ಮಹಿಳೆ ನಾಪತ್ತೆ – ಮಾಹಿತಿಗಾಗಿ ಪೊಲೀಸ್ ಮನವಿ


ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶನಗರ 5ನೇ ಕ್ರಾಸ್ ವಾಸಿ ಕೋಟೆಪ್ಪ ಎಂಬುವವರ ಪತ್ನಿ 41 ವರ್ಷದ ಪಾರ್ವತಮ್ಮ ಎಂಬ ಮಹಿಳೆ ನ.09 ರಂದು ರಾತ್ರಿ ತನ್ನ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ.
ಈ ಮಹಿಳೆಯ ಚಹರೆ 4.5 ಅಡಿ ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಆರೆಂಜ್ ಕಲರ್ ಸೀರೆ ಮತ್ತು ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ
ಈ ಮಹಿಳೆಯ ಕುರಿತು ಸುಳಿವು ದೊರಕಿದಲ್ಲಿ ಜಯನಗರ ಪೊಲೀಸ್ ಠಾಣೆ 08182-261416, ಜಿಲ್ಲಾ ಕಂಟ್ರೋಲ್ ರೂಂ.: 08182-261413 ಹಾಗೂ ಎಸ್.ಪಿ. ಕಚೇರಿ 08182-261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.