ಕ್ರೈಂ ಸುದ್ದಿ:
ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಆಟೋ ಚಾಲಕ
ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಆಟೋ ಚಾಲಕ ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಬಜಾಜ್ ಮತ್ತು ಟಿವಿಎಸ್ ಫೈನಾನ್ಸ್ ನಿಂದ ಸಾಲ ಪಡೆದ ಆಟೋ ಚಾಲಕ ವಿದ್ಯಾನಗರದ ರೈಲ್ವೆ ಗೇಟ್ ಬಳಿ ವಿಷ ಸೇವಿಸಿ ಮಲಗಿದ್ದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಬಜಾಜ್ ನಲ್ಲಿ 1.40 ಸಾಲ ಪಡೆದಿದ್ದರು. ಇದಕ್ಕೆ ತಿಂಗಳು 8.031 ಕಂತು ಕಟ್ಟುತ್ತಿರುವುದಾಗಿ.ಒಂದು ವರ್ಷ ತೀರಿಸಿರುವುದಾಗಿ ವಿಷ ಸೇವಿಸಿದ ಚಾಲಕ ವಿವರಿಸಿದ್ದಾರೆ ಮತ್ತು ಟಿವಿಎಸ್…
ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ
ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ ಹೊಸನಗರ ತಾಲೂಕಿನ ನಗರ ಮೂಲದ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೊಸನಗರ ತಾಲೂಕಿನ ನಗರ ಹೋಬಳಿಯ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದುವರೆ ವರ್ಷದ ಹಿಂದೆ ಪ್ರಕಾಶ್ ಎಂಬುವರ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.ಇವರು ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ…
ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು
ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು ಶಿವಮೊಗ್ಗ | ಕಳ್ಳನೋರ್ವ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಸಮೀಪದಲ್ಲಿರುವ ಬ್ಯಾಂಕ್ ಒಂದರ ಎಟಿಎಂನಲ್ಲಿ ಕಳವು ಯತ್ನ ನಡೆದಿದೆ. ಎಟಿಎಂ ಬಾಕ್ಸ್ ಒಡೆಯಲು ಕಳ್ಳ ಯತ್ನಿಸಿದ್ದಾನೆ. ಎಟಿಎಂನಲ್ಲಿ ಸೈರನ್ ಶಬ್ದ ಹಾಗೂ 112 ಸಿಬ್ಬಂದಿಯನ್ನು ನೋಡಿ ಕಳ್ಳ ಪರಾರಿಯಾಗಿದ್ದಾನೆ. ಈ ಸಂಬಂಧ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ…
RIPPONPETE | ಹುಲ್ಲು ಸಾಗಿಸುತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ
RIPPONPETE | ಹುಲ್ಲು ಸಾಗಿಸುತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ ಹುಲ್ಲು ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕಣಬಂದೂರು ಗ್ರಾಮದಲ್ಲಿ ನಡೆದಿದೆ. ಕಣಬಂದೂರಿನ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಒಣ ಹುಲ್ಲಿನ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಹೊತ್ತಿ ಉರಿದಿದೆ. ಸ್ಥಳೀಯರು , ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ…
ಸಾಲಗಾರರ ಕಾಟಕ್ಕೆ ಬೆದರಿ ಸಾವಿಗೆ ಶರಣಾದ ವ್ಯಕ್ತಿ – ಐದು ಸಾವಿರ ಸಾಲಕ್ಕೆ ಜೀವತೆತ್ತ ವ್ಯಕ್ತಿ
ಸಾಲಗಾರರ ಕಾಟಕ್ಕೆ ಬೆದರಿ ಸಾವಿಗೆ ಶರಣಾದ ವ್ಯಕ್ತಿ – ಐದು ಸಾವಿರ ಸಾಲಕ್ಕೆ ಜೀವತೆತ್ತ ವ್ಯಕ್ತಿ ಫೈನಾನ್ಸ್ ನವರ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೇ ವ್ಯಕ್ತಿಯೋರ್ವ ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದಲ್ಲಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹೇಶ್ (48) ಮೃತ ವ್ಯಕ್ತಿಯಾಗಿದ್ದಾರೆ. ಖಾಸಗಿ ವ್ಯಕ್ತಿಯ ಬಳಿ 5 ಸಾವಿರ ರೂಪಾಯಿ ಸಾಲ ಪಡೆದಿದ್ದರು. 5…
ಉಸಿರಾಟದ ಸಮಸ್ಯೆಗೆ ಬೇಸತ್ತು ನೇಣಿಗೆ ಶರಣಾದ ಯುವತಿ
ಉಸಿರಾಟದ ಸಮಸ್ಯೆಗೆ ಬೇಸತ್ತು ನೇಣಿಗೆ ಶರಣಾದ ಯುವತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಒಬ್ಬಳು, ತೀವ್ರ ಅನಾರೋಗ್ಯದ ಹಿನ್ನೆಲೆಯಿಂದ ಬೇಸತ್ತಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ನೇತಾಜಿ ವೃತ್ತದ ಬಳಿಯ ವಿಜಯನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಶಿವಮೊಗ್ಗದಲ್ಲಿ ಅನಾರೋಗ್ಯಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಸೌಮ್ಯ (25) ಎನ್ನುವ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಿವಮೊಗ್ಗದ ನೇತಾಜಿ ವ್ರತ ಬಳಿಯ ವಿಜಯನಗರದಲ್ಲಿ…
RIPPONPETE | ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ – ಮದ್ಯದ ಹಾವಳಿಗೆ ಮತ್ತೊಂದು ಬಲಿ
RIPPONPETE | ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ – ಮದ್ಯದ ಹಾವಳಿಗೆ ಮತ್ತೊಂದು ಬಲಿ ರಿಪ್ಪನ್‌ಪೇಟೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಳಿತಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಕೆದಲುಗುಡ್ಡೆ ಗ್ರಾಮದ ಷಣ್ಮುಖ (50)ವರ್ಷ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯರು ವೈದ್ಯರಾದ ಅನಂತ್ ಮಯ್ಯ ರವರಿಗೆ ಮಾಹಿತಿ ತಿಳಿಸಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಅವರು ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಧೃಡ ಪಡಿಸಿದ್ದಾರೆ….
ಜಮೀನಿನ ವಿದ್ಯುತ್ ಟಿಸಿ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
ಜಮೀನಿನ ವಿದ್ಯುತ್ ಟಿಸಿ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಭದ್ರಾವತಿಯ ದೊಡ್ಡೇರಿ ಗ್ರಾಮದಲ್ಲಿ ಬುಧವಾರ (ಜ.22) ರಾತ್ರಿ ನಡೆದಿದೆ. ಶಾಂತ ಕುಮಾರ (35) ಕೊಲೆಯಾದ ದುರ್ದೈವಿ. ಲೇಪಾಕ್ಷಿ ಎನ್ನುವ ವ್ಯಕ್ತಿ ಹಾಗೂ ಮತ್ತೋರ್ವ ಸೇರಿ ಶಾಂತಕುಮಾರನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕ ವಿಚಾರಕ್ಕೆ ಬುಧವಾರ ಸಂಜೆ ಜಗಳ ನಡೆದಿತ್ತು. ಗಲಾಟೆ ವಿಪರೀತಕ್ಕೆ ಹೋಗಿ ರಾತ್ರಿ ಮಚ್ಚಿನಿಂದ ಹಲ್ಲೆ…
ಅಪ್ರಾಪ್ತನಿಂದ ಬೈಕ್ ಚಾಲನೆ – 25 ಸಾವಿರ ರೂ. ದಂಡ
ಅಪ್ರಾಪ್ತನಿಂದ ಬೈಕ್ ಚಾಲನೆ – 25 ಸಾವಿ ರೂ. ದಂಡ ತೀರ್ಥಹಳ್ಳಿ : ಅಪ್ರಾಪ್ತ ಹುಡುಗನೊಬ್ಬ ಬೈಕ್ ಚಲಾಯಿಸಿದ ಹಿನ್ನಲೆಯಲ್ಲಿ ಜೆ ಎಂ ಎಫ್ ಸಿ ಕೋರ್ಟ್ ಹುಡುಗನ ಪೋಷಕರಿಗೆ ಭಾರಿ ದಂಡ ವಿಧಿಸಿದೆ. ತೀರ್ಥಹಳ್ಳಿ ಪಟ್ಟಣದ ಇಂದಿರಾನಗರದ ಶಾಲೆಯೊಂದರ ಸಮೀಪದಲ್ಲಿ ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿದ್ದು ಪೊಲೀಸರು ಆತನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಅವರ ಪೋಷಕರಿಗೆ ನ್ಯಾಯಾಧೀಶರು 25000 ರೂ ದಂಡ ವಿಧಿಸಿದ್ದಾರೆ.
ಎಟಿಎಂನಲ್ಲಿ ರೈತನಿಗೆ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯಿಂದ ವಂಚನೆ
ಎಟಿಎಂನಲ್ಲಿ ರೈತನಿಗೆ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯಿಂದ ವಂಚನೆ ಆಯನೂರು : ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ನೆರವು ನೀಡುವಂತೆ ನಟಿಸಿ, ATM ಕಾರ್ಡ್ ಬದಲಿಸಿ ರೈತರೊಬ್ಬರಿಗೆ ವಂಚಿಸಲಾಗಿದೆ. ಎಟಿಎಂ ಕಾರ್ಡ್ ಅದಲು ಬದಲಾಗಿ 20 ನಿಮಿಷದ ಒಳಗೆ 40 ಸಾವಿರ ರೂ. ಹಣ ಡ್ರಾ ಮಾಡಿ ವಂಚಿಸಿರುವ ಘಟನೆ ನಡೆದಿದೆ. ಹಾರ್ನಳ್ಳಿ ಗ್ರಾಮದ ದೇವಪ್ಪ, ಆಯನೂರಿನ ಬ್ಯಾಂಕ್ ಒಂದರ ಎಟಿಎಂ ಸೆಂಟರ್‌ನಲ್ಲಿ ಹಣ ಬಿಡಿಸಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಅಪರಿಚಿತರು ದೇವಪ್ಪ ಅವರಿಗೆ ಹಣ…