ಆಸ್ತಿ ವಿಚಾರದಲ್ಲಿ ಚಿಕ್ಕಪ್ಪನಿಂದಲೇ ಚಾಕು ಇರಿತ


SHIVAMOGGA | ಸಂಬಧಿಕರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದು ಒರ್ವನಿಗೆ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಗೌರವ್ ಹೋಟೆಲ್ ಬಳಿ ನಡೆದಿದೆ.
ಸ್ಥಳೀಯ ನಿವಾಸಿ ಶ್ರೀರಂಗ ಎಂಬಾತನಿಗೆ ಅವರ ಚಿಕ್ಕಪ್ಪ ಚಾಕು ಇರಿದಿದ್ದಾರೆ.ಈ ಹಿಂದೆಯೂ ಸಹ ಇವರಿಬ್ಬರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕಳೆದ ಭಾನುವಾರ ಮತ್ತೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀರಂಗನಿಗೆ ಚಿಕ್ಕಪ್ಪ ಚಾಕುವಿನಿಂದ ಇರಿದಿದ್ದಾರೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .