ಬಿಜೆಪಿ ಆರೋಪ ರಾಜಕೀಯ ಪ್ರೇರಿತ – ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ
ರಿಪ್ಪನ್‌ಪೇಟೆ : ನಮ್ಮ ಅವಧಿಯಲ್ಲಿನ ಅಭಿವೃದ್ದಿಯನ್ನು ಸಹಿಸದೇ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಯಾವ ವ್ಯಕ್ತಿಗೂ ಅವಹೇಳಕಾರಿಯಾಗಿ ಬೈದಿಲ್ಲ. ದುರುದ್ದೇಶದಿಂದ ನನ್ನ ತೇಜೋವಧೆ ಮಾಡುವ ಉದ್ದೇಶದಿಂದಾಗಿ ಇಲ್ಲ ಸಲ್ಲದ ಆರೋಪ ಮಾಡಿ ಸಾಮಾನ್ಯ ಸಭೆಯನ್ನು ನಡೆಸಲು ಬಿಡದೇ ಏಕಾಏಕಿ ಪ್ರತಿಭಟನೆ ನಡೆಸಿ ನನ್ನ ವಿರುದ್ದ ಧಿಕ್ಕಾರ ಕೂಗಿ ಹೊರ ನಡೆದಿರುವುದರ ಬಗ್ಗೆ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ದಿಢೀರ್ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು.
ನನಗೂ ಆಡಿಯೋದಲ್ಲಿ ಹರಿದಾಡುತ್ತಿರುವ ಸಂಭಾಷಣೆಯ ಧ್ವನಿಗೂ ಯಾವುದೇ ಸಂಬಂಧವಿಲ್ಲ. ಇದು ಹೀಗೆ ಮುಂದುವರೆದರೆ ನಾನು ಕಾನೂನಾತ್ಮಕ ಹೋರಾಟ ನಡೆಸುವುದಾಗಿ ತಿಳಿಸಿ, ನನ್ನ ವಿರುದ್ಧ ಈ ರೀತಿಯಲ್ಲಿ ಅಪಮಾನ ಎಸಗುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ ಅವರು, ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ಸದಸ್ಯರಿಗಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದರು ಕೇಳಿದರೆ ಅದೇ ಕ್ಷಣದಲ್ಲಿಯೇ ರಾಜೀನಾಮೆ ನೀಡುವುದಾಗಿ ಹೇಳಿದ ಅವರು, ರಾಜೀನಾಮೆ ಕೊಡುವಂತಹ ಘಟನೆ ಏನು ನಡೆದಿಲ್ಲ. ಆ ಬಗ್ಗೆ ಬಿಜೆಪಿಯವರು ದಾಖಲೆ ಸಹಿತ ಸಾಬೀತುಪಡಿಸಲಿ ಎಂದು ಸವಾಲೆಸೆದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಆಸಿಫ್ ಬಾಷಾ, ಗಣಪತಿ ಗವಟೂರು, ಡಿ.ಈ.ಮಧುಸೂಧನ್, ಎನ್.ಚಂದ್ರೇಶ್, ಸಾರಾಭಿ, ವೇದಾವತಿ, ಅನುಪಮ ರಾಕೇಶ್,ಇದ್ದರು.