿದ ಶಾಸಕರು ಕೂಡಲೇ ತಮ್ಮ ವಾಹನ ನಿಲ್ಲಿಸಿ ಅವರನ್ನು ತಮ್ಮ ವಾಹನದಲ್ಲಿಯೇ ರಿಪ್ಪನಪೇಟೆ ಪ್ರಾ.ಆ. ಕೇಂದ್ರಕ್ಕೆ ಸಾಗಿಸಿ, ಚಿಕಿತ್ಸೆ…

Read Full News

ಭಾರಿ ಗಾಳಿ ಮಳೆಗೆ ನೆಲಸಮಗೊಂಡ ದನದ ಕೊಟ್ಟಿಗೆ : ಜಾನುವಾರುಗಳಿಗೆ ಗಂಭೀರ ಗಾಯ

ರಿಪ್ಪನ್ ಪೇಟೆ : ಇಲ್ಲಿನ  ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ಭಾರಿ ಮಳೆಗೆ ಕೊಟ್ಟಿಗೆ ಕುಸಿದು ಬಿದ್ದು ಜಾನುವಾರುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಗುಬ್ಬಿಗಾ ಗ್ರಾಮದ ಚೆಲುವಣ್ಣ ಎಂಬವರ ಮನೆಯ ಹಿಂಬದಿಯ ದನದ ಕೊಟ್ಟಿಗೆ ಇಂದು ಕುಸಿದು ಬಿದ್ದ ಪರಿಣಾಮ 1 ಜರ್ಸಿ ಹಸು, 2 ನಾಟಿ ಹಸುಗಳಿಗೆ ಗಾಯಗಳಾಗಿವೆ.1 ನಾಟಿ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಬೆಳ್ಳೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ…

Read Full News

ತೀರ್ಥಹಳ್ಳಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಆರಗ ಜ್ಞಾನೇಂದ್ರ ಚಾಲನೆ : ಸಾವಿರಾರು ವಿದ್ಯಾರ್ಥಿಗಳು ಬಾಗಿ

ತೀರ್ಥಹಳ್ಳಿ : 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕೆಂಬ ಕಾರಣಕ್ಕಾಗಿ ಪಟ್ಟಣದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿದರು. ಪಟ್ಟಣದ ಕುಶಾವತಿ ಪಾರ್ಕ್ ನಿಂದ ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದವರೆಗೆ ಸಾವಿರಾರು ವಿದ್ಯಾರ್ಥಿಗಳೊಡನೆ ಸರಿ ಸುಮಾರು 2 ಕಿಮೀ ಗಳಷ್ಟು ದೂರ ಮಳೆಯಲ್ಲಿಯೇ ಹೆಜ್ಜೆ ಹಾಕಿದರು. ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು…

Read Full News

ಹುಂಚ ಸಮೀಪದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಗಂಭೀರ ಗಾಯಗೊಂಡ ಯುವಕ : ಆಸ್ಪತ್ರೆಗೆ ದಾಖಲು

ಹುಂಚ :  ಇಲ್ಲಿನ ನಾಗರಹಳ್ಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರವೊಂದು  ಬಿದ್ದು ವ್ಯಕ್ತಿಯೋರ್ವನಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಹಾಲಂದೂರು ವಾಸಿ ಗುರುರಾಜ ನಿನ್ನೆ ರಾತ್ರಿ ಹುಂಚ-ನಾಗರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ನೆಟ್ಟಿರುವ ಅಕೇಶಿಯ ಮರ ಏಕಾಏಕಿ ಬಿದ್ದು ಎಡಗೈ ತುಂಡಾಗಿ ಗಂಭೀರ ಗಾಯಗೊಂಡಿದ್ದಾನೆ.ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಹತ್ತಿರದಲ್ಲಿಯೇ ಇರುವ ಆಟೋ ಚಾಲಕ ಅನಂತಭಟ್ ರವರ ಮನೆಯವರೆಗೆ ಗಾಯಾಳು ತೆವಳುತ್ತಾ ಬಂದು ಸಹಾಯಕ್ಕೆ ಕೂಗಿದ್ದಾರೆ.ಕೂಡಲೇ ಆಟೋ ಚಾಲಕ ಅನಂತ್ ಭಟ್ ರವರು ಗಾಯಾಳು ಗುರುರಾಜ್…

Read Full News

ಅಣೆ ಪ್ರಮಾಣದ ತಪ್ಪು ಕಾಣಿಕೆ ಸಲ್ಲಿಸಲು ಹಾಲಪ್ಪ ಧರ್ಮಸ್ಥಳಕ್ಕೆ ಭೇಟಿ : ಬೇಳೂರು ಅನುಮಾನ /// ಕೆಲವರಿಗೆ ಆಪಾದನೆ ಮಾಡುವುದೇ ಕೆಲಸ : ಹಾಲಪ್ಪ ತಿರುಗೇಟು

ಸಾಗರ: ಈಗ ಶಾಸಕ ಹಾಲಪ್ಪ ಅವರಿಗೆ ಜ್ಞಾನೋದಯ ಆಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದು ತಪ್ಪಾಗಿದೆ ಎಂಬ ಕಾರಣಕ್ಕೆ ಅವರು ತಪ್ಪುದಂಡ ಸಲ್ಲಿಸಲು ಅಲ್ಲಿಗೆ ಹೋಗಿರಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಂಕೆ ವ್ಯಕ್ತಪಡಿಸಿದರು. ಇಲ್ಲಿನ ಮಲೆನಾಡು ಸಿರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವಿಪರೀತ ಮಳೆಯಿಂದ ಮನೆಗಳು ಕುಸಿದು ಹೋಗಿದೆ. ತೋಟದ ಮಣ್ಣು ಕೊಚ್ಚಿ ಹೋಗಿದ್ದರೆ ಗದ್ದೆಗಳ ಮೇಲೆ ನೆರೆಯಿಂದ ಮಣ್ಣು ತುಂಬಿಕೊಂಡಿದೆ. ರೈತರು…

Read Full News

ಕಾಶ್ಮೀರಿ‌ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುತ್ತಾರೆ – ರಾಷ್ಟ್ರ ಧ್ವಜಕ್ಕೆ ಹಣ ಪಡೆಯುತ್ತಾರೆ -ಮಧು ಬಂಗಾರಪ್ಪ

ಶಿವಮೊಗ್ಗ : ಸೊರಬದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ  ಪ್ರತಿ ಜಿಲ್ಲೆಯಲ್ಲಿ 75 ಕಿ ಮೀ ದೂರ ಕ್ರಮಿಸಬೇಕಿದ್ದು ನಾಳೆ ಸೊರಬ ಪಟ್ಟಣದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಮಧುಬಂಗಾರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಸಂವಿಧಾನವನ್ನ ತಿದ್ದುಪಡಿ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದಾರೆ. ಧ್ವಜದ ಬಗ್ಗೆ ಮಾತನಾಡುತ್ತಾರೆ. 150 ಕೋಟಿ ವೆಚ್ಚದಲ್ಲಿ ಧ್ವಜ ಹಂಚಲಾಗುತ್ತಿದೆ. ಧ್ವಜ ಹಂಚುವ ಶಕ್ತಿ ನೀಡಿದ್ದು ಮಹಾತ್ಮ ಗಾಂಧಿಯವರ ಕೊಡುಗೆ ಎಂದು ಗುಡುಗಿದರು. ಕಾಶ್ಮೀರಿ‌ಫೈಲ್ಸ್ ಸಿನಿಮಾಗೆ ತೆರಿಗೆ ಪಡೆಯುತ್ತಾರೆ….

Read Full News

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಸಾಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿ ಆರ್ಥಿಕ ಧನಸಹಾಯ ಮಾಡಿದರು. ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದ ಅವರು ಸಾಂತ್ವನ ಹೇಳಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನ್ಯಾಯ ಸಿಗಲಿದೆ ಎಂಬ ಭರವಸೆ ನೀಡಿ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶಾಂತಿ ಕೋರಿದರು. ಈ ಸಂಧರ್ಭದಲ್ಲಿ ಸಾಗರ-ಹೊಸನಗರ ತಾಲೂಕ್ ಬಿಲ್ಲವ ಸಮಾಜದ ಬಾಂಧವರು ಹಾಗೂ ಪಕ್ಷದ ಪ್ರಮುಖರು ಇದ್ದರು. ರಾಜ್ಯಸಭಾ…

Read Full News

ರಿಪ್ಪನ್‌ಪೇಟೆ : ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಿದ ಶಾಲಾ ಯುವ ಸಂಸತ್ ಚುನಾವಣೆ

ರಿಪ್ಪನ್ ಪೇಟೆ : ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ಯುವ ಸಂಸತ್ ಚುನಾವಣೆಯನ್ನು ವಿಭಿನ್ನವಾಗಿ ರಿಪ್ಪನ್ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಮತದಾನಕ್ಕೆ ಸರ್ಕಾರ ಹದಿನೆಂಟು ವಯೋಮಿತಿ ನಿಗದಿ ಪಡಿಸಿದೆ ಆದರೆ ಮೊದಲ ಮತದಾನ ಮಾಡುವಾಗ ಯುವ ಮತದಾರರಲ್ಲಿ ಆತಂಕ ದುಗುಡ ಎದ್ದುಕಾಣುತ್ತದೆ ಕೆಲವರು ಅಂಜಿಕೆಯಿಂದಲೇ ಮತದಾನದಿಂದ ಹಿಂದೆ ಜರುಗುವುದು ಹೆಚ್ಚು ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿದೆಸೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ತರಗತಿ…

Read Full News

ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ತೀವ್ರ ನಿಗಾ ಘಟಕ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಕೊರತೆಯಿತ್ತು. ಅದರಲ್ಲಿ ಮುಖ್ಯವಾಗಿ ಐಸಿಯು ಸಮಸ್ಯೆ ಮತ್ತು ಆಸ್ಪತ್ರೆಯ ಐಸಿಯು ತೀವ್ರ ನಿಗಾ ಘಟಕ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯು ಮಳೆಯಿಂದ ಸೋರುತ್ತಿದ್ದು ಈ  ಕೊಠಡಿ ಸೋರದಂತೆ ಮೇಲ್ಛಾವಣಿ ಶೀಟ್‌ಗಳನ್ನು ಅಳವಡಿಸಿಲಾಗಿದ್ದು ಅದನ್ನು ಮಂಗಳವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಸಚಿವರು ನನಗೆ ಇದೊಂದು ಸಂತೋಷದ ವಿಚಾರ. ಸಾರ್ವಜನಿಕ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಸುವ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಪ್ರಯತ್ನ ನೆಡೆಯುತ್ತಿದೆ….

Read Full News

ಪತ್ರಿಕಾ ರಂಗವು ಸಾರ್ವಜನಿಕರ ಧ್ವನಿಯಾಗಿ ಅವರ ಕುಂದು ಕೊರತೆಗಳನ್ನು ಸರ್ಕಾರಕ್ಕೆ ತಿಳಿಸುವಂತಾಗಬೇಕು : ಆರಗ ಜ್ಞಾನೇಂದ್ರ

ಹೊಸನಗರ : ಇಂದಿನ ದಿನದಲ್ಲಿ ಗ್ರಾಮೀಣ ಪತ್ರಿಕೋದ್ಯಮ ಪರಿಣಾಮಕಾರಿಯಾಗಿದ್ದು.. ಇಲ್ಲಿಯ ವರದಿಗಳು ರಾಜ್ಯಮಟ್ಟದ ಪತ್ರಿಕೆಗಳ ಮುಖಪಟದಲ್ಲಿ ಮನ್ನಣೆ ಪಡೆಯುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ ಪಟ್ಟರು. ಭಾನುವಾರದಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹೊಸನಗರ ತಾ. ಶಾಖೆ, ಇವರಿಂದ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಿದ್ದ, ಪತ್ರಿಕಾ ದಿನಾಚರಣೆ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬಂತೆ ಪತ್ರಿಕಾ ರಂಗವು 4 ನೇ ಅಂಗವಾಗಿದೆ….

Read Full News

ರಿಪ್ಪನ್‌ಪೇಟೆ : ಮತಾಂತರಕ್ಕೆ ಯತ್ನ ಆರೋಪ – ಹಿಂದೂಪರ ಸಂಘಟನೆಗಳಿಂದ ತರಾಟೆ

ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯಲ್ಲಿನ ಖಾಸಗಿ ವಸತಿ ಗೃಹದ ಸಭಾ ಭವನದಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಪಂಗಡದವರು ಹಿಂದೂ ಧರ್ಮದ ಕೆಲವರನ್ನು ಮತಾಂತರ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ರಿಪ್ಪನ್ ಪೇಟೆ ಹಿಂದೂ ಪರಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ವಸತಿ ಗೃಹದ ಸಭಾಭವನಕ್ಕೆ ಧಾವಿಸಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಸಂಘಟನೆಯವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಭಾನುವಾರ ನಡೆದಿದೆ. ನಡೆದಿದ್ದೇನು…? ಪ್ರಾರ್ಥನಾ ಕೇಂದ್ರ ಹೊರತುಪಡಿಸಿ ಖಾಸಗಿ ಸ್ಥಳಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಪಂಗಡದವರು ರಿಪ್ಪನ್‌ಪೇಟೆ ಗ್ರಾಮಪಂಚಾಯತ್…

Read Full News

ಎದೆ ಮಟ್ಟದ ನೀರಿನಲ್ಲಿ ಸಾಗಿ ಅಂತ್ಯಸಂಸ್ಕಾರ – ಗೃಹಸಚಿವರ ಕ್ಷೇತ್ರದಲ್ಲಿ ಏನಿದು ಅವ್ಯವಸ್ಥೆ !

ತೀರ್ಥಹಳ್ಳಿ : ಇಲ್ಲಿ ಮಳೆಗಾಲ ಬಂತೆಂದರೆ ಸಾಕು ಜನರ ಪರದಾಟ ಆರಂಭವಾಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಬದುಕಲೂ ಕಷ್ಟ.. ಸತ್ತರೂ ಕಷ್ಟ. ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..! ಹೌದು, ಆಶ್ಚರ್ಯವಾದರೂ ಸತ್ಯ. ಇದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ಗ್ರಾಮವೊಂದರ ಪರಿಸ್ಥಿತಿ. ತಾಲೂಕಿನ ಹೊಸಹಳ್ಳಿ ಗ್ರಾ.ಪಂಚಾಯತ್ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಮೃತ ಶರೀರವನ್ನು ಗ್ರಾಮಸ್ಥರು ನೀರು ತುಂಬಿದ ರಸ್ತೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಕೋಡ್ಲು ಗ್ರಾಮದ ತಮ್ಮಯ್ಯ ಗೌಡ ಅವರು ವಯೋ…

Read Full News

ಆಯುಷ್ ವಿಶ್ವವಿದ್ಯಾಲಯ ಕೂಡಲೇ ಪ್ರಾರಂಭಿಸುವಂತೆ ಸಮಾಜವಾದಿ ಗೋಪಾಲಗೌಡ ಅಧ್ಯಯನ ಟ್ರಸ್ಟ್ ವತಿಯಿಂದ ಒತ್ತಾಯ :

ಶಿವಮೊಗ್ಗ ನಗರದಲ್ಲಿ ಕಳೆದ 2021-22ರ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಮಂಜೂರು ಮಾಡಿ, 20 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದ್ದ ಆಯುಷ್  ವಿಶ್ವ ವಿದ್ಯಾಲಯದ ಯೋಜನೆಯ ಭರವಸೆಯು ಖಾಸಗಿ ಆಯುರ್ವೇದ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ಚಿತಾವಣೆಯಿಂದ ಠುಸ್ಸ್ ಆಗಿದೆ ಎಂದು ಸಮಾಜವಾದಿ ಗೋಪಾಲಗೌಡ ಅಧ್ಯಯನ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಮತ್ತು ಆರ್ ಎ ಚಾಬುಸಾಬ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರೆ ಖಾಸಗಿ…

Read Full News

ಲಿಂಗನಮಕ್ಕಿ ಜಲಾಶಯ : ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮುನ್ನೆಚ್ಚರಿಕೆ ಸೂಚನೆ

ಶಿವಮೊಗ್ಗ : ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೇ ದಿನೇ ಏರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1819.00 ಅಡಿಗಳಾಗಿದ್ದು 06-08-2022 ರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 1801.35 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 30,000 ಕ್ಯೂಸೆಕ್ಸ್‍ಗಳಿಗಿಂತಲೂ ಅಧಿಕವಾಗಿದ್ದು ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು…

Read Full News

ರಿಪ್ಪನ್‌ಪೇಟೆ : ಕಂದಾಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ರೈತ ಕುಟುಂಬದಿಂದ ಧರಣಿ

ರಿಪ್ಪನ್‌ಪೇಟೆ: ಕೆಂಚನಾಲ ಗ್ರಾಮದ ಸ್ವಂತ ಜಮೀನಿಗೆ ದಾರಿ ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವ ಕಂದಾಯ ಇಲಾಖೆಯ ಧೋರಣೆಯನ್ನು ಖಂಡಿಸಿ ರೈತ ಸೋಮಶೇಖರ ಮತ್ತು ಅವರ ಕುಟುಂಬ ಸದಸ್ಯರು ನಾಡಕಛೇರಿ ಎದುರು ಶುಕ್ರವಾರ  ಪ್ರತಿಭಟನಾ ಧರಣಿ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಸೋಮಶೇಖರ ಮಾದ್ಯಮದವರೊಂದಿಗೆ ಮಾತನಾಡಿ ಕೆಂಚನಾಲ ಗ್ರಾ,ಮದ ಸರ್ವೆ ನಂ. ೩೫ ರಲ್ಲಿ ೨ ಎಕರೆ ಜಮೀನನ್ನು ಹೊಂದಿರುವ ನಾನು ಸಾಗುವಳಿಯ ಜೊತೆಗೆ ರಬ್ಬರ್ ಮರಗಳನ್ನು ನೆಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತೇನೆ. ಅಕ್ಕಪಕ್ಕದ ಬಗರ್ ಹುಕುಂ…

Read Full News

ಆಗುಂಬೆ ಘಾಟಿಯಲ್ಲಿ ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಉರುಳಿಬಿದ್ದ ಬೃಹತ್ ಮರ :

ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಆಗುಂಬೆ ಘಾಟಿಯಲ್ಲಿ ಮರ ಉರುಳಿ ಬಿದ್ದ ಘಟನೆ ನಡೆದಿದೆ. ಈ ಘಟನೆಯಿಂದ ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ,ಮರ ಬಿದ್ದಿರುವ ಹಿನ್ನಲೆಯಲ್ಲಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸೋಮೇಶ್ವರ ಕಡೆಯಿಂದ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರ ಉರುಳಿ ಬಿದ್ದಿದೆ. ಚಾಲಕ ಮತ್ತು ಪಕ್ಕದಲ್ಲಿದ್ದ ಮತ್ತೊಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಮರ ಬಿದ್ದ ತಕ್ಷಣ ಗಾಬರಿಯಾದ ಚಾಲಕ…

Read Full News

ಹೊಸನಗರ ತಾಲೂಕ್ ಜೆಡಿಎಸ್ ನೂತನ ಅಧ್ಯಕ್ಷರಾಗಿ ಎನ್ ವರ್ತೇಶ್ ಅಧಿಕಾರ ಸ್ವೀಕಾರ:

ಹೊಸನಗರ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಕ್ಷೀಣಿಸುತ್ತಿದ್ದು ಇದನ್ನು ಬಲಪಡಿಸಲು ಹೊಸನಗರ ತಾಲ್ಲೂಕು ಕಾರ್ಯಕರ್ತರ ಸಭೆ ನಡೆಸಿ ಸಂಘಟನೆ ಮಾಡುವ ಉದ್ದೇಶದಿಂದ ಆಗಸ್ಟ್ 20 ಶನಿವಾರ 11 ಗಂಟೆಗೆ ಹೊಸನಗರ ಪ್ರವಾಸಿ ಮಂದಿರದ ಹತ್ತಿರವಿರುವ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್‌ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪತ್ರಿಕಾಘೋಷ್ಟಿ…

Read Full News

ರಿಪ್ಪನ್‌ಪೇಟೆ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ವರೆಗೆ ‘ಹರ್ ಘರ್ ತಿರಂಗಾ’: ಹರತಾಳು ಹಾಲಪ್ಪ.

ರಿಪ್ಪನ್ ಪೇಟೆ : ಸ್ವಾತಂತ್ರ್ಯದ ಅಮೃತಮಹೋತ್ಸವದ ತಿರಂಗಾ’ ಕಾರ್ಯಕ್ರಮದಡಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಮನೆ, ಉದ್ಯಮ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಎಂ ಎಸ್ ಐ ಎಲ್ ಅಧ್ಯಕ್ಷ ಹಾಗೂ ಶಾಸಕ ಹರತಾಳು ಹಾಲಪ್ಪ  ಕರೆ ನೀಡಿದ್ದಾರೆ. ಈ ಸಂಬಂಧ ರಿಪ್ಪನ್ ಪೇಟೆ ಪಟ್ಟಣದ  ಹಿಂದೂ ಮಹಾಸಭಾ  ಸಭಾಂಗಣದಲ್ಲಿ  ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಅದರಂತೆ ಹಗಲಿನಂತೆಯೇ ಹಾರಿಸುವ ರಾತ್ರಿಯಲ್ಲಿಯೂ ರಾಷ್ಟ್ರಧ್ವಜ…

Read Full News

ಅದ್ದೂರಿಯಾಗಿ ಜರುಗಿದ ನಾಗರಹಳ್ಳಿ ಜಾತ್ರಾ ಮಹೋತ್ಸವ :

ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ನಾಗೇಂದ್ರಸ್ವಾಮಿಯ ಮಳೆಗಾಲದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಈ ಜಾತ್ರಾ ಮಹೋತ್ಸವವು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಶ್ರಾವಣ ಮಾಸದಲ್ಲಿ, ಬೇಸಿಗೆ ಕೂಳೆ ಪಂಚಮಿಯಲ್ಲಿ ವಿಶೇಷವಾಗಿ ಮಹೋತ್ಸವವು ನಡೆಯಲಿದೆ.  ಮದುವೆಗಾಗಿ, ಮಕ್ಕಳ ಫಲಕ್ಕೆ ಇಲ್ಲಿಗೆ ಆಗಮಿಸುವುದುಂಟು. ಮಂಗಳವಾರ ಮುಂಜಾನೆ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣಭಟ್‌ ನೇತೃತ್ವದಲ್ಲಿ ನಾಗೇಂದ್ರ ಸ್ವಾಮಿಗೆ ಅಭಿಷೇಕ, ಕ್ಷೀರಾಭಿಷೇಕ ಮತ್ತು ವಿಶೇಷ ಅಲಂಕಾರ ನಡೆಯಿತು. ದೇವರಿಗೆ ಮಹಾಮಂಗಳಾರತಿ ನೆರವೇರಿಸಿ, ತೀರ್ಥಪ್ರಸಾದ…

Read Full News

ಮಾನವೀಯತೆ ಮೆರೆದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಪಟ್ಟಣದಲ್ಲಿ ನೆಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಂಗಳೂರು ಪ್ರಯಾಣದಲ್ಲಿ ಇದ್ದ ಗೃಹಸಚಿವ ಆರಗ ಜ್ಞಾನೇಂದ್ರರವರು  ದಾರಿಯ ಮದ್ಯೆ ಮುತ್ತಿನಕೊಪ್ಪ ಬಳಿ ತೆರಳುತ್ತಿದ್ದಾಗ ರಸ್ತೆಯ ಮದ್ಯೆ ಕಾರು ಮತ್ತು ಬೈಕ್ ಅಪಘಾತ ದಲ್ಲಿ ಗಾಯಗೊಂಡ ದಂಪತಿಗಳನ್ನು ಸಂತೈಸಿ ಅವರಿಗೆ ಧೈರ್ಯ ತುಂಬಿ ಸಮೀಪದ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಮಾಡಿಸಲು ಎಲ್ಲಾ ವ್ಯವಸ್ಥೆ ಮಾಡಿ ನಂತರ ಬೆಂಗಳೂರಿನತ್ತ ಪ್ರಯಾಣ  ಮಾಡಿದರು. ಅಪಘಾತದಲ್ಲಿ ದಂಪತಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.  ಗೃಹಸಚಿವರ…

Read Full News