ಕ್ರೈಂ ಸುದ್ದಿ:
ಬಿಜೆಪಿ ಪಕ್ಷದ ಯುವ ಮುಖಂಡನ ಬರ್ಬರ ಹತ್ಯೆ : ಶಿವಮೊಗ್ಗ ನಗರ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ
ಬಿಜೆಪಿ ಯುವ ಮುಖಂಡನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಮಂಗಳೂರು ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಬೆಳ್ಳಾರೆಯ ನೆಟ್ಟಾರು ನಿವಾಸಿ ಪ್ರವೀಣ್ ನೆಟ್ಟಾರು(32) ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಬೆಳ್ಳಾರೆಯಲ್ಲಿ ಅಕ್ಷಯ ಕೋಳಿ ಫಾರ್ಮ್ ಹೊಂದಿರುವ ಪ್ರವೀಣ್ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಫಾರ್ಮ್ ಮುಚ್ಚಿ ಮನೆಗೆ ಹೋಗಲು ಸಿದ್ಧವಾಗುತ್ತಿದ್ದ ವೇಳೆ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಬೈಕ್‌ನಲ್ಲಿ ಬಂದ ಇಬ್ಬರು…
ಒಂದು ಬೈಕ್ ಕಳ್ಳತನದ ತನಿಖೆ ಕೈಗೊಂಡ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್.!!!!!! : 16 ಬೈಕ್ ಸೇರಿ 1 ಕಾರು ವಶ
ಒಂದು ಬೈಕ್ ಬೆನ್ನತ್ತಿದ್ದ ಪೊಲೀಸರಿಗೆ ದೊರೆತಿದ್ದು ಬರೋಬ್ಬರಿ 16 ಬೈಕ್,ಒಂದು ಕಾರು ಜೊತೆಗೆ ಶ್ರೀಗಂಧವೂ ಪತ್ತೆಯಾಗಿದೆ. ಬೈಕ್ ವೊಂದರ ಕಳ್ಳತನ ಪ್ರಕರಣದ ಬೆನ್ನತ್ತಿದ ಶಿರಾಳಕೊಪ್ಪ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್. ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಕೆ.ಎ-17 ಇ.ಎ-4008 ನೋಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವು ಆಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪ್ರಾರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಸಂಬಂಧ ಪಿಎಸ್ಐ…
ಕೋಡೂರು ಬಳಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು,ಇನ್ನೊಬ್ಬನ ಸ್ಥಿತಿ ಗಂಭೀರ
ರಿಪ್ಪನ್‌ಪೇಟೆ: ಕೋಡೂರಿನ ಮಂದಾರ ಹೋಟೆಲ್ ಎದುರುಗಡೆ ಇಂದು ಮಧ್ಯಾಹ್ನ 03 ಗಂಟೆ ಸುಮಾರಿಗೆ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತನನ್ನು ಹೆಚ್ ಕುನ್ನೂರು ನಿವಾಸಿ ಶೇಷಪ್ಪ ಎಂದು ಗುರುತಿಸಲಾಗಿದೆ. ಕೋಡೂರಿನಿಂದ ಹೊಸನಗರ ಕಡೆ ಹೋಗುವಾಗ ಮಂದಾರ ಹೋಟೆಲ್ ಬಳಿ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿದ್ದ ಇಬ್ಬರು ಸವಾರರಿದ್ದ ಪಲ್ಸರ್ ಬೈಕ್ ಗುದ್ದಿದ ಪರಿಣಾಮ ಸೂಪರ್ ಎಕ್ಸ್ಎಲ್ ಬೈಕ್ ನಲ್ಲಿ ತೆರಳುತ್ತಿದ್ದ ಶೇಷಪ್ಪನ…
ರಿಪ್ಪನ್‌ಪೇಟೆ ಸಮೀಪ ಭೀಕರ ಕಾರು ಅಪಘಾತ : ಇಬ್ಬರ ಸ್ಥಿತಿ ಗಂಭೀರ
ರಿಪ್ಪನ್‌ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಪದ್ಮಶ್ರೀ ಅನಾಥಾಶ್ರಮದ ಮುಂಭಾಗದ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮಣ್ಣಿನ ಧರೆಗೆ ಗುದ್ದಿದ ಪರಿಣಾಮ ಕಾರು ಎರಡು ಪಲ್ಟಿಯಾಗಿದೆ. ಶಿವಮೊಗ್ಗದಿಂದ ಚಕ್ರಾ-ಸಾವೇಹಕ್ಲು ಗೆ ತೆರಳುತಿದ್ದ ಕಾರು (KA-01 MJ 2476) ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಪರಿಣಾಮ ಕಾರು ಎರಡು ಪಲ್ಟಿಯಾಗಿದ್ದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಅಪಘಾತದ ರಭಸಕ್ಕೆ ಕಾರಿನಿಂದ ಹೊರಕ್ಕೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಪೆಟ್ಟಾಗಿದ್ದು,ಸ್ಥಿತಿ ಗಂಬೀರವಾಗಿದೆ.ಕಾರು ಚಾಲಕನ ಕೈ ಮುರಿತವಾಗಿದೆ.ಇನ್ನುಳಿದ…
ಬಂಕ್ ಬಾಲು ಹತ್ಯೆಗೆ ಪ್ರತೀಕಾರವಾಗಿ ಹಂದಿ ಅಣ್ಣಿ ಹತ್ಯೆ :ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿಗಳು
ಜುಲೈ14 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿಯ ವೃತ್ತದಲ್ಲಿ ಕುಖ್ಯಾತ ಪಾತಕಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ನಡುರಸ್ತೆಯಲ್ಲಿ ಅಣ್ಣಿಯನ್ನು ಹತ್ಯೆ ಮಾಡಿದ ಆರೋಪಿಗಳ ಶೋಧಕ್ಕೆ ಶಿವಮೊಗ್ಗ ಪೊಲೀಸರು 4 ತಂಡ ಕಟ್ಟಿಕೊಂಡು ಆಖಾಡಕ್ಕೆ ಇಳಿದಿದ್ದರು. ದುಷ್ಕರ್ಮಿಗಳ ಜಾಡು ಹಿಡಿದು ಶಿವಮೊಗ್ಗ ಪೊಲೀಸ್ರು ಬೆಂಗಳೂರು, ಕೊಡಗು, ಕಾರವಾರ ಸೇರಿದಂತೆ ಹಲವೇಡೆ ಶೋಧ ಸಹ ನಡೆಸುವ ವೇಳೆಯೇ 8 ಜನ ಕೊಲೆ ಆರೋಪಿಗಳು ಕಳೆದ ಸೋಮವಾರ ರಾತ್ರಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಶರಣಾಗಿದ್ದರು….
ಹಂದಿ ಅಣ್ಣಿ ಹತ್ಯೆ ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ : ಹಂದಿ ಅಣ್ಣಿ ಹಂತಕರ ಫೋಟೋಗಳು ವೈರಲ್
ಶಿವಮೊಗ್ಗ : ಹಂದಿ ಅಣ್ಣಿ ಕೊಲೆ ಪ್ರಕರದ 8 ಜನ ಆರೋಪಿಗಳನ್ನ ಇಂದು ಶಿವಮೊಗ್ಗದ ನ್ಯಾಯಾಲಯದ ಮುಂದೆ ಹಾಜರಿ ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. 5 ನೇ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಶಿವು ಕುಮಾರ್ ಜಿ.ಎನ್ ಮುಂದೆ ಇಂದು ಮಧ್ಯಾಹ್ನ ವಿನೋಬನಗರ ಪೊಲೀಸರು ಅಣ್ಣಿ ಹತ್ಯೆಯ ಆರೋಪಿಗಳನ್ನ ಹಾಜರಿಪಡಿಸಿದರು. ಆರೋಪಿಗಳನ್ನ ಒಂದು ವಾರ ಪೊಲೀಸ್ ಕಸ್ಟಡಿಗೆ ಮಾನ್ಯ ನ್ಯಾಯಾಧೀಶರು ನೀಡಿ ಆದೇಶಿಸಿದ್ದಾರೆ. ಜು. 27 ರಂದು ಮಧ್ಯಾಹ್ನ 3 ಗಂಟೆಗೆ…
ನಿಟ್ಟೂರು ಸಮೀಪದ ಹೊಳೆಯಲ್ಲಿ ಪುರುಷನ ಶವ ಪತ್ತೆ :
ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮರಕುಟುಕ ಗ್ರಾಮದ ಸೇತುವೆ ಬಳಿ ಪುರುಷನೊಬ್ಬನ ಶವ ಪತ್ತೆಯಾಗಿದೆ. ನಿಟ್ಟೂರು ಸಮೀಪದ ಮರಕುಟುಕ ಸೇತುವೆ ಬಳಿಯ ಹೊಳೆಯಲ್ಲಿ ಪುರುಷನೊಬ್ಬನ ಶವ ಗಿಡಗಂಟಿಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯವರು ಎಂದು ಶಂಕಿಸಲಾಗಿದ್ದು,ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ತೆರಳಿದ್ದು ತನಿಖೆ ಕೈಗೊಂಡಿದ್ದಾರೆ.
ರೌಡಿಶೀಟರ್ ಹಂದಿ ಅಣ್ಣಿ ಯ ಬರ್ಬರ ಹತ್ಯೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಎದುರು ಶರಣಾಗತಿ :
ಶಿವಮೊಗ್ಗದ ವಿನೋಬ ನಗರದಲ್ಲಿ ಹಾಡುಹಗಲೇ ರೌಡಿಶೀಟರ್ ಹಂದಿ ಅಣ್ಣಿ ಯ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಚಿಕ್ಕಮಗಳೂರಿನ ಎಸ್ ಪಿ ಎದುರಲ್ಲಿ ಶರಣಾಗಿದ್ದಾರೆ. 8 ಜನ ಆರೋಪಿಗಳು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮುಂದೆ ಶರಣಾಗಿರುವುದಾಗಿ ತಿಳಿದು ಬಂದಿದೆ.ತಡರಾತ್ರಿ 8 ಜನ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಬಂದು ಶರಣಾಗಿರುವುದಾಗಿ ತಿಳಿದು ಬಂದಿದೆ. ಎಸ್ಪಿ ಮುಂದೆ 8 ಜನರು ಆರೋಪಿಗಳು ಹಂದಿ ಅಣ್ಣಿಯನ್ನ ಕೊಲೆ ಮಾಡಿದವರು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ…
ತೀರ್ಥಹಳ್ಳಿ ತಾಲ್ಲೂಕಿನ ದರಲಗೋಡು “ನೆಸ್ಟ್ ಹೋಂ ಸ್ಟೇ” ಮೇಲೆ ದಾಳಿ : 9 ಜನರ ವಿರುದ್ಧ ಎಫ್ಐಆರ್ ದಾಖಲು !
ತೀರ್ಥಹಳ್ಳಿ : ತಾಲೂಕಿನ ದರಲಗೋಡಿನಲ್ಲಿರುವ ನೆಸ್ಟ್ ಹೋಮ್ ಸ್ಟೇಯಲ್ಲಿ ಜೂಜಾಡುತ್ತಿದ್ದವರ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 9 ಜನರಿದ್ದು ಅವರ ಮೊಬೈಲ್ ಮತ್ತು ಇಸ್ಪೀಟ್ ಆಟಕ್ಕೆ ಪಣವಾಗಿಟ್ಟಿದ್ದ 30,270 ರೂ. ಹಣವನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ದರಲಗೋಡಿನ ನೆಸ್ಟ್ ಹೋಮ್ ಸ್ಟೇಯಲ್ಲಿ ಇಸ್ಪೀಟ್ ಆಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ದಾಳಿ ನಡೆಸಲಾಗಿದೆ. ಪರವಾನಗಿ ಇಲ್ಲದೆ ಇಸ್ಪೀಟ್ ಆಟವಾಡಲು ಅವಕಾಶ ಮಾಡಿಕೊಟ್ಟ ಕಾರಣ…
ತೋಟದ ಕೆಲಸಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು ಸಾವು : ತಡರಾತ್ರಿ ಮೃತದೇಹ ಪತ್ತೆ
ತೋಟದ ಕೆಲಸಕ್ಕೆ ಹೋದ ರೈತ ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿಹೋಗಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ಮೃತ ದುರ್ಧೈವಿಯನ್ನು ಭವಾನಿ ಶಂಕರ್ ನಾರಾಯಣ(52) ಎಂದು ಗುರುತಿಸಲಾಗಿದೆ. ಸುಳುಗೋಡು ಗ್ರಾಮದ ಬಾಳೆಹಿತ್ತಲು ಹಳ್ಳದಲ್ಲಿ ಭವಾನಿ ರವರು ಎಂದಿನಂತೆ ಬೆಳಿಗ್ಗೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ ಆದರೆ ಸಂಜೆಯವರೆಗೂ ಮನೆಗೆ ಬಾರದಿದ್ದಾಗ ಕುಟುಂಬದವರು ಇವರನ್ನು ಹುಡುಕಲು ಪ್ರಾರಂಭಿಸಿದ್ದು ಎಷ್ಟೇ ಹುಡುಕಿದರೂ ಇವರ ಸುಳಿವು ಸಿಗಲಿಲ್ಲ.ತಡರಾತ್ರಿಯವರೆಗೂ ಹುಡುಕಿದಾಗ ರಾತ್ರಿ ಹನ್ನೊಂದರ ಸಮಯಕ್ಕೆ ಹಳ್ಳದಲ್ಲಿ ಇವರ ಮೃತದೇಹ…