ಸಿಗಂದೂರು ಬಳಿಯಲ್ಲಿ ತೆಪ್ಪ ಮುಳುಗಿ ಮೂವರು ಕಣ್ಮರೆ


ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆಯಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಇವತ್ತು ಘಟನೆ ಸಂಭವಿಸಿದ್ದು ಮೂವರು ಯುವಕರು ಕಣ್ಮರೆಯಾಗಿದ್ದಾರೆ.
ಚೇತನ್, ಸಂದೀಪ್ ಮತ್ತು ರಾಜು ಎಂಬುವವರು ಕಣ್ಮರೆಯಾಗಿದ್ದಾರೆ.
ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರಾದ ಯುವಕರು ಕಣ್ಮರೆಯಾಗಿದ್ದಾರೆ.
ತೆಪ್ಪದಲ್ಲಿ ಐವರು ಯುವಕರು ತೆರಳುತಿದ್ದು ಈ ವೇಳೆಯಲ್ಲಿ ತೆಪ್ಪ ಮಗುಚಿ ಮೂವರು ಕಣ್ಮರೆಯಾಗಿದ್ದಾರೆ ಇನ್ನಿಬ್ಬರು ಈಜಿ ದಡ ಸೇರಿದ್ದಾರೆ ಎನ್ನಲಾಗುತ್ತಿದೆ.
ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರ ಮೂಲದ ಐವರು ಯುವಕರು ಕಳಸವಳ್ಳಿ ಬದಿಯ ಹಿನ್ನೀರಿಗೆ ತೆರಳಿದ್ದಾರೆ. ಅಲ್ಲಿಯೇ ದಡದಲ್ಲಿದ್ದ ಉಕ್ಕುಡವನ್ನು ಬಳಸಿ ಹಿನ್ನೀರಿನ ಇನ್ನೊಂದು ಬದಿಗೆ ಊಟಕ್ಕೆ ತೆರಳಿದ್ದಾರೆ. ಅಲ್ಲಿಂದ ವಾಪಸ್ ಬರುವಾಗ ಉಕ್ಕುಡದ ಒಳಗೆ ನೀರು ನುಗ್ಗಲು ಆರಂಭವಾಗಿದೆ. ಪರಿಣಾಮ ಉಕ್ಕುಡದಲ್ಲಿದ್ದವರು ಮುಳುಗುವಂತಾಗಿದೆ. ಆಗ ಐವರ ಪೈಕಿ ಇಬ್ಬರು ಈಜಿಕೊಂಡು ದಡಕ್ಕೆ ಬಂದಿದ್ದಾರೆ. ಉಳಿದ ಮೂವರು ನೀರಿನಲ್ಲಿ ಮುಳುಗಿದ್ದಾರೆ.
ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ,ಪೊಲೀಸರು ದೌಡಾಯಿಸಿದ್ದು ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.