Headlines

ರಿಪ್ಪನ್‌ಪೇಟೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ – ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ – ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆ: ಪಟ್ಟಣದ  ಕಸ್ತೂರಿ ಕನ್ನಡ ಸಂಘ ಹಾಗೂ  ಡಾ.ಪುನಿತ್‌ ರಾಜ್‍ಕುಮಾರ್ ಅಭಿಮಾನಿ ಬಳಗ ಮಂಗಳವಾರ  ಆಯೋಜಿಸಿದ್ದ 68ನೇ ಕರ್ನಾಟಕ  ರಾಜ್ಯೋತ್ಸವದ  ಅದ್ಧೂರಿ ಕನ್ನಡ ನುಡಿ ಸಂಭ್ರಮಕ್ಕೆ  ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು .

ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರಾ  ಮೆರವಣಿಗೆಗೆ ಚಾಲನೆ ನೀಡಿದರು.

ಈ ಮೆರವಣಿಗೆಯಲ್ಲಿ ಭಜನಾ ತಂಡ ,ಡೊಳ್ಳು ಕುಣಿತ , ವಿವಿಧ ಶಾಲಾ ಕಾಲೇಜುಗಳ ವಾದ್ಯ ಘೋಷ್  ಮೆರವಣಿಗೆಗೆ ಸಾಥ್ ನೀಡಿದವು .

ತೆರೆದ ವಾಹನದಲ್ಲಿ  ಅನಾವರಣಗೊಂಡ ಭಾರೀ ಗಾತ್ರದ ತಾಯಿ ಭುವನೇಶ್ವರಿ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರ  ಹಾಗೂ  ರಾಷ್ಟ್ರ ಶಕ, ಪುರುಷರ ವಿವಿಧ ವೇಷ ಭೂಷಣಗಳ ಧಿರಿಸು  ತೊಟ್ಟು ಸಂಭ್ರಮಿಸಿದ ಪುಟಾಣಿಗಳ ಸಾಲು , ಸಹಸ್ರಾರು ಸಂಖ್ಯೆಯ ಶಾಲಾ, ಕಾಲೇಜು  ವಿದ್ಯಾರ್ಥಿಗಳ ಪಥಸಂಚಲನದ    ಅಕರ್ಷಣೆಯ ಮೆರವಣಿಗೆ  ದಾರಿಹೋಕರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.

ಇದೇ ಸಂಧರ್ಭದಲ್ಲಿ ಕನ್ನಡ ಕಸ್ತೂರಿ ಸಂಘ. ಮತ್ತು ಪುನೀತ್ ರಾಜ್ ಅಭಿಮಾನಿ ಬಳಗದ ವತಿಯಿಂದ ರಿಪ್ಪನ್ ಪೇಟೆ ಸರಕಾರಿ ಪದವಿ ಪೂರ್ವ ಕಾಲೇಜ್ ನ ಪ್ರಾಚಾರ್ಯ ರಾದ ಈ ಬಾರಿಯ ರಾಜ್ಯಮಟ್ಟದ ಉಪನ್ಯಾಸಕ ಪ್ರಶಸ್ತಿ ವಿಜೇತರಾದ  ಕೆ. ಎಚ್.  ವಾಸು ದೇವ್ ರವರನ್ನು 69ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೌರವಿಸಿ ಸನ್ಮಾನಿಸಿದರು.

ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಗ್ರಾಮ ಪಂಚಾಯ್ತಿ ಆಡಳಿತ ವರ್ಗ ಹಾಗೂ ಸದಸ್ಯರು , ನಾಡ ಕಚೇರಿ ಉಪ ತಹಸಿಲ್ದಾರ್ ಮತ್ತು ಸಿಬ್ಬಂದಿಗಳು , ಪಿಎಸ್ ಐ  ಮತ್ತು ಸಿಬ್ಬಂದಿ ವರ್ಗ  ಸೇರಿದಂತೆ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ,  ವಿವಿಧ ಸಂಘ ಸಂಸ್ಥೆಗಳ ಮತ್ತು ಸರ್ಕಾರಿ ಹಾಗೂ ಖಾಸಗಿ  ಶಾಲಾ ಕಾಲೇಜ್  ಶಿಕ್ಷಣ ಸಂಸ್ಥೆಯ ಪ್ರಮುಖರು ಕರ್ನಾಟಕ  ರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *